ಲಡಾಖ್ನಲ್ಲಿ ಖಾದಿಯಿಂದ ತಯಾರಾದ ಅತಿ ದೊಡ್ಡ ಭಾರತ ಧ್ವಜ ಅನಾವರಣ -Vishwanews24
ಲಡಾಖ್ನಲ್ಲಿ ಖಾದಿಯಿಂದ ತಯಾರಾದ ಅತಿದೊಡ್ಡ ಭಾರತ ಧ್ವಜ ಅನಾವರಣ -Vishwanews24
ಲೇಹ್: ಸ್ವಾತಂತ್ರ್ಯದಿನದ ಅಮೃತಮಹೋತ್ಸವದ ಅಂಗವಾಗಿ ಹಾಗೂ ಇಂದಿನ ಗಾಂಧಿ ಜಯಂತಿಯ ಸಂದರ್ಭದಲ್ಲಿ ಖಾದಿಯಿಂದ ತಯಾರಾದ ಅತಿದೊಡ್ಡ ಭಾರತ ಧ್ವಜವನ್ನು ಲಡಾಖ್ನಲ್ಲಿ ಅನಾವರಣಗೊಳಿಸಲಾಯಿತು. 225 ಅಡಿ ಉದ್ದ ಮತ್ತು 150 ಅಡಿ ಅಗಲ ಇರುವ ತ್ರಿವರ್ಣ ಧ್ವಜವನ್ನು ಲೇಹ್ನ ವಿಶಾಲ ಶಿಖರವೊಂದರ ಮೇಲೆ ಸ್ಥಾಪಿಸಲಾಗಿದೆ.
ಈ ತ್ರಿವರ್ಣ ಧ್ವಜವು 1,000 ಕೆಜಿ ತೂಕ ಇದ್ದು, ಮುಂಬೈನ ಖಾದಿ ಡೈಯರ್ಸ್ ಅಂಡ್ ಪ್ರಿಂಟರ್ಸ್ನವರು ಇದನ್ನು ತಯಾರಿಸಿದ್ದಾರೆ. ಲೇಹ್ನಲ್ಲಿ ಕಾರ್ಯನಿರ್ವಹಿಸುವ 57 ಇಂಜಿನಿಯರ್ಸ್ ರೆಜಿಮೆಂಟ್ನವರು ಇದನ್ನು ಮುಂಬೈನಿಂದ ಲಡಾಖ್ಗೆ ತಂದು ಶಿಖರ ಮೇಲೆ ಸ್ಥಾಪಿಸುವ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.
ಈ ಧ್ವಜದ ಅನಾವರಣಕ್ಕಾಗಿ ಇಂದು ಬೆಳಿಗ್ಗೆ ಲೇಹ್ ಪಟ್ಟಣದ ಫೈರ್ ಅಂಡ್ ಫ್ಯೂರಿ ಕೋರ್ ಪ್ರಾಂಗಣದಲ್ಲಿ ವಿಶೇಷ ವೇದಿಕೆ ನಿರ್ಮಿಸಲಾಗಿತ್ತು. ಲಡಾಖ್ನ ಉಪರಾಜ್ಯಪಾಲ ಆರ್.ಕೆ.ಮಾಥುರ್ ಅವರು ವೇದಿಕೆಯಿಂದ ಬಟನ್ ಒತ್ತಿ ಈ ಧ್ವಜದ ವಿದ್ಯುಕ್ತ ಅನಾವರಣ ಮಾಡಿದರು. ವಾಯುಸೇನೆಯ ಹೆಲಿಕಾಪ್ಟರ್ಗಳಿಂದ ಧ್ವಜದ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು. ಭಾರತೀಯ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಣೆ ಮತ್ತು ಹಿರಿಯ ಸೇನಾಧಿಕಾರಿಗಳು ಭಾಗವಹಿಸಿದರು.
Worlds biggest #Khadi #NationalFlag hoisted in #Leh. This flag is 225 feet long and 150 feet wide. Weight 1000 kg#GandhiJayanti #MahatmaGandhi pic.twitter.com/5ep3tyVYiD
— DD News (@DDNewslive) October 2, 2021
