Featured

ಲಡಾಖ್​ನಲ್ಲಿ ಖಾದಿಯಿಂದ ತಯಾರಾದ ಅತಿ ದೊಡ್ಡ ಭಾರತ ಧ್ವಜ ಅನಾವರಣ -Vishwanews24

ಲಡಾಖ್​ನಲ್ಲಿ ಖಾದಿಯಿಂದ ತಯಾರಾದ ಅತಿದೊಡ್ಡ ಭಾರತ ಧ್ವಜ ಅನಾವರಣ -Vishwanews24

ಲೇಹ್​​: ಸ್ವಾತಂತ್ರ್ಯದಿನದ ಅಮೃತಮಹೋತ್ಸವದ ಅಂಗವಾಗಿ ಹಾಗೂ ಇಂದಿನ ಗಾಂಧಿ ಜಯಂತಿಯ ಸಂದರ್ಭದಲ್ಲಿ ಖಾದಿಯಿಂದ ತಯಾರಾದ ಅತಿದೊಡ್ಡ ಭಾರತ ಧ್ವಜವನ್ನು ಲಡಾಖ್​ನಲ್ಲಿ ಅನಾವರಣಗೊಳಿಸಲಾಯಿತು. 225 ಅಡಿ ಉದ್ದ ಮತ್ತು 150 ಅಡಿ ಅಗಲ ಇರುವ ತ್ರಿವರ್ಣ ಧ್ವಜವನ್ನು ಲೇಹ್​ನ ವಿಶಾಲ ಶಿಖರವೊಂದರ ಮೇಲೆ ಸ್ಥಾಪಿಸಲಾಗಿದೆ.

ಈ ತ್ರಿವರ್ಣ ಧ್ವಜವು 1,000 ಕೆಜಿ ತೂಕ ಇದ್ದು, ಮುಂಬೈನ ಖಾದಿ ಡೈಯರ್ಸ್​ ಅಂಡ್​ ಪ್ರಿಂಟರ್ಸ್​ನವರು ಇದನ್ನು ತಯಾರಿಸಿದ್ದಾರೆ. ಲೇಹ್​ನಲ್ಲಿ ಕಾರ್ಯನಿರ್ವಹಿಸುವ 57 ಇಂಜಿನಿಯರ್ಸ್​ ರೆಜಿಮೆಂಟ್​ನವರು ಇದನ್ನು ಮುಂಬೈನಿಂದ ಲಡಾಖ್​ಗೆ ತಂದು ಶಿಖರ ಮೇಲೆ ಸ್ಥಾಪಿಸುವ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.

ಈ ಧ್ವಜದ ಅನಾವರಣಕ್ಕಾಗಿ ಇಂದು ಬೆಳಿಗ್ಗೆ ಲೇಹ್​ ಪಟ್ಟಣದ ಫೈರ್​ ಅಂಡ್ ಫ್ಯೂರಿ ಕೋರ್​ ಪ್ರಾಂಗಣದಲ್ಲಿ ವಿಶೇಷ ವೇದಿಕೆ ನಿರ್ಮಿಸಲಾಗಿತ್ತು. ಲಡಾಖ್​ನ ಉಪರಾಜ್ಯಪಾಲ ಆರ್​.ಕೆ.ಮಾಥುರ್​ ಅವರು ವೇದಿಕೆಯಿಂದ ಬಟನ್​ ಒತ್ತಿ ಈ ಧ್ವಜದ ವಿದ್ಯುಕ್ತ ಅನಾವರಣ ಮಾಡಿದರು. ವಾಯುಸೇನೆಯ ಹೆಲಿಕಾಪ್ಟರ್​ಗಳಿಂದ ಧ್ವಜದ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು. ಭಾರತೀಯ ಸೇನಾ ಮುಖ್ಯಸ್ಥ ಮನೋಜ್​ ಮುಕುಂದ್​ ನರವಣೆ ಮತ್ತು ಹಿರಿಯ ಸೇನಾಧಿಕಾರಿಗಳು ಭಾಗವಹಿಸಿದರು.

ದೇಶದಲ್ಲಿ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ..ಬಿಜೆಪಿಯನ್ನು ಎದುರಿಸುವ ಶಕ್ತಿಯನ್ನು ಕಾಂಗ್ರೆಸ್‌ ಕಳೆದುಕೊಂಡಿದೆ : ಎಚ್‌.ಡಿ. ಕುಮಾರಸ್ವಾಮಿ -Vishwanews24

Vishwa News 24

Recent Posts

ಮೃತ ಮಹಿಳೆಯರ ಬೆತ್ತಲೆ ಫೋಟೋ ತೆಗೆದು ವಿಕೃತಿ : ವರದಿ ಕೇಳಿದ ರಾಜ್ಯ ಮಹಿಳಾ ಆಯೋಗ – vishwanews24

ಮೃತ ಮಹಿಳೆಯರ ಬೆತ್ತಲೆ ಫೋಟೋ ತೆಗೆದು ವಿಕೃತಿ : ವರದಿ ಕೇಳಿದ ರಾಜ್ಯ ಮಹಿಳಾ ಆಯೋಗ ಬೆಂಗಳೂರು: ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ…

1 day ago

ಉಡುಪಿ: ಕೇಂದ್ರ ಸರಕಾರದ ಜನವಿರೋಧಿ ನೀತಿ ವಿರುದ್ಧ ಜಿಲ್ಲಾ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ – vishwanews24

ಉಡುಪಿ: ಕೇಂದ್ರ ಸರಕಾರದ ಜನವಿರೋಧಿ ನೀತಿ ವಿರುದ್ಧ ಜಿಲ್ಲಾ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ ಉಡುಪಿ: ಕೇಂದ್ರ ಸರಕಾರದ ಜನವಿರೋಧಿ…

1 day ago

ಮಂಗಳೂರು: ಗಾಯಗೊಂಡ ತಾಯಿ, ಮಗುವನ್ನು ಆಸ್ಪತ್ರೆಗೆ ಸಾಗಿಸಿದ ಬಸ್ ಸಿಬ್ಬಂದಿ; ಮಾನವೀಯತೆಗೆ ಶ್ಲಾಘನೆ – vishwanews24

ಮಂಗಳೂರು: ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದ ತಾಯಿ-ಮಗುವಿನ ರಕ್ಷಣೆಗೆ ಧಾವಿಸಿದ ಸಿಟಿ ಬಸ್ ಸಿಬ್ಬಂದಿ.. ಪ್ರಯಾಣಿಕರನ್ನು ಬಸ್ಸಿನಿಂದ ಇಳಿಸಿ ಗಾಯಗೊಂಡ ತಾಯಿ,…

2 days ago

ಮಂಗಳೂರು – ಸೂರತ್ ವಿಶೇಷ ರೈಲು ಇನ್ನು ಮುಂದೆ ವಾರಕ್ಕೆ ಎರಡು ದಿನ ನಿರಂತರ ಸಂಚಾರ – vishwanews24

ಮಂಗಳೂರು- ಸೂರತ್ ವಿಶೇಷ ರೈಲು ಇನ್ನು ಮುಂದೆ ವಾರಕ್ಕೆ ಎರಡು ದಿನ ನಿರಂತರ ಸಂಚಾರ ಉಡುಪಿ: ಮಂಗಳೂರು- ಸೂರತ್ ನಡುವೆ…

2 days ago

ಕೊಂಕಣ ರೈಲ್ವೇ: ಟಿಕೆಟ್ ತಪಾಸಣೆ ಕಾರ್ಯಾಚರಣೆ; 2025-26ರಲ್ಲಿ 27.68 ಕೋ.ರೂ. ದಂಡ ವಸೂಲಿ – vishwanews24

ಕೊಂಕಣ ರೈಲ್ವೇ: ಟಿಕೆಟ್ ತಪಾಸಣೆ ಕಾರ್ಯಾಚರಣೆ; 2025-26ರಲ್ಲಿ 27.68 ಕೋ.ರೂ. ದಂಡ ವಸೂಲಿ ಉಡುಪಿ: ಟಿಕೆಟ್ ಇಲ್ಲದೆ ಹಾಗೂ ಅನಧಿಕೃತವಾಗಿ…

2 days ago

ಯುವಕ ನಾಪತ್ತೆ : ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು – vishwanews24

ಯುವಕ ನಾಪತ್ತೆ; ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಂಗಳೂರು: 23 ವರ್ಷದ ಯುವಕನೊಬ್ಬ ನಾಪತ್ತೆಯಾಗಿರುವ ಕುರಿತು ಕೊಣಾಜೆ ಪೊಲೀಸ್…

2 days ago