ಲವ್ ಜಿಹಾದ್ ಮತ್ತು ಗೋಹತ್ಯೆ ವಿರುದ್ಧ ಮಸೂದೆಗಳನ್ನು ತರಲು ರಾಜ್ಯ ಸರ್ಕಾರ ಪ್ರಕ್ರಿಯೆಯಲ್ಲಿದೆ : ಡಿಸಿಎಂ ಅಶ್ವಥ್ ನಾರಾಯಣ -Vishwanews24

Featured, ರಾಜ್ಯ ನ್ಯೂಸ್

ಲವ್ ಜಿಹಾದ್ ಮತ್ತು ಗೋಹತ್ಯೆ ವಿರುದ್ಧ ಮಸೂದೆಗಳನ್ನು ತರಲು ರಾಜ್ಯ ಸರ್ಕಾರ ಪ್ರಕ್ರಿಯೆಯಲ್ಲಿದೆ : ಡಿಸಿಎಂ ಅಶ್ವಥ್ ನಾರಾಯಣ -Vishwanews24

ಬೆಂಗಳೂರುಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯಾನಾಥ್ ಅವರ ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ ಮತ್ತು ಲವ್ ಜಿಹಾದ್ ಮಸೂದೆಗಳ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿರುವಂತೆಯೇ ಇತ್ತ ಕರ್ನಾಟಕದಲ್ಲೂ ಇಂತಹ ಮಸೂದೆ ತರಲು ಸರ್ಕಾರ ಚಿಂತನೆಯಲ್ಲಿ  ತೊಡಗಿದೆ.

ಈ ಬಗ್ಗೆ ಸ್ವತಃ ಡಿಸಿಎಂ ಡಾ.ಎನ್.ಎನ್. ಅಶ್ವಥ್ ನಾರಾಯಣ ಹೇಳಿದ್ದು, ಎಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅವರು, ‘ಲವ್ ಜಿಹಾದ್ ಮತ್ತು ಗೋಹತ್ಯೆ ವಿರುದ್ಧ ಮಸೂದೆಗಳನ್ನು ತರಲು ರಾಜ್ಯ ಸರ್ಕಾರ ಪ್ರಕ್ರಿಯೆಯಲ್ಲಿದೆ. ಅನೇಕ ರಾಜ್ಯಗಳು ಈಗಾಗಲೇ ಮಸೂದೆಗಳನ್ನು  ತಂದಿವೆ. ನಾವು ‘ಲವ್ ಜಿಹಾದ್’ ವಿರುದ್ಧ ಮಸೂದೆಗಳನ್ನು ತರಲು ಮತ್ತು ಗೋಹತ್ಯೆಗೆ ನಿಷೇಧ ಹೇರುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಹೇಳಿದರು.

ಮುಂಬರುವ ಶಾಸಕಾಂಗ ಅಧಿವೇಶನದಲ್ಲಿ ಕರ್ನಾಟಕದ ಬಿಜೆಪಿ ಸರ್ಕಾರ ಗೋಹತ್ಯೆ ವಿರುದ್ಧ ಮಸೂದೆಯನ್ನು ಮಂಡಿಸಲು ಸಿದ್ಧವಾಗಿದೆ ಎಂದು ವರದಿಯಾಗಿದೆ. ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿತ್ತು.