ಲಾಲಾಜಿಗೆ ಊರಿನ ಅಭಿವೃದ್ಧಿಯ ಕಾಳಜಿಗಿಂತ ತನ್ನ ಬಂಡವಾಳ ಗಟ್ಟಿ ಮಾಡಿಕೊಳ್ಳುವುದೇ ಟೆಂಕ್ಷನ್:ಸೊರಕೆ ಆರೋಪ:vishwanews24

Featured, ಉಡುಪಿ

ಲಾಲಾಜಿಗೆ ಊರಿನ ಅಭಿವೃದ್ಧಿಯ ಕಾಳಜಿಗಿಂತ ತನ್ನ ಬಂಡವಾಳ ಗಟ್ಟಿ ಮಾಡಿಕೊಳ್ಳುವುದೇ ಟೆಂಕ್ಷನ್:ಸೊರಕೆ ಆರೋಪ

ಕಾಮಗಾರಿಯ ಶಿಲಾನ್ಯಾಸ ಆಗಬೇಕಾದರೆ ಫಸ್ಟ್ ಕಮಿಷನ್ ಪೇಮೆಂಟ್ ಲಾಲಾಜಿಗೆ ಕೊಡಬೇಕು

ಕಾಪು: ಮಾಜಿ ಸಚಿವ ಇಲ್ಲಿನ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಕಾಪುವಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಇಲ್ಲಿನ‌ ಹಾಲಿ ಬಿಜೆಪಿ ಶಾಸಕ ಲಾಲಾಜಿ ಆರ್ ಮೆಂಡನ್ ವಿರುದ್ಧ ತೀಕ್ಷ್ಣವಾಗಿ ಗುಡುಗಿದರು.

ಲಾಲಾಜಿ ಮೆಂಡನ್ ಅವರು ಕಾಪು ವಿಧಾನಸಭಾ ಕ್ಷೇತ್ರಕ್ಕೆ ಕಿಂಚಿತ್ತು ಪೈಸೆಯ ಅನುದಾನ ತರುವಲ್ಲಿ ವಿಫಲವಾಗಿದ್ದಾರೆ ಕಾಂಗ್ರೆಸ್ ಅವಧಿಯಲ್ಲಿ ಮಂಜೂರಾತಿಯಾಗಿದ್ದ ಕಾಮಗಾರಿಗಳನ್ನು ಕೂಡ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಯಾವುದೇ ಟೆಂಡರ್ ಪ್ರಕ್ರಿಯೆ ಮುಗಿದು ಶಿಲನ್ಯಾಸ ಆಗಬೇಕಾದರೆ ಫಸ್ಟ್ ಕಮಿಷನ್ ಪೇಮೆಂಟ್ ಲಾಲಾಜಿಯವರ ಖಾತೆ ಸೇರಬೇಕು ಅದಾದ ನಂತರವೇ ಆ ಭಾಗದಲ್ಲಿ ಶಿಲನ್ಯಾಸವಾಗುತ್ತೆ ಎಂದರು.


ಮಣಿಪುರದಿಂದ ಕುಡಿಯುವ ನೀರಿನ ಯೋಜನೆಗೆ ಮೊದಲು ಅಡ್ಡಿಪಡಿಸಿದವರು ಲಾಲಾಜು ಮತ್ತು ಸಂಘಟಿಕರು ಆದರೆ ಇವತ್ತು ಅದೇ ಯೋಜನೆಯನ್ನು ತನ್ನದೆಂದು ಬಿಂಬಿಸಿಕೊಳ್ಳುತ್ತಿರುವುದು ಉತ್ತರನ ಪೌರುಷವೇ ಸರಿ, ಬೆಳಕು ಪಾಲಿಟೆಕ್ನಿಕ್ ಕಾಲೇಜ್ ಮತ್ತು ಪಿಜಿ ಸೈನ್ಸ್ ಸೆಂಟರ್ ಗೆ ಲಾಲಾಜಿಯವರ ಅವಧಿಯಲ್ಲಿ ಒಂದು ಪೈಸೆಯೂ ಕೂಡ ಬಿಡುಗಡೆಯಾಗಿಲ್ಲ ಮತ್ತು ಅವರಿಗೆ ಸರಿಯಾದ ಈ ಬಗ್ಗೆ ಮಾಹಿತಿಯೂ ಇಲ್ಲ ಸುಳ್ಳು ಸುಳ್ಳಾಗಿ ಅನುದಾನ ಬಿಡುಗಡೆ ಮಾಡಿರುವ ಬಗ್ಗೆ ಪಟ್ಟಿ ಬಿಡುಗಡೆ ಮಾಡುವ ಮುಖಾಂತರ ಚುನಾವಣೆಯ ಸಮಯದಲ್ಲಿ ಜನರನ್ನ ಯಾಮಾರಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಕಾಪುವಿನಲ್ಲಿ ಯಾವುದೇ ಕಾಮಗಾರಿ ನಡೆದರೂ ಕೂಡ ಅದು ಈ ಗ್ರಾಮದ ಮತ್ತು ಊರಿನ ಅಭಿವೃದ್ಧಿಯ ಬಗ್ಗೆ ಅಲ್ಲ ಏನಿದ್ದರೂ ಲಾಲಾಜಿಯವರ ಸ್ವಂತ ಬಂಡವಾಳವನ್ನು ಜಾಸ್ತಿ ಮಾಡಿಕೊಳ್ಳಲು ಎಂದು ಅವರು ಗಂಭೀರ ಆರೋಪ ಮಾಡಿದರು.

Leave a Reply