ಲೈಂಗಿಕ ದೌರ್ಜನ್ಯ ಪ್ರಕರಣ :: ಜುಲೈ 8ರವರೆಗೆ ಪ್ರಜ್ವಲ್ ರೇವಣ್ಣನಿಗೆ ನ್ಯಾಯಾಂಗ ಬಂಧನ – vishwanews24
ಲೈಂಗಿಕ ದೌರ್ಜನ್ಯ ಪ್ರಕರಣ :: ಜುಲೈ 8ರವರೆಗೆ ಪ್ರಜ್ವಲ್ ರೇವಣ್ಣನಿಗೆ ನ್ಯಾಯಾಂಗ ಬಂಧನ
ಬೆಂಗಳೂರು : ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣದ ಮೂರನೇ ಕೇಸ್ ನಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪೊಲೀಸ್ ಕಸ್ಟಡಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಇಂದು ಮತ್ತೆ ಕೋರ್ಟ್ ಮುಂದೆ ಹಾಜರು ಪಡಿಸಲಾಯಿತು. ವಿಚಾರಣೆ ನಡೆಸಿದ ಕೋರ್ಟ್ ಜುಲೈ 8ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ 42ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ.
ಮೂರನೇ ಅತ್ಯಾಚಾರ ಪ್ರಕರಣದ ವಿಚಾರಣೆ ಇದಾಗಿದ್ದು, ಈ ಕೇಸ್ನಲ್ಲಿ ಎಸ್ಐಟಿ ಅಧಿಕಾರಿಗಳ 5 ದಿನಗಳ ಕಸ್ಟಡಿ ಮುಕ್ತಾಯ ಹಿನ್ನೆಲೆ ಕೋರ್ಟ್ ಗೆ ಹಾಜರುಪಡಿಸಿದರು. ಜಿಲ್ಲಾ ಪಂಚಾಯತ್ ಸದಸ್ಯೆ ನೀಡಿದ ಅತ್ಯಾಚಾರ ಪ್ರಕರಣ ಪ್ರಜ್ವಲ್ರ ಮೂರನೇ ಪ್ರಕರಣವಾಗಿದೆ.
ಸಲಿಂಗಕಾಮ ಪ್ರಕರಣ : ಸೂರಜ್ ರೇವಣ್ಣ 8 ದಿನ ಸಿಐಡಿ ಕಸ್ಟಡಿಗೆ – vishwanews24
ಈಗಾಗಲೇ 2ನೇ ಕೇಸ್ನಲ್ಲಿ 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಪ್ರಜ್ವಲ್ ಇದ್ದಾನೆ. ಈ ಪ್ರಕರಣದಲ್ಲಿ ಜಾಮೀನು ಕೋರಿ ಪ್ರಜ್ವಲ್ ಅರ್ಜಿ ಸಲ್ಲಿಸಿದ್ದು ಜೂನ್ 24ಕ್ಕೆ ಕೋರ್ಟ್ ವಿಚಾರಣೆ ನಡೆಯಲಿದೆ. ಅಂದರೆ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಲ್ಲಿ ನಡೆಯಲಿದ. ಜೂನ್ 19ರಂದು ಎಸ್ಐಟಿ ಮೂರನೇ ಪ್ರಕರಣದಲ್ಲಿ ವಶಕ್ಕೆ ಪಡೆದಿತ್ತು, ಇಂದು ಮೂರನೇ ಪ್ರಕರಣದಲ್ಲಿ ನ್ಯಾಯಾಂಗ ಬಂಧನವಾಗಿದ್ದು, ಈ ಪ್ರಕರಣದಲ್ಲಿ ಜುಲೈ 8ವರೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿರಲಿದ್ದಾರೆ.
ಉಡುಪಿ: ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ – ನೆರೆ ರಾಜ್ಯಗಳಿಂದ ಮೀನು ಖರೀದಿ ; ಹೆಚ್ಚಿನ ಬೇಡಿಕೆ – vishwanews24
