ದಕ್ಷಿಣ ಕನ್ನಡ

ಲೋಕಸಭಾ ಚುನಾವಣಾ ಸರ್ವೆ ಮಂಗಳೂರಿನಲ್ಲಿ ಬ್ರಿಜೇಶ್ ಚೌಟನನ್ನ ಹಿಂದಿಕ್ಕಿದ ಅರುಣ್ ಕುಮಾರ್ ಪುತ್ತಿಲ : vishwanews24

ಲೋಕಸಭಾ ಚುನಾವಣಾ ಸರ್ವೆ ಮಂಗಳೂರಿನಲ್ಲಿ ಬ್ರಿಜೇಶ್ ಚೌಟನನ್ನ ಹಿಂದಿಕ್ಕಿದ ಅರುಣ್ ಕುಮಾರ್ ಪುತ್ತಿಲ : vishwanews24

ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಚುನಾವಣೆಯ ಚಟುವಟಿಕೆಗಳು ಗರಿಗೆದರಿದೆ ಈ ನಡುವೆ ಮಂಗಳೂರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿಗಳ ಪಟ್ಟಿಯು ದೊಡ್ಡದಾಗಿಯೇ ಬೆಳೆಯುತ್ತಿದೆ ಈ ಪರಿಣಾಮವಾಗಿ ಖಾಸಗಿ ಸಂಸ್ಥೆಗಳು ಚುನಾವಣಾ ಪೂರ್ವ ಅಭ್ಯರ್ಥಿ ಆಯ್ಕೆಯ ಸರ್ವೆಗಳನ್ನು ನಡೆಸಲು ಆರಂಭ ಮಾಡಿದೆ ಈ ಸರ್ವೆಯ ಪ್ರಕಾರ ಮೊದಲ 56000 ಸ್ಯಾಂಪಲ್ ಗಳನ್ನು ಪಡೆಯಲಾಗಿದ್ದು ಆ ಸ್ಯಾಂಪಲ್ ನಲ್ಲಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಮೂರನೇ ಸ್ಥಾನ ಎರಡನೇ ಸ್ಥಾನ ಬ್ರಿಜೇಶ್ ಚೌಟ ಮೊದಲ ಸ್ಥಾನದಲ್ಲಿ ಅರುಣ್ ಕುಮಾರ್ ಪುತ್ತಿಲ ಇದ್ದಾರೆ ಎಂದು ಬಲ್ಲಮೂಲಗಳ ಮಾಹಿತಿ ಲಭ್ಯವಾಗಿದೆ.

ದಕ್ಷಿಣ ಕನ್ನಡದಲ್ಲಿ ಈಗಾಗಲೇ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಾರ್ಯಕರ್ತರ ನಡುವೆ ಅಸಮಾಧಾನ ಹೊರ ಬಿದ್ದಿದ್ದು ಈ ಬಾರಿ ದಕ್ಷಿಣ ಕನ್ನಡದಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕಾದರೆ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನೀಡಬಾರದು ಎಂಬ ಅಭಿಯಾನವು ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ ಸದ್ಯ ಹೈ ಕಮಾಂಡ್ ಲೆವೆಲ್ ಗೆ ಪತ್ರ ಬರೆಯುವ ಚಟುವಟಿಕೆಯು ಕೂಡ ನಡೆಯುತ್ತಿದೆ ಎನ್ನಲಾಗುತ್ತಿದೆ.

ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕೂಡ ಈ ಬಾರಿ ಬಿಜೆಪಿ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದು ಸದ್ಯ ಕರ್ನಾಟಕ ರಾಜ್ಯ ಬಿಜೆಪಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ದ.ಕದಲ್ಲಿ ಕಾರ್ಯಕರ್ತರೊಂದಿಗೆ ಬೆರೆತು ಅವರ ಸಮಸ್ಯೆಗಳೊಂದಿಗೆ ಅವರ ಕಷ್ಟಗಳೊಂದಿಗೆ ಸ್ಪಂದಿಸಿ ನಿರಂತರ ಚಟುವಟಿಕೆ ನಡೆಸುತ್ತಿರುವ ಚೌಟ ಅವರಿಗೂ ಕೂಡ ಟಿಕೆಟ್ ಸಿಗುವ ಲಕ್ಷಣಗಳು ಇದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹೊರ ಬರುತ್ತಿದ್ದಂತೆ ನಳಿನ್ ಕುಮಾರ್ ಅವರ ಪರವಾದ ಅಭಿಮಾನಿಗಳು ಚೌಟ ವಿರುದ್ಧ ತಿರುಗಿ ಬಿದ್ದಿದ್ದಾರೆ.

ನಳಿನ್ ಕುಮಾರ್ ಕಟೀಲ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರ ಆಪ್ತನಾಗಿದ್ದು ಈ ಬಾರಿಯ ಚುನಾವಣೆಯಲ್ಲಿ ದಕ್ಷಿಣ ಕನ್ನಡದಲ್ಲಿ ಟಿಕೆಟ್ ಪ್ರಯತ್ನ ನಡೆಯುತ್ತಿದೆ ಎನ್ನಲಾಗುತ್ತಿದೆ, ಆದರೆ ಹತ್ತು ಹಲವಾರು ವರ್ಷಗಳಿಂದ ಭಾರತೀಯ ಜನತಾ ಪಾರ್ಟಿ ಹಾಗೂ ಹಿಂದೂಪರ ಸಂಘಟನೆಯಲ್ಲಿ ಸಕ್ರಿಯವಾಗಿರುವ ಅರುಣ್ ಕುಮಾರ್ ಪುತ್ತಿಲ ಅವರ ಪರ ದಕ್ಷಿಣ ಕನ್ನಡದಲ್ಲಿ ಜೋರಾಗಿಯೇ ಗಾಳಿ ಬೀಸುತ್ತಿದ್ದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬ್ಯಾಟ್ ಚಿಹ್ನೆಯ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪುತ್ತಿಲ ಅವರು ಕೆಲವೇ ಕೆಲವು ಸಾವಿರ ಮತಗಳ ಅಂತರದಿಂದ ಸೋತಿದ್ದರು, ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವಾರು ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ಅರುಣ್ ಕುಮಾರ್ ಪುತ್ತಿಲ ಈ ಬಾರಿ ಮತ್ತೊಮ್ಮೆ ಲೋಕಸಭಾ ಚುನಾವಣೆಗೆ ತಯಾರಿ ನಡೆಸಿದಂತಿದೆ ಎಂಬ ಮಾಹಿತಿ ಹೊರಬಿದ್ದಿದೆ ಈ ಅನ್ವಯ ಖಾಸಗಿ ಸಂಸ್ಥೆಗಳು ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡದಲ್ಲಿ ಸೂಕ್ತ ಅಭ್ಯರ್ಥಿ ಯಾರೆಂಬ ಸರ್ವೆ ಕಾರ್ಯ ಆರಂಭ ಮಾಡಿದ್ದು ಈ ಸರ್ವೆಯಲ್ಲಿ ಈಗಾಗಲೇ ಅರುಣ್ ಕುಮಾರ್ ಪುತ್ತಿಲ ಅವರ ಹೆಸರು ಮುಂಚೂಣಿಯಲ್ಲಿದೆ ಎಂಬ ಮಾಹಿತಿ ಸ್ಪೋಟಗೊಂಡಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾತ್ರವಲ್ಲದೆ ಹತ್ತು ಹಲವಾರು ಸಾಮಾಜಿಕ ಹಿಂದೂ ಪರ ಸಂಘಟನೆಗಳಲ್ಲಿ ಮತ್ತು ನಿರಂತರ ಕಾರ್ಯಕರ್ತರ ಸಂಪರ್ಕದಲ್ಲಿದ್ದುಕೊಂಡು ಪುತ್ತಿಲ ಪರಿವಾರ ಸಂಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಪರ ಕಾರ್ಯ ನಿರ್ವಹಿಸುತ್ತಿದೆ ಎನ್ನುವ ಮಾತು ಮಹಿಳಾ ಮತದಾರರಲ್ಲಿ ಕೇಳಿ ಬರುತ್ತಿದೆ ‌.

ಈ ನಡುವೆ ಹಾಲಿ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ವಿರುದ್ಧ ಜೋರಾಗಿಯೇ ಈ ಬಾರಿಯ ಟಿಕೆಟ್ ನಲ್ಲಿ ಬೇಡ ಅನ್ನುವ ಗಾಳಿ ಬೀಸಲಾರಂಭಿಸಿದ್ದು ಇದು ಬಿಸಿಗಾಳಿಯಾಗಿ ಕಟೀಲ್ ಅವರಿಗೆ ಪರಿಣಮಿಸಬಹುದು ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಯಾವುದೇ ಚುನಾವಣೆ ನಡೆದರೂ ಕೂಡ ಜಾತಿ ಲೆಕ್ಕಾಚಾರ ಇಲ್ಲ ಎಂಬ ರಾಗ ಹಾಡಿದ ನಾಯಕರುಗಳು ಕಡೆಗೆ ಬಂದು ನಿಲ್ಲುವುದು ಜಾತಿ ಸಮಾಜ ಸಂಘಗಳ ಕಾಲ ಬಡದಲ್ಲಿ ಹಾಗಾಗಿ ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದಲ್ಲಿ ಬಂಟ ಸಮಾಜಕ್ಕೆ ಪ್ರಾತಿನಿಧ್ಯ ನೀಡಿದ್ದು ಈ ಬಾರಿಯೂ ಕೂಡ ಬಂಟ ಸಮಾಜಕ್ಕೆ ಪ್ರಾತಿನಿಧ್ಯ ನೀಡುವರೇ ಎಂಬುದು ಯಕ್ಷಪ್ರಶ್ನೆಯಾಗಿದೆ

ನಳಿನ್ ಕುಮಾರ್ ಕಟೀಲ್ ಹಾಗೂ ಬ್ರಿಜೇಶ್ ಚೌಟ ಬಂಟ ಸಮಾಜದ, ಅರುಣ್ ಕುಮಾರ್ ಪುತ್ತಿಲ ಬ್ರಾಹ್ಮಣ ಸಮಾಜದ ಪ್ರತಿನಿಧಿ ಆದರೆ ಈ ಬಾರಿ ಅವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡ ಉಲ್ಟಾಪಲ್ಟ ಆಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ . ಉಡುಪಿ ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಬಂಟ ಸಮಾಜದ ನಾಯಕನಿಗೆ ಟಿಕೆಟ್ ನೀಡುವ ಸಾಧ್ಯತೆಯೂ ಹೆಚ್ಚಿದೆ , ಒಂದು ವೇಳೆ ಈ ರೀತಿ ನಡೆದರೆ ದಕ್ಷಿಣ ಕನ್ನಡದಲ್ಲಿ ಅರುಣ್ ಕುಮಾರ್ ಪುತ್ತಿಲ ಅಥವಾ ಬೇರೆ ಕಾರ್ಯಕರ್ತರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ.

ಸದ್ಯ ಬಲ್ಲಮೂಲಗಳ ಮಾಹಿತಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಗೆ ಮಹಿಳಾ ಪ್ರಾತಿನಿಧ್ಯ ನೀಡಲು ಕೂಡ ಒತ್ತಾಯ ಹೆಚ್ಚುತ್ತಿದೆ ಎನ್ನುವ ಮಾಹಿತಿ ಹೊರ ಬಿದ್ದಿದ್ದು ಈಗಾಗಲೇ ಚುನಾವಣಾ ಕಾರ್ಯ ತಂಡದ ಚಟುವಟಿಕೆಯು ಕೂಡ ರಣ-ರಣ ದಂತೆ ದಕ ದಲ್ಲಿ ಕೆಲಸ ಮಾಡುತ್ತಿದೆ ಮಹಿಳಾ ಆಕಾಂಕ್ಷಿಗಳ ಪಟ್ಟಿಯನ್ನು ಕೂಡ ತಯಾರು ಮಾಡುವಲ್ಲಿ ಸರ್ವೇ ತಂಡ ಕಾರ್ಯನಿರ್ವಹಿಸುತ್ತಿದ್ದು ನಳಿನ್ ಕುಮಾರ್ ಅವರಿಗೆ ಟಿಕೆಟ್ ಕೈಜಾರುವ ಎಲ್ಲಾ ಲಕ್ಷಣಗಳು ಇದೆ ಎನ್ನಲಾಗಿದೆ.

ಸದ್ಯ ಕರ್ನಾಟಕ ರಾಜ್ಯ ಬಿಜೆಪಿಯಲ್ಲಿ ಜವಾಬ್ದಾರಿ ಅಲಂಕರಿಸಿದ ಚೌಟನಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ ಅನ್ನುವ ಮಾತು ಜನಸಾಮಾನ್ಯರಲ್ಲಿ ಕೇಳಿ ಬಂದರೂ ಕೂಡ ಸರ್ವೆ ಹಾಗೂ ಪಾರ್ಟಿಯ ಆಂತರಿಕವಾಗಿ ಯಾವ ನಿರ್ಧಾರ ಕೈಗೊಳ್ಳುತ್ತೆ ಎಂಬುದನ್ನು ಕಾದು ನೋಡಬೇಕಾಗಿದೆ.

ಇನ್ನೊಂದು ಕಡೆ ಸತ್ಯಜಿತ್‌ ಸುರತ್ಕಲ್ ಕೂಡ ಉಮೇದುದಾರಿಕೆ ತೋರ್ಪಡಿಸಿದ್ದು ಸಂಘದ ಹಿರಿಯರು ಭಾಜಪ ನಾಯಕರ ನಡೆಯತ್ತ ಸತ್ಯಜಿತ್‌ ಭವಿಷ್ಯ ನಿರ್ಧಾರವಾಗಲಿದೆ

ಒಟ್ಟಾರೆ ಸಂಘ- ಪರಿವಾರದ- ಹಿಂದುತ್ವದ ಫ್ಯಾಕ್ಟರಿ ಅನ್ನುವ ಹೆಗ್ಗಳಿಕೆ ಇರುವ ದಕ್ಷಿಣ ಕನ್ನಡದಲ್ಲಿ ಉತ್ತರ ಪ್ರದೇಶದ ಯೋಗಿಯಂತಹ ನಾಯಕನ ಅವಶ್ಯಕತೆ ಇದೇಯೆ ಹೊರತು ಛತ್ರಿ ಹಿಡಿದುಕೊಂಡು ತಿರುಗುವ ದಾಸಯ್ಯನವರ ಅನಿವಾರ್ಯ ಅಗತ್ಯತೆ ಇಲ್ಲವಾಗಿದೆಂಬುದು ಫ್ಯಾಕ್ಟರಿಯಲ್ಲಿ ಪ್ರೊಡಕ್ಷನ್ ಆಗಿರುವ ಕಾರ್ಯಕರ್ತರ ಮನದಾಳದ ಮಾತಾಗಿದೆ.
ಬ್ಯೂರೋ ರಿಪೋರ್ಟ್ :ಪುರುಷೋತ್ತಮ ಸಾಲಿಯಾನ್
ವಿಶ್ವನ್ಯೂಸ್24

Vishwa News 24

Recent Posts

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ 4 ತಿಂಗಳ ಕಾಲ ನಿಷೇಧ – vishwanews24

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…

3 hours ago

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ – vishwanews24

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್‌ 21 ರಂದು ನೀಟ್‌–ಯುಜಿ  ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…

3 hours ago

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ – vishwanews24

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್…

23 hours ago

ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು ಹೊರತು ಕೇಸರಿ ಶಾಲಿಗೆ ಅವಕಾಶ ಇಲ್ಲ : ಸಿಎಂ ಸ್ಪಷ್ಟನೆ – vishwanews24

ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…

1 day ago

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ತಮಿಳುನಾಡು ಸರ್ಕಾರ ಆದೇಶ – vishwanews24

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ :  ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…

1 day ago

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ – vishwanews24

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…

1 day ago