ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡತನ ಹಾಗೂ ಹಸಿವಿನಿಂದ ಮುಕ್ತಗೊಳಿಸಲು ದೇಶದಲ್ಲಿನ ಪ್ರತಿಯೊಬ್ಬ ಬಡವರಿಗೂ ಕನಿಷ್ಠ ಆದಾಯದ ಭದ್ರತೆ ಒದಗಿಸಲಾಗುವುದು, ಇದು ಕಾಂಗ್ರೆಸ್ ಪಕ್ಷದ ಭರವಸೆ : ರಾಹುಲ್ ಗಾಂಧಿ – Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ ಲೋಕಸಭಾ ಚುನಾವಣೆಯಲ್ಲಿ  ಗೆದ್ದು  ಕಾಂಗ್ರೆಸ್  ಅಧಿಕಾರಕ್ಕೆ ಬಂದರೆ ಬಡವರಿಗೆ ಕನಿಷ್ಠ ಆದಾಯ ಖಾತರಿ ಯೋಜನೆ ಅನುಷ್ಠಾನ ಮಾಡುವುದಾಗಿ ಕಾಂಗ್ರೆಸ್‌ ಆಧ್ಯಕ್ಷ ರಾಹುಲ್‌ ಗಾಂಧಿ ಅವರು ಛತ್ತೀಸಗಡದಲ್ಲಿ ಘೋಷಿಸಿದ್ದಾರೆ.

ಇದೊಂದು ಅಭೂತಪೂರ್ವ ಕ್ರಮವಾಗಲಿದೆ. ಜಗತ್ತಿನ ಯಾವ ದೇಶವೂ ಇಂತಹುದೊಂದು ಕಾರ್ಯಕ್ರಮವನ್ನು ಜಾರಿ ಮಾಡಿಲ್ಲ. ಆದರೆ, ಕಾಂಗ್ರೆಸ್‌ ಸರ್ಕಾರ ಬಂದರೆ ಈ ಯೋಜನೆಯನ್ನು ಜಾರಿಗೆ ತರಲಿದೆ’  ದೇಶದಲ್ಲಿನ ಎಲ್ಲಾ ಬಡವರಿಗೂ ಕನಿಷ್ಠ ಆದಾಯದ ಭದ್ರತೆ ಒದಗಿಸಲಾಗುವುದು  ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

15 ವರ್ಷದ ನಂತರ ಛತ್ತೀಸ್ ಗಡದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ನೆರವಾದ ರೈತರಿಗೆ ಅಭಿನಂದನೆ ಸಲ್ಲಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಚಾರಿತ್ರಿಕ ನಿರ್ಧಾರ ಕೈಗೊಳ್ಳಲಿದೆ.

ದೇಶದಲ್ಲಿನ ಬಡ ಜನರು ಹಸಿವು ಮುಕ್ತರಾಗಲಿದ್ದಾರೆ, ಬಡತನ ಹಾಗೂ ಹಸಿವಿನಿಂದ ಮುಕ್ತಗೊಳಿಸಲು ದೇಶದಲ್ಲಿನ  ಪ್ರತಿಯೊಬ್ಬ ಬಡವರಿಗೂ ಕನಿಷ್ಠ ಆದಾಯದ ಭದ್ರತೆ  ಒದಗಿಸಲಾಗುವುದು. ಇದು ಕಾಂಗ್ರೆಸ್ ಪಕ್ಷದ ಭರವಸೆ  ಎಂದಿದ್ದಾರೆ.