ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗೆಲುವು ನಿಶ್ಚಿತ : ವಿವೇಕ್ ಓಬೇರಾಯ್ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗೆಲುವು ನಿಶ್ಚಿತ ಎಂದು ನಟ ವಿವೇಕ್ ಓಬೇರಾಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೆಹಲಿಯ ಇಂಡಿಯಾ ಗೇಟ್ ಬಳಿಯ ‘ಏಳು ಕ್ಷೇತ್ರ ಮೋದಿಗೆ ನೀಡಿ’ ಎಂಬ ಬಿಜೆಪಿ ಅಭಿಯಾನದಲ್ಲಿ ವಿವೇಕ್ ಓಬೇರಾಯ್ ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ವಿವೇಕ್, ಭಾರತವನ್ನು ಆಳಿದ ಬಹುತೇಕ ರಾಜರು ಅಥವಾ ವಿದೇಶಿಗರು ನಮ್ಮ ದೇಶವನ್ನು ದೋಚುವ ಕೆಲಸ ಮಾಡಿದ್ದಾರೆ. ಇದೀಗ ದೇಶದ ಪ್ರತಿಯೊಬ್ಬ ನಾಗರಿಕರನು ಚೌಕಿದಾರ್ ಆಗಿದ್ದಾರೆ. ಮತ್ತೊಮ್ಮೆ ದೇಶವನ್ನು ಲೂಟಿ ಮಾಡುವವರ ಕೈಗೆ ನೀಡಲ್ಲ. ಮೋದಿ ಅವರ ಗೆಲುವು ನಿಶ್ಚಿತವಾಗಿದ್ದು, ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ ಎಂದರು.

ಪಿಎಂ ನರೇಂದ್ರ ಮೋದಿ ಚಿತ್ರದಲ್ಲಿ ಪ್ರಧಾನಿ ಪಾತ್ರದಲ್ಲಿ ವಿವೇಕ್ ಓಬೇರಾಯ್ ನಟಿಸಿದ್ದಾರೆ. ಏಪ್ರಿಲ್ 11ರಂದು ಸಿನಿಮಾ ಬಿಡುಗಡೆಯಾಗಲು ಸಿದ್ಧಗೊಂಡಿತ್ತು. ಆದರೆ ಚುನಾವಣಾ ಆಯೋಗ ಸಿನಿಮಾ ಬಿಡುಗಡೆ ತಡೆ ನೀಡಿತ್ತು. ಚುನಾವಣಾ ಫಲಿತಾಂಶ ಮರುದಿನ ಮೇ 24ರಂದು ಚಿತ್ರ ಬಿಡುಗಡೆಯಾಗಲಿದೆ.