Featured

ಲೋಕಸಭಾ ಚುನಾವಣೆ ಗೆಲ್ಲಲು ಸದ್ದಿಲ್ಲದೆ ನಡೆಯುತ್ತಿದೆ ಚಾಣಕ್ಯ ತಂತ್ರ ;ಯಡಿಯೂರಪ್ಪಗೆ ಲೋಕಸಭಾ ಚುನಾವಣಾ ಪ್ರಚಾರದ ಜವಾಬ್ದಾರಿ

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಶುರುವಾಗಿದೆ.ಬಲಿಷ್ಠ ಅಭ್ಯರ್ಥಿ ಆಯ್ಕೆಗೆ ಬಿಜೆಪಿ ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ.
ಈ ಚಟುವಟಿಕೆಯಲ್ಲಿ ಬಿಜೆಪಿ ಒಂದು ಹೆಜ್ಜೆ ಮುಂದಿದೆ .

ಕರ್ನಾಟಕ ರಾಜಕೀಯ ಕಣಕ್ಕೆ ನೆರವಾಗಿ ದುಮುಕಿದ ಷಾ,
ಈ ನಡುವೆ ಅಮಿತ್ ಶಾ ಮತ್ತೊಂದು ತಾಣಕ್ಕೆ ತಂತ್ರವನ್ನು ಹೇಳಿದ್ದಾರೆ.ಕರ್ನಾಟಕದಲ್ಲಿ ಹೇಗಾದರೂ ಮಾಡಿ ಇಪ್ಪತ್ತುಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಲೆಕ್ಕಾಚಾರವನ್ನು ಹಾಕಿಕೊಂಡಿ ದ್ದಾರಂತೆ.ಹಾಗಾಗಿಯೇ ಚುನಾವಣಾ ಉಸ್ತುವಾರಿಯನ್ನು ಯಡಿಯೂರಪ್ಪ ಅವರ ಕೈಗೆ ನೀಡಿದ್ದಾರೆ.
ಬೇರೆ ಬೇರೆ ರಾಜ್ಯಗಳಲ್ಲಿ ಮಾಡಿದ ಚುನಾವಣಾ ತಂತ್ರಗಳನ್ನು ಕರ್ನಾಟಕದಲ್ಲೂ ಶಾ ಮಾಡಲಿದ್ದಾರೆ.ಈಗಾಗಲೇ ತನ್ನ ತಂಡದ ಮೂಲಕ ಒಂದು ಹಂತದ ಸರ್ವೆಯನ್ನು ಕೂಡ ನಡೆಸಿದ್ದಾರಂತೆ. ಈ ಸಮೀಕ್ಷೆಯ ಪ್ರಕಾರ ಹಲವು ಕ್ಷೇತ್ರದ ಅಭ್ಯರ್ಥಿಗಳ ಬದಲಾವಣೆಯಾಗುವ ಸಾಧ್ಯತೆ ಇದೆ.ಗೆಲ್ಲಲು ಯೋಗ್ಯವಾದ ಅಭ್ಯರ್ಥಿಗಳಿಗೆ ಟಿಕೇಟ್ ಕೊಡಲು ಷಾ ನಿರ್ಧರಿಸಿದ್ದಾರಂತೆ.ಇದು ಹಾಲಿ ಎಂಪಿಗಳ ನಿದ್ದೆಗೆಡಿಸಿದೆ.ಆದರೆ ಅಮಿತ್ ಶಾಗೆ ವಿರುದ್ಧವಾಗಿ ನಡೆದುಕೊಳ್ಳು ವವರು ಪಕ್ಷದಲ್ಲಿ ಯಾರೂ ಇಲ್ಲ. ಶಾ ಲೆಕ್ಕಾಚಾರ ಯಾವತ್ತೂ ಪಕ್ಷವಾಗಿ ಇರುತ್ತದೆ ಎಂಬುದು ಬಿಜೆಪಿ ನಾಯಕರ ನಂಬಿಕೆ. ಇದು ಹಲವಾರು ಬಾರಿ ಯಶಸ್ವಿ ಯಾಗಿದೆ ಕೂಡ.ಆದರೆ ಮುಂದಿನ ಲೋಕಸಭಾ ಚುನಾವಣೆ ಯಲ್ಲಿ ಅಮಿತ್ ಅವರ ಈ ತಂತ್ರ ಕರ್ನಾಟಕದಲ್ಲಿ ಯಾವ ರೀತಿ ಯಶಸ್ವಿಯಾಗುತ್ತದೆ ಎಂದು ಕಾದು ನೋಡಬೇಕಿದೆ..

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ನಾಯಕರನ್ನು ಪಕ್ಕಕ್ಕಿಟ್ಟು ರಾಷ್ಟ್ರ ನಾಯಕರೇ ಚುನಾವಣಾ ಪ್ರಚಾರದ ಹೊಣೆ ಹೊತ್ತಿದ್ದರು. ಆದರೆ, ಅದರಿಂದ ಬಿಜೆಪಿಗೆ ಲಾಭಕ್ಕಿಂತ ಹೆಚ್ಚಾಗಿ ಹೊಡೆತವೇ ಬಿದ್ದಿತು. ಇದರಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ಹೈಕಮಾಂಡ್​ ಈ ಬಾರಿಯ ಲೋಕಸಭಾ ಚುನಾವಣೆಯ ಕರ್ನಾಟಕ ಪ್ರಚಾರದ ಸಂಪೂರ್ಣ ಹೊಣೆಗಾರಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರಿಗೆ ವಹಿಸುವ ಮೂಲಕ ಫುಲ್ ಪವರ್ ನೀಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಈಗಾಗಲೇ ಚುನಾವಣೆ ಪ್ರಚಾರದ ಬಗ್ಗೆ ಶಾಸಕರೊಂದಿಗೆ ಚರ್ಚೆ ನಡೆಸಿದ್ದು, ಸದ್ಯದಲ್ಲೇ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳ ಹುಡುಕಾಟ ಆರಂಭಿಸಿರುವ ಯಡಿಯೂರಪ್ಪ 28 ಲೋಕ ಸಭೆ ಕ್ಷೇತ್ರಗಳಲ್ಲೂ ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕಲಿದ್ದಾರೆ. ಲೋಕಸಭೆಗೆ ರಾಜ್ಯದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅಧಿಕಾರವನ್ನು ಕೂಡ ಯಡಿಯೂರಪ್ಪನವರಿಗೆ ವಹಿಸಲಾಗಿದೆ. ಹೀಗಾಗಿ, ಚುನಾವಣೆ ಹತ್ತಿರ ಇರುವಾಗ ರಾಷ್ಟ್ರ ಬಿಜೆಪಿ ನಾಯಕರ ತಂಡ ರಾಜ್ಯಕ್ಕೆ ಬಂದು ಪ್ರಚಾರದಲ್ಲಿ ಭಾಗಿಯಾಗಲಿದೆ. ಅಲ್ಲಿವರೆಗೆ ಯಡಿಯೂರಪ್ಪ ನಾಯಕತ್ವದಲ್ಲಿಯೇ ಸಂಘಟನೆ ನಡೆಯಲಿದೆ.

Vishwa News 24

Recent Posts

ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ – vishwanews24

ಕೌಟುಂಬಿಕ ಕಲಹ : ಕೊಲೆಯಲ್ಲಿ  ಅಂತ್ಯ - ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ ಮೈಸೂರು: ಸಣ್ಣ…

25 minutes ago

ಲಡಾಖ್‌ನಲ್ಲಿ 4.1 ತೀವ್ರತೆಯ ಭೂಕಂಪ – vishwanews24

ಲಡಾಖ್‌ನಲ್ಲಿ 4.1 ತೀವ್ರತೆಯ ಭೂಕಂಪ ಲೇಹ್: ಗುರುವಾರ ಮುಂಜಾನೆ ಲಡಾಖ್‌ನಲ್ಲಿ4.1 ತೀವ್ರತೆಯ ಭೂಕಂಪ  ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ…

1 hour ago

ಬೆಂಗಳೂರಲ್ಲಿ ವರುಣನ ಆರ್ಭಟ : ಮೇ 1ರವರೆಗೂ ಮಳೆ ಮುನ್ಸೂಚನೆ – vishwanews24

ಬೆಂಗಳೂರಲ್ಲಿ ವರುಣನ ಆರ್ಭಟ : ಮೇ 1ರವರೆಗೂ ಮಳೆ ಮುನ್ಸೂಚನೆ ಬೆಂಗಳೂರು: ಬುಧವಾರ ಬೆಂಗಳೂರಿನಾದ್ಯಂತ ಸುರಿದ ಆಲಿಕಲ್ಲು ಮಳೆಗೆ 10…

1 hour ago

ಹಾಸನ: ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ಗೆ ವಧು ಕರೆತರಲು  ತೆರಳುತ್ತಿದ್ದ ವೇಳೆ ಅಪಘಾತ ; ವರ ಸಾವು – vishwanews24

ಹಾಸನ: ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ಗೆ ವಧು ಕರೆತರಲು  ತೆರಳುತ್ತಿದ್ದ ವೇಳೆ ಅಪಘಾತ ; ವರ ಸಾವು ಹಾಸನ: ಕೆಲವೇ…

1 hour ago

ಪುತ್ತೂರು: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸವಾರ ಸಾವು, ಯುವತಿಗೆ ಗಂಭೀರ ಗಾಯ – vishwanews24

ಪುತ್ತೂರು: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸವಾರ ಸಾವು, ಯುವತಿಗೆ ಗಂಭೀರ ಗಾಯ ಪುತ್ತೂರು: ಉಪ್ಪಿನಂಗಡಿಯ ಬಜತ್ತೂರು ಗ್ರಾಮದ ನೀರಕಟ್ಟೆ…

1 hour ago

ಸುದೀಪ್‌ ಶೆಟ್ಟಿ ಆತ್ಮಹತ್ಯೆ ಪ್ರಕರಣ : ಪತ್ನಿ ಸೌಮ್ಯ ಶೆಟ್ಟಿಗೆ ಜಾಮೀನು ನಿರಾಕರಣೆ – vishwanews24

ಸುದೀಪ್‌ ಶೆಟ್ಟಿ ಆತ್ಮಹತ್ಯೆ ಪ್ರಕರಣ : ಪತ್ನಿ ಸೌಮ್ಯ ಶೆಟ್ಟಿಗೆ ಜಾಮೀನು ನಿರಾಕರಣೆ ಉಡುಪಿ : ಸುದೀಪ್‌ ಶೆಟ್ಟಿ ಆತ್ಮಹತ್ಯೆ…

2 hours ago