ಲೋಕಸಭಾ ಚುನಾವಣೆ ನಂತರ ಭಾರತ-ಪಾಕ್ ಉತ್ತಮ ಬಾಂಧವ್ಯ : ಇಮ್ರಾನ್ ಖಾನ್ – Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್
ಇಸ್ಲಾಮಾಬಾದ್ ನಲ್ಲಿ ಮಾತನಾಡಿದ ಇಮ್ರಾನ್ ಖಾನ್ ಅವರು, ಪಾಕಿಸ್ತಾನ ಈಗಾಗಲೇ ಭಾರತದೊಂದಿಗೆ ಶಾಂತಿ-ಸೌಹಾರ್ಧ ಸಂಬಂಧ ಬೆಸೆಯುವ ಸಂಬಂಧ ಮೊದಲ ಹೆಜ್ಜೆ ಇಟ್ಟಿದೆ. ಭವಿಷ್ಯದಲ್ಲಿ ಭಾರತದ ನೂತನ ಸರ್ಕಾರದೊಂದಿಗೆ ಈ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಹೇಳಿದ್ದಾರೆ.

ಎಲ್ಲಾ ನೆರೆ ರಾಷ್ಟ್ರಗಳೊಂದಿಗೆ ಪಾಕ್​ ಉತ್ತರ ಸಂಬಂಧ ಹೊಂದಿದೆ. ಶಾಂತಿಯುತ ಪಾಕಿಸ್ತಾನ ಶ್ರೀಮಂತಿಕೆಯತ್ತ ಹೆಜ್ಜೆ ಹಾಕಲಿದೆ ಎಂದರು.

‘ಪಾಕಿಸ್ತಾನ ತನ್ನ ನೆರೆಹೊರೆಯ ದೇಶಗಳೊಂದಿಗೆ ಉತ್ತಮ ಸೌಹಾರ್ಧ ಸಂಬಂಧ ಹೊಂದಲು ಬಯಸುತ್ತದೆ. ಅದೇ ರೀತಿ ಭಾರತದಲ್ಲಿನ ಸಾರ್ವತ್ರಿಕ ಚುನಾವಣೆ ಮುಕ್ತಾಯದ ಬಳಿಕ ನೂತನ ಸರ್ಕಾರದೊಂದಿಗೆ ಈ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಬೇಕು ಎಂದು ನಾವು ಬಯಸುತ್ತೇವೆ ಎಂದು ಇಮ್ರಾನ್ ಖಾನ್ ಹೇಳಿದರು.

ಪುಲ್ವಾಮ ದಾಳಿ, ಆನಂತರ ಭಾರತದ ಏರ್​ಸ್ಟ್ರೈಕ್​ನಿಂದಾಗಿ ಪಾಕ್​ ಹಾಗೂ ಭಾರತದ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಉಗ್ರವಾದವನ್ನು ಧಮನ ಮಾಡುವಂತೆ   ಕೇಂದ್ರ ಸರ್ಕಾರ ಪಾಕ್ ಪ್ರಧಾನಿ ಮೇಲೆ ಒತ್ತಡ ಹೇರುತ್ತಲೇ ಇದೆ. ಪಾಕ್ ಸಹ ನೆಪಗಳನ್ನು ಹೇಳುತ್ತಾ ಜಾರಿಕೊಳ್ಳುವ ಯತ್ನ ನಡೆಸುತ್ತಿದೆ.  ಹೀಗಿದ್ದೂ, ಪಾಕ್ ಪ್ರಧಾನಿ ಹೊಸ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.