ಲೋಕಸಭೆಯಲ್ಲಿ ಇಂದು ಮೋದಿ ಸರ್ಕಾರದ ವಿರುದ್ಧ ನಡೆಯಲಿದೆ ಅವಿಶ್ವಾಸ ಮಂಡನೆ
ಇಂದು ಕೇಂದ್ರದ ಮೋದಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ಮಂಡನೆ ಮಾಡಲಿದ್ದು ಇದರಲ್ಲಿ ಮೋದಿ ಸರ್ಕಾರ ತಮ್ಮ ಸರ್ಕಾರಕ್ಕಿರುವ ಬಹುಮತವನ್ನು ಸಾಬೀತು ಪಡಿಸಲೇಬೇಕಾಗಿದೆ. ಮೋದಿ ಸರ್ಕಾರ ಬಹುಮತ ಸಾಬೀತು ಮಾಡೋದು ಗ್ಯಾರಂಟಿ.
ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳು ತಿರುಗಿಬಿದ್ದಿವೆಯಲ್ಲ ಅಷ್ಟಕ್ಕೂ ಮೋದಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆಯೇನು? ಮೋದಿ ಸರ್ಕಾರದ ಬಳಿ ಈಗಿರುವ ಸಂಸದರ ಸಂಖ್ಯೆಯೆಷ್ಟು? ವಿರೋಧ ಪಕ್ಷಗಳ ಸಂಖ್ಯಾ ಬಲ ಮೋದಿ ಸರ್ಕಾರದ ಸಂಖ್ಯಾಬಲಕ್ಕಿಂತ ಹೆಚ್ಚಿದೆಯಾ? ಮೋದಿ ಸರ್ಕಾರ ಅವಿಶ್ವಾಸ ಮತದಲ್ಲಿ ಸೋಲುತ್ತಾ? ಮೋದಿ ಸರ್ಕಾರ ಉರುಳುತ್ತಾ? ಉಳಿಯುತ್ತಾ?
ಇಂದು ನಡೆಯಲಿರುವ ಅವಿಶ್ವಾಸ ಮಂಡನೆಯಲ್ಲಿ ನಾಳೆ ಒಟ್ಟು 535 ಸಂಸದರು ವೋಟ್ ಮಾಡಬೇಕಾಗಿದೆ. ಸಂಸತ್ ನಲ್ಲಿ ಒಟ್ಟು 545 ಸೀಟುಗಳಿದ್ದು 9 ಕ್ಷೇತ್ರಗಳಲ್ಲಿ ಉಪಚುನಾವಣೆಗಳು ನಡೆಯಬೇಕಿರುವ ಕಾರಣ ಹಾಗು ಲೋಕಸಭಾ ಸ್ಪೀಕರ್ ರವರ 1 ಸ್ಥಾನ ಅಂದರೆ ಒಟ್ಟು 10 ಸ್ಥಾನಗಳನ್ನ ಬಿಟ್ಟು 535 ಸಂಖ್ಯಾಬಲ ಹೊಂದಿರುವ ಲೋಕಸಭೆಯಲ್ಲಿ ಬಿಜೆಪಿ ತನ್ನ ಸರ್ಕಾರಕ್ಕಿರುವ ಬಹುಮತ ಅಂದರೆ 268 ಮ್ಯಾಜಿಕ್ ನಂಬರ್ ತೋರಿಸಲೇಬೇಕಾಗಿದೆ.
ಬಿಜೆಪಿ ಅವಿಶ್ವಾಸ ಮತದ ನಿರ್ಣಯದ ವಿರುದ್ಧ ಪಾಸ್ ಆಗಬೇಕಾದರೆ 268 ಮ್ಯಾಜಿಕ್ ನಂಬರ್ ತಲುಪಬೇಕು ಆದರೆ ಬಿಜೆಪಿ ಪಕ್ಷವೊಂದರದ್ದೇ ಸದ್ಯ 273 ಸಂಸದರಿದ್ದಾರೆ. ಅಂದರೆ ಬಹುಮತಕ್ಕಿಂತ ಬಿಜೆಪಿ 5 ಜನ ಹೆಚ್ಚು ಸಂಸದರನ್ನೇ ಹೊಂದಿದ್ದಾರೆ.
