ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಕರುಣಿಸುವ ಹಾಸನದ ಅಧಿದೇವತೆ ಶ್ರೀ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲನ್ನು ಗುರುವಾರ ಮಧ್ಯಾಹ್ನ 12:28ಕ್ಕೆ ಶಾಸ್ರೋಕ್ತವಾಗಿ ತೆರೆಯಲಾಯಿತು.
‘ಹಾಸನಾಂಬೆಗೆ ಜೈ.. ತಾಯಿಗೆ ಉಘ ಉಘ.. ಎಂಬ ಭಕ್ತರ ಭಕ್ತಿಪೂರ್ವಕ ಜಯಘೋಷಗಳ ನಡುವೆ ದೇವಿಯ ದರ್ಶನೋತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು.
ಅರಸು ವಂಶಸ್ಥರಿಂದ ಸಾಂಪ್ರದಾಯಿಕ ಪೂಜೆ ನೆರವೇರಿತು. ಪೂರ್ವ ಸಂಪ್ರದಾಯದಂತೆ ತಳವಾರ ವಂಶಸ್ಥರಾದ ನಂಜರಾಜು ಅವರು ವಿಶೇಷ ಪೂಜೆ ಸಲ್ಲಿಸಿ, ವಂಶಪಾರಂಪರ್ಯವಾಗಿ ಬಂದಿರುವ ಪವಿತ್ರ ಖಡ್ಗದಿಂದ ಗೊನೆಕಟ್ಟಿದ್ದ ಬಾಳೆ ಕಂಬವನ್ನು ಕಡಿಯುವ ಮೂಲಕ ದರ್ಶನಕ್ಕೆ ಅನುವು ಮಾಡಿಕೊಟ್ಟರು.
ಬಾಳೆ ಕಂಬ ಕಡಿಯುತ್ತಿದ್ದಂತೆಯೇ ಗರ್ಭಗುಡಿಯ ಬಾಗಿಲನ್ನು ತೆರೆಯಲಾಯಿತು. ಬಾಗಿಲು ತೆರೆದ ಮೊದಲ ದಿನದಂದು ಯಾವುದೇ ಆಭರಣ ಹಾಗೂ ವಸ್ತ್ರಾಲಂಕಾರಗಳೆಲ್ಲದ ದೇವಿಯ ‘ವಿಶ್ವರೂಪ ದರ್ಶನ’ ಪಡೆದ ಮಠಾಧೀಶರು, ಗಣ್ಯರು ಹಾಗೂ ಜನಪ್ರತಿನಿಧಿಗಳು ಪುನೀತಭಾವ ಅನುಭವಿಸಿದರು.
SSLC, ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು…
ಪ್ರತಿ ಲೀಟರ್ ಹಾಲಿನ ದರ 8 ರೂ. ಹೆಚ್ಚಳ : ನ.1 ರಿಂದಲೇ ಜಾರಿಗೆ ಬೆಂಗಳೂರು: ರಾಜ್ಯ ಸರ್ಕಾರ ಕೊನೆಗೂ…
ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ ; ಇಬ್ಬರ ಬಂಧನ ಉಡುಪಿ: ಮದುವೆ…
ನ.1ರಿಂದ 30ರವರೆಗೆ ಬಿಜೆಪಿಯಿಂದ ರಾಜ್ಯಾದ್ಯಂತ 'ಅರಾಜಕತೆ ಹಟಾವೋ' ಅಭಿಯಾನ ಚಿಕ್ಕಮಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ…
ಸೌಜನ್ಯ ಪ್ರಕರಣದ SIT ಮುಖ್ಯಸ್ಥ ಸ್ಥಾನದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಶಶಿಕುಮಾರ್ ಮನವಿ ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ…
ಪುತ್ತೂರು: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಪುತ್ತೂರು: ಅಪ್ರಾಪ್ತ ಬಾಲಕಿಯನ್ನು…