ನವದೆಹಲಿ: ದೆಹಲಿಯಲ್ಲಿ ಸೋಮವಾರ ರಾತ್ರಿಯಿಂದ ಆರು ದಿನಗಳ ಕಾಲ ಲಾಕ್ಡೌನ್ ಘೋಷಿಸಿದ ನಂತರ, ಸಾವಿರಾರು ಕಾರ್ಮಿಕರು ಸಂಕಷ್ಟದಲ್ಲಿ ಸಿಲುಕಿದ್ದು, ಕೇಂದ್ರ ಸರ್ಕಾರ ಅವರೆಲ್ಲರಿಗೂ ಆರ್ಥಿಕ ನೆರವು ನೀಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ಲಾಕ್ಡೌನ್ ಘೋಷಣೆಯಾಗುತ್ತಿದ್ದಂತೆ ಸಾವಿರಾರು ಮಂದಿ ವಲಸೆ ಕಾರ್ಮಿಕರು ಸೋಮವಾರ ತಮ್ಮ ತಮ್ಮ ಊರುಗಳಿಗೆ ತೆರಳಲು ದೆಹಲಿಯ ಆನಂದ ವಿಹಾರ ಬಸ್ ಟರ್ಮಿನಲ್ ಬಳಿ ಜಮಾಯಿಸಿದ್ದರು. ಕೆಲಸವೂ ಇಲ್ಲದೇ, ದುಡಿಮೆಯಿಲ್ಲದೇ ಸಂಕಷ್ಟ ಎದುರಿಸುತ್ತಿರುವ ಈ ವಲಸೆ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಹಣ ಹಾಕುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಚಿಕ್ಕಮಗಳೂರು : 2012 ರಲ್ಲಿ ತಯಾರಾದ ಗ್ಲುಕೋಸ್ , 2021ರ ಲೇಬಲ್ ಅಂಟಿಸಿ ಮತ್ತೆ ಮಾರಾಟ -Vishwanews24
‘ಒಂದು ಕಡೆ ಕಾರ್ಮಿಕರು ವಲಸೆ ಹೊರಟಿದ್ದರೆ, ಮತ್ತೊಂದೆಡೆ ಸರ್ಕಾರವು ಜನರೇ ಕೊರೊನಾ ಸೋಂಕನ್ನು ಹರಡುತ್ತಿದ್ದಾರೆ ಎಂದು ದೂರುತ್ತಿದೆ. ಇಂಥ ಸರ್ಕಾರದಿಂದ ಸಾರ್ವಜನಿಕರಿಗೆ ನೆರವು ಸಿಗಲು ಹೇಗೆ ಸಾಧ್ಯ‘ ಎಂದು ರಾಹುಲ್ ಗಾಂಧಿ ಟ್ವಿಟರ್ನಲ್ಲಿ ಪ್ರಶ್ನಿಸಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ‘ ಕೋವಿಡ್ ಸ್ಥಿತಿ ಭಯ ಹುಟ್ಟಿಸುತ್ತಿದೆ. ಇದು ಕೇಂದ್ರ ಸರ್ಕಾರ ಸೂಕ್ತ ಸಮಯದಲ್ಲಿ ಲಾಕ್ಡೌನ್ನಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಆದರೆ ವಲಸೆ ಕಾರ್ಮಿಕರು ಮತ್ತೆ ನಗರಗಳನ್ನು ಬಿಟ್ಟು ತಮ್ಮೂರಿನತ್ತ ಹೊರಟಿದ್ದಾರೆ‘ ಎಂದು ಟ್ವೀಟ್ ಮಾಡಿದ್ದಾರೆ.
‘ನಿಮ್ಮ ಪ್ಲಾನ್ ಇದೇನಾ ? ಸರ್ಕಾರದ ನೀತಿಗಳು ಪ್ರತಿಯೊಬ್ಬರನ್ನೂ ರಕ್ಷಿಸುವಂತಿರಬೇಕು. ಸದ್ಯ ಬಡವರು, ಕಾರ್ಮಿಕರು ಮತ್ತು ಬೀದಿಬದಿ ವ್ಯಾಪಾರಿಗಳಿಗೆ ಅಗತ್ಯವಾಗಿ ಆರ್ಥಿಕ ನೆರವು ಬೇಕಾಗಿದೆ. ದಯವಿಟ್ಟು, ಅವರಿಗೆ ನೆರವಾಗಿ‘ ಎಂದು ಪ್ರಿಯಾಂಕಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಮೂರು ತಿಂಗಳ ಅವಧಿಗೆ ಉಚಿತ ಪಡಿತರ ಘೋಷಿಸಿದ ಮಧ್ಯಪ್ರದೇಶ ಸರ್ಕಾರ -Vishwanews24
ಅಯೋಧ್ಯೆ ರಾಮಮಂದಿರ ಹುಂಡಿ ಹಗರಣ : ಎಲ್ಲಾ ಹಗರಣಗಳ ಸತ್ಯಾಂಶ ಹೊರಗೆ ಬರಬೇಕು : ವಿನಯಕುಮಾರ್ ಸೊರಕೆ ಆಗ್ರಹ ಉಡುಪಿ:…
ಉಡುಪಿ ಜಿಲ್ಲೆಯಾದ್ಯಂತ ಎಎನ್ಪಿಆರ್ ಕ್ಯಾಮೆರಾ ಅಳವಡಿಕೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 40-70ರಷ್ಟು ಇಳಿಕೆ ಉಡುಪಿ: ಸ್ವಯಂ ಚಾಲಿತ…
ಹೆಬ್ರಿ: ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕ ನಿಷೇಧ ಹೆಬ್ರಿ: ಪುವಾಸಿ ತಾಣವಾದ ಕೂಡು ಫಾಲ್ಸ್ ಪುವೇಶಕ್ಕೆ ಅರಣ್ಯ…
ಉಡುಪಿ : ವ್ಯಕ್ತಿ ನಾಪತ್ತೆ ಉಡುಪಿ : ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಕುಶಾಲ್ ಶೆಟ್ಟಿ (55) ಎಂಬ…
ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನ : ಅತ್ಯಾಚಾರ , ಕೊಲೆ ಪ್ರಕರಣದ ಆರೋಪಿ ಎನ್ಕೌಂಟರ್ನಲ್ಲಿ ಹತ್ಯೆ ಕೊಲ್ಕತ್ತಾ: ಪಶ್ಚಿಮ…
ಉಡುಪಿ : ಜು. 10 ರಂದು ನೇರ ಸಂದರ್ಶನ ಉಡುಪಿ : ಉಡುಪಿಯ ವಿ.ಪಿ ನಗರದ ಸುಧಾ ಫರ್ನೀರ್ಸ್ ಬಿಲ್ಡಿಂಗ್s…