ವಾಣಿಜ್ಯ ಬಳಕೆಯ ಸಿಲಿಂಡರ್‌ ದರ 30 ರೂ. ಇಳಿಕೆ – vishwanews24

Featured, ರಾಷ್ಟ್ರ ನ್ಯೂಸ್

ವಾಣಿಜ್ಯ ಬಳಕೆಯ ಸಿಲಿಂಡರ್‌ ದರ 30 ರೂ. ಇಳಿಕೆ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್‌  ದರವನ್ನು 30 ರೂ. ಇಳಿಕೆ ಮಾಡಿದೆ.

ದರ ಇಳಿಕೆಯಿಂದ ದೆಹಲಿಯಲ್ಲಿ ಮೊದಲು 1,676 ರೂ.ಗೆ ಮಾರಾಟವಾಗುತ್ತಿದ್ದ 19 ಕೆಜಿ ಸಿಲಿಂಡರ್‌ ಈಗ 1,646 ರೂ.ಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1,598 ರೂ., ಕೋಲ್ಕತ್ತಾದಲ್ಲಿ 1,756 ರೂ. ಇದೆ.

ಗೃಹ ಬಳಕೆಯಲ್ಲಿ ಬಳಸುವ ಬಳಸುವ 14.2 ಕೆಜಿ ಎಲ್‌ಪಿಜಿ (LPG) ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬೆಂಗಳೂರಿನಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ ಬೆಲೆ 905.50 ರೂ.ದರವಿದೆ.

ದೆಹಲಿಯಲ್ಲಿ 803 ರೂ. ಕೋಲ್ಕತ್ತಾದಲ್ಲಿ 829 ರೂ. ಚೆನ್ನೈನಲ್ಲಿ 818.50 ರೂ. ಮತ್ತು ಮುಂಬೈನಲ್ಲಿ 802.50 ರೂ. ಇದೆ.

Leave a Reply