ವಾಯುದಾಳಿಯಿಂದ ಉಗ್ರರು ಸತ್ತಿದ್ದಾರೆ ಎಂಬ ಮಾತು ನಂಬುವುದಿಲ್ಲ : ಪ್ರಧಾನಿ ವಿರುದ್ಧ ರಮ್ಯಾ – Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ,: ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ, ನಟಿ ರಮ್ಯಾ, ಇದೀಗಾ ಮತ್ತೊಮ್ಮೆ ಟ್ವೀಟ್ ಮಾಡಿ ಪ್ರಧಾನಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

 

ಸರಣಿ ಟ್ವೀಟ್ ಮಾಡಿದ ರಮ್ಯಾ “ನಮ್ಮ ಸೇನಾಪಡೆಯ ಮೇಲೆ ನಮ್ಮೆಲ್ಲರಿಗೂ ನಂಬಿಕೆಯಿದೆ. ಆದರೆ ನಮಗೆ ನಿಮ್ಮ ಮೇಲೆ ನಂಬಿಕೆಯಿಲ್ಲ. ಯಾಕೆಂದರೆ ನಮ್ಮ ಸಶಸ್ತ್ರ ಪಡೆ ಮಾತನಾಡುವಾಗ ವಿಶ್ವಾಸಾರ್ಹ ದಾಖಲೆಯ ಸಹಿತ ಮಾತನಾಡುತ್ತದೆ. ಸ್ವಾತಂತ್ರ್ಯದ ನಂತರ ನಮ್ಮ ಸೈನ್ಯ ಅನೇಕ ಯುದ್ಧಗಳನ್ನು ಹೋರಾಡಿ ಗೆದ್ದಿದ್ದಾರೆ. ಆದರೆ ನೀವು ಮಾತ್ರ ದಾಖಲೆಯಿಲ್ಲದೆ ಸದಾ ಸುಳ್ಳು ಹೇಳುತ್ತೀರಿ” ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ, “2014ರಲ್ಲೂ ಚುನಾವಣೆಯ ಮುಂಚೆ ನೀವು ಪಾಕಿಸ್ತಾನಕ್ಕೆ ಹೋಗಿ ಅಂದಿನ ಪ್ರಧಾನಿ ನವಾಝ್ ಶರೀಫ್ ರನ್ನು ತಬ್ಬಿಕೊಂಡು ಬಿರಿಯಾನಿ ಸವಿದು ಬಂದಿದ್ದೀರಿ. ಆದ್ರೆ ಈಗ ನೀವು ನನ್ನನ್ನು ನಂಬಿ ಎನ್ನುತ್ತೀರಿ. ಇದಕ್ಕೋ ಮುಂಚೆ ನೀವು ನೋಟು ನಿಷೇಧದಿಂದ ಭಯೋತ್ಪಾದನೆ ನಾಶವಾಗುತ್ತದೆ ಎಂದು ಹೇಳಿದ್ದಿರಿ. ಆದರೆ ನಾಶವಾಗುವುದು ಬಿಡಿ ಕಿಂಚಿತ್ತು ಕಡಿಮೆಯೂ ಆಗಿಲ್ಲ. ಇನ್ನು ವಾಯುದಾಳಿಯಿಂದ ಉಗ್ರರು ಸತ್ತಿದ್ದಾರೆ ಎಂಬ ನಿಮ್ಮ ಮಾತನ್ನು ನಾವು ನಂಬಲು ಸಾಧ್ಯವಿಲ್ಲ” ಎಂದು ಕಿಡಿಕಾರಿದ್ದಾರೆ.

https://twitter.com/divyaspandana/status/1102635508222562307