ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿದಿದ್ದ ತೇಜ್ ಬಹದ್ದೂರ್‌ ನಾಮಪತ್ರ ತಿರಸ್ಕೃತ -Vishwanews24

Featured, ರಾಷ್ಟ್ರ ನ್ಯೂಸ್

ಲಖನೌ: ಯೋಧರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ವೀಡಿಯೋ ಮಾಡಿದ್ದ ಗಡಿ ಭದ್ರತಾ ಪಡೆಯ ಮಾಜಿ ತೇಜ್‌ ಬಹದ್ದೂರ್‌ ಯಾದವ್‌ ವಾರಾಣಸಿಯಲ್ಲಿ ಪ್ರಧಾನಮಂತ್ರಿ ನರೇಂಂದ್ರ ಮೋದಿ ವಿರುದ್ಧ ಕಣಕ್ಕಿಳಿದಿದ್ದರು. ಆದರೆ ಈಗ ಅವರ ನಾಮಪತ್ರ ತಿರಸ್ಕಾರವಾಗಿದೆ.

ತೇಜ್‌ ಬಹದ್ದೂರ್‌ ಯಾದವ್‌ ಅವರನ್ನು ಸಮಾಜವಾದಿ ಪಕ್ಷ ಕಣಕ್ಕಿಳಿಸಿತ್ತು. ಈ ಕ್ಷೇತ್ರಕ್ಕೆ ಶಾಲಿನಿ ಯಾದವ್‌ ಅವರನ್ನು ಸಮಾಜವಾದಿ ಪಕ್ಷ ಅಭ್ಯರ್ಥಿ ಎಂದು ಘೋಷಿಸಿತ್ತು. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ತೇಜ್‌ ಬಹದ್ದೂರ್‌ ಯಾದವ್‌ ಅವರೇ ನಮ್ಮ ಅಭ್ಯರ್ಥಿ ಎಂದು ಸಮಾಜವಾದಿ ಪಕ್ಷ ಅಂತಿಮಗೊಳಿಸಿತ್ತು.

ಅಮಾನತುಗೊಂಡಿರುವ ಬಿಎಸ್‌ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಗೆ ಮಂಗಳವಾರ ಚುನಾವಣಾ ಆಯೋಗ ನೊಟೀಸ್ ನೀಡಿತ್ತು. ಸೇನೆ ಬಗ್ಗೆ ವಾಟ್ಸ್ ಅಪ್ ಸೆಲ್ಫಿ ವಿಡಿಯೋ ಕಳುಹಿಸಿ ಸುದ್ದಿಯಾಗಿದ್ದ ತೇಜ್ ಬಹದ್ದೂರ್ ಯಾದವ್ ಎರಡನೇ ಬಾರಿ ವಿಡಿಯೋ ಹಾಕಿದಾಗ ಸೇನೆಯಿಂದ ವಜಾಗೊಂಡಿದ್ದರು.

ಸಮಾಜವಾದಿ ಪಕ್ಷದಿಂದ ನಾಮಪತ್ರ ಸಲ್ಲಿಸುವ ಮೊದಲೇ ತೇಜ್ ಬಹದ್ದೂರ್ ಯಾದವ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಆ ನಾಮಪತ್ರದಲ್ಲಿ ಸೇನೆಯಿಂದ ವಜಾಗೊಂಡ ಸಂಗತಿಯನ್ನು ಉಲ್ಲೇಖಿಸಿದ್ದರು. ಎರಡನೇ ನಾಮಪತ್ರದಲ್ಲಿ ಆ ವಿಚಾರವಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಬೇಕು ಹಾಗೂ ಬಿಎಸ್‌ಎಫ್ ನಿಂದ ಎನ್‌ಒಸಿ ತರುವಂತೆ ಸೂಚನೆ ನೀಡಿತ್ತು. ಆದ್ರೆ ತೇಜ್ ಬಹದ್ದೂರ್ ಯಾದವ್ ನಿಗದಿತ ಸಮಯಕ್ಕೆ ನೊಟೀಸ್ ಗೆ ಉತ್ತರ ನೀಡದ ಕಾರಣ ನಾಮಪತ್ರ ತಿರಸ್ಕೃತಗೊಂಡಿದೆ  ಎನ್ನಲಾಗಿದೆ..