ವಿಜಯ ಬ್ಯಾಂಕನ್ನು ಮುಚ್ಚಿಸಿದ್ದೇ ಕೇಂದ್ರ ಸರಕಾರದ ದೊಡ್ಡ ಸಾಧನೆ : ಡಿಕೆಶಿ – Vishwanews24

Featured, ದಕ್ಷಿಣ ಕನ್ನಡ

ಬೆಳ್ತಂಗಡಿನಳಿನ್‌ ಕುಮಾರ್‌ ಅವರ ಸರಕಾರವೇ ಕೇಂದ್ರದಲ್ಲಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ವಿಜಯ ಬ್ಯಾಂಕನ್ನು ಮುಚ್ಚಿಸಿದ್ದೇ ದೊಡ್ಡ ಸಾಧನೆಯಾಗಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಆರೋಪಿಸಿದರು.

ಬೆಳ್ತಂಗಡಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಮಾವೇಶದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ವಿಜಯ ಬ್ಯಾಂಕನ್ನು ಉಳಿಸಿಕೊಂಡು ಬರೋಡ ಬ್ಯಾಂಕನ್ನು ವಿಲೀನ ಮಾಡಬಹುದಿತ್ತು. ವಿಜಯ ಬ್ಯಾಂಕ್‌ ವಿಲೀನ ಇಡೀ ಜಿಲ್ಲೆ, ರಾಜ್ಯಕ್ಕೆ ಅವಮಾನವಾಗಿದೆ. ನಳಿನ್‌ ಕುಮಾರ್‌ ಅವರ ಸರಕಾರವೇ ಕೇಂದ್ರದಲ್ಲಿದ್ದರೂ ವಿಜಯ ಬ್ಯಾಂಕ್ ಉಳಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ವಿಜಯ ಬ್ಯಾಂಕ್‌ ಮುಚ್ಚಬೇಕಾದ ಯಾವುದೇ ಅನಿವಾರ್ಯತೆ ಇರಲಿಲ್ಲ. ಅದನ್ನು ರಕ್ಷಣೆ ಮಾಡಲು ಬಿಜೆಪಿ ನೇತ್ರತ್ವದ ಕೇಂದ್ರ ಸರಕಾರದಿಂದ ಆಗಲಿಲ್ಲ. ಆರ್ಥಿಕವಾದ ವ್ಯವಸ್ಥೆಯನ್ನೇ ಉಳಿಸಿಕೊಳ್ಳಲು ಇವರಿಂದ ಆಗಿಲ್ಲ. ಬಹುಶಃ ನಾನು ನಳಿನ್‌, ಸದಾನಂದ ಗೌಡ, ಶೋಭಾ ಕರಂದ್ಲಾಜೆ ಸ್ಥಾನದಲ್ಲಿ ಇದ್ದಿದ್ದರೆ, ಆ ನಿರ್ಣಯ ಮಾಡಿದ ದಿನನೇ ರಾಜೀನಾಮೆ ಕೊಡುತ್ತಿದ್ದೆ ಎಂದು ಹೇಳಿದರು.

ಆ ಕೆಲಸ ಇವರು ಮಾಡಿಲ್ಲ. ಅವರು ಈ ಕ್ಷೇತ್ರದಲ್ಲಿ ರಾಜ್ಯದಿಂದ ಪ್ರತಿನಿಧಿಸುವ ಹಕ್ಕನ್ನ, ಅಧಿಕಾರ ಕಳೆದುಕೊಂಡಿದ್ದಾರೆ. ಅಚ್ಛೇ ದಿನ್‌ ಅನ್ನುವ ವಿಚಾರ ಚರ್ಚೆ ನಡೀತಾ ಇತ್ತು. ಏನು ಅಚ್ಛೇ ದಿನ ಅಂತ ಮತದಾರರು ಅವರಿಗೆ ಕೇಳಬೇಕು. ಮೂವರೂ ರಾಜೀನಾಮೆ ಕೊಡಲಿ ಎಂದರು.