ವಿಟ್ಲ: ವಿವಾಹ ಸಮಾರಂಭಕ್ಕೆ ಬಂದಿದ್ದ ಬಾಲಕನ ಮೇಲೆ ಲೈಂಗಿಕ ಕಿರುಕುಳ -Vishwanews24

Featured, ದಕ್ಷಿಣ ಕನ್ನಡ

ವಿಟ್ಲ: ವಿವಾಹ ಸಮಾರಂಭಕ್ಕೆ ಬಂದಿದ್ದ ಬಾಲಕನ ಮೇಲೆ ಲೈಂಗಿಕ ಕಿರುಕುಳ -Vishwanews24

ವಿಟ್ಲ: ವಿವಾಹ ಸಮಾರಂಭಕ್ಕೆ ಬಂದಿದ್ದ ಬಾಲಕನ ಮೇಲೆ ಕಬಕ ಮೂಲದ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಮಂಗಳೂರು ಏರ್ ಪೋರ್ಟ್: ವಿಶೇಷವಾಗಿ ವಿನ್ಯಾಸದ ಪಾದರಕ್ಷೆಯ ಒಳಗೆ ಅಕ್ರಮ ಚಿನ್ನ ಸಾಗಾಟ : ಇಬ್ಬರ ಬಂಧನ -Vishwanews24

ವಿಟ್ಲ- ಪುತ್ತೂರು ರಸ್ತೆಯ ಮನೆಯೊಂದರಲ್ಲಿ ಮದುವೆ ಕಾರ್ಯಕ್ರಮವಿತ್ತು. ಇಲ್ಲಿಗೆ ಪುತ್ತೂರು ಮೂಲದ ಹನ್ನೊಂದು ವರ್ಷದ ಬಾಲಕ ಮೆಹೆಂದಿ ಕಾರ್ಯಕ್ರಮಕ್ಕೆ ಆಗಮಿಸಿದ್ದ. ಇಲ್ಲಿಗೆ ಕಬಕ ಮೂಲದ ಹಮೀದ್ ಯಾನೆ ಮೌಲ ಅಮ್ಮಿ ಎಂಬಾತ ಕೂಡಾ ಬಂದಿದ್ದ. ಈ ಸಂದರ್ಭ ಆರೋಪಿಯು ಬಾಲಕನನ್ನು ಪುಸಲಾಯಿಸಿ ಹೊರಗಡೆ ಕರೆದುಕೊಂಡು ಹೋಗಿ ಲೈಂಗಿನ ದೌರ್ಜನ್ಯ ನೀಡಿದ್ದಾರೆನ್ನಲಾಗಿದೆ.

ಈ ಬಗ್ಗೆ ಬಾಲಕ ಮನೆಯವರಿಗೆ ವಿಚಾರ ತಿಳಿಸಿದ್ದು, ಆತನ ಪೋಷಕರು ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣದ ದಾಖಲಿಸಿದ್ದಾರೆ.

ಇದನ್ನೂ ಓದಿ : ಮಂಗಳೂರು : 8.78 ಸೆಕೆಂಡ್ ನಲ್ಲಿ 100 ಮೀಟರ್ ಓಡಿ ಹೊಸ ದಾಖಲೆ ಬರೆದ ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ್ ಗೌಡ -Vishwanews24