ವಿದ್ಯಾರ್ಥಿನಿಯರ ವರ್ತನೆ ನೋಡುವಾಗ ಇವರು ನಮ್ಮವರಾ ಎಂಬ ಸಂಶಯ ಬರುತ್ತಿದೆ : ಪ್ರಾಂಶುಪಾಲ ರುದ್ರೇಗೌಡ

Featured, ಉಡುಪಿ

ವಿದ್ಯಾರ್ಥಿನಿಯರ ವರ್ತನೆ ನೋಡುವಾಗ ಇವರು ನಮ್ಮವರಾ ಎಂಬ ಸಂಶಯ ಬರುತ್ತಿದೆ : ಪ್ರಾಂಶುಪಾಲ ರುದ್ರೇಗೌಡ

ಉಡುಪಿ: ಪ್ರಸ್ತುತ ಹಿಜಾಬ್ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುವ ವಿದ್ಯಾರ್ಥಿನಿಯರು ನಮ್ಮವರಾ ಎಂಬ ಸಂಶಯ ಬರುತ್ತಿದೆ ವಿದ್ಯಾರ್ಥಿನಿಯರನ್ನು ದಾರಿ ತಪ್ಪಿಸುವವರು ಇನ್ನಾದರೂ ನಿಮ್ಮ ಕೆಲಸ ನಿಲ್ಲಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕಾಲೇಜು ಚರ್ಚೆಯಾಗಿದೆ ನಮ್ಮ ಮೇಲೆ ವಿದ್ಯಾರ್ಥಿಗಳು ಏನೇ ಆರೋಪ ಮಾಡಿದರು ಅವರು ನಮ್ಮ ವಿದ್ಯಾರ್ಥಿಗಳು ಹಿಜಾಬ್ ಹೋರಾಟದ ವಿದ್ಯಾರ್ಥಿನಿಯರ ಬಗ್ಗೆ ಅನುಕಂಪ ಇದೆ ಎಂದು ಮಹಿಳಾ ಪದವಿ ಪೂರ್ವ  ಕಾಲೇಜು ಪ್ರಾಂಶುಪಾಲ ರುದ್ರೆಗೌಡ ಹೇಳಿದರು.

ಕಾಲೇಜಿನ 30 ವರ್ಷದ ಹೆಸರು ಉಳಿಸುವುದು ನಮ್ಮ ಕರ್ತವ್ಯವಾಗಿದೆ ನಮ್ಮ ಕಾಲೇಜು ಕ್ಯಾಂಪಸ್ ಗೆ ಯಾವುದೇ ಸಂಘಟನೆಗೆ ಪ್ರವೇಶವಿಲ್ಲ ಮತ್ತು ನಾನಂತ್ತು ಯಾವುದೇ ಸಂಘಟನೆಯನ್ನು ಎಂಟಟೈನ್ ಮಾಡುವುದಿಲ್ಲ ಶಿಸ್ತಿನಲ್ಲಿದ್ದ ಕಾಲೇಜು ಅಶಿಸ್ತಾಗಿದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ವಿಚಾರವಾಗಿ ಸುದ್ದಿಯಾಗಿರುವುದಕ್ಕೆ ಬೇಸರವಿದೆ ಎಂದು ಅವರು ಹೇಳಿದರು.

 

Leave a Reply