ವಿಧಾನಪರಿಷತ್ ಕಲಾಪದಲ್ಲಿ ಸದಸ್ಯರ ಮೊಬೈಲ್ ಬಳಕೆ ನಿಷೇಧ -Vishwanews24
ವಿಧಾನಪರಿಷತ್ ಕಲಾಪದಲ್ಲಿ ಸದಸ್ಯರ ಮೊಬೈಲ್ ಬಳಕೆ ನಿಷೇಧ -Vishwanews24
ಬೆಂಗಳೂರು: ವಿಧಾನಪರಿಷತ್ನಲ್ಲಿ ಇಂದಿನಿಂದ ಸದಸ್ಯರು ಮೊಬೈಲ್ ಬಳಕೆ ಮಾಡಲು ನಿಷೇಧ ವಿಧಿಸಲಾಗಿದ್ದು, ಒಂದೊಮ್ಮೆ ಮಾಹಿತಿಗಾಗಿ ಸದಸ್ಯರು ಮೊಬೈಲ್ ಬೇಕು ಎನ್ನುವುದಾದರೆ ಸಭಾಪತಿಗಳ ಅನುಮತಿ ಪಡೆಯುವುದು ಕಡ್ಡಾಯ ಮಾಡಲಾಗಿದೆ.
ವಿಧಾನಪರಿಷತ್ ಸಭಾಪತಿ ಪ್ರತಾಪ್ಚಂದ್ರ ಶೆಟ್ಟಿ ಅವರು ಕಲಾಪದ ಸಂದರ್ಭದಲ್ಲಿ ಮೊಬೈಲ್ ಬಳಕೆ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಅಂದಹಾಗೇ 2011ರಲ್ಲಿಯೇ ಸದನದಲ್ಲಿ ಮೊಬೈಲ್ ಬಳಕೆ ನಿಷಿದ್ಧ ಎಂದು ಘೋಷಿಸಲಾಗಿದೆ. ಆದರೂ ಕೆಲ ಸದಸ್ಯರು ಮೊಬೈಲ್ ಸದನದೊಳಗೆ ತರುತ್ತಿದ್ದರು.
ಉಡುಪಿ : ಜಿಲ್ಲೆಯಲ್ಲಿ ಮಾರ್ಚ್ 17 ರಿಂದ ಸೇನಾ ನೇಮಕಾತಿ ರ್ಯಾಲಿ : ಜಿಲ್ಲಾಧಿಕಾರಿ ಜಿ.ಜಗದೀಶ್ -Vishwanews24
ಈ ಬಾರಿಯ ಸದನ ಸಮಾವೇಶದ ವೇಳೆಯೂ ಹಲವು ಸದಸ್ಯರ ಮೊಬೈಲ್ ರಿಂಗಣಿಸಿತ್ತು. ಹೀಗಾಗಿ ಇನ್ಮುಂದೆ ಯಾರು ಮೊಬೈಲ್ ಸದನದೊಳಗೆ ತರುವಂತಿಲ್ಲ. ಒಂದು ವೇಳೆ ತಂದರೂ ಸ್ವಿಚ್ ಆಫ್ ಮಾಡಿ ಇಡಬೇಕು ಎಂದು ಸೂಚಿಸಿ ಇಂದಿನಿಂದ ಇಂದಿನಿಂದ ವಿಧಾನಪರಿಷತ್ ಸದನದಲ್ಲಿ ಮೊಬೈಲ್ ಬಳಕೆ ನಿಷೇಧ ಮಾಡಲಾಗಿದೆ. ಇತ್ತೀಚೆಗೆ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಅವರು ಮೊಬೈಲ್ನಲ್ಲಿ ಅಶ್ಲೀಲ ದೃಶ್ಯ ವೀಕ್ಷಣೆ ಮಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಸಭಾಪತಿಗಲು ಮೊಬೈಲ್ ಬಳಕೆ ನಿಷೇಧದ ಕುರಿತು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದಾರೆ.
