Featured

ವಿಧಾನಪರಿಷತ್ ಚುನಾವಣೆ : 25 ಸ್ಥಾನಗಳ ಪೈಕಿ ಬಿಜೆಪಿ 15 ಸ್ಥಾನ ಗೆಲ್ಲಲಿದೆ : ಜಗದೀಶ್ ಶೆಟ್ಟರ್  – Vishwanews24

ವಿಧಾನಪರಿಷತ್ ಚುನಾವಣೆ : 25 ಸ್ಥಾನಗಳ ಪೈಕಿ ಬಿಜೆಪಿ 15 ಸ್ಥಾನ ಗೆಲ್ಲಲಿದೆ: ಜಗದೀಶ್ ಶೆಟ್ಟರ್  – Vishwanews24

ತುಮಕೂರು: ವಿಧಾನಪರಿಷತ್ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಯಲ್ಲಿ 25 ಸ್ಥಾನಗಳ ಪೈಕಿ ಹದಿನೈದು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿ ಗಳು ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಜನ ಸ್ವರಾಜ್ ಸಮಾವೇಶಕ್ಕೂ ಮುನ್ನ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ 45 ಸಾವಿರಕ್ಕೂ ಹೆಚ್ಚು ಗ್ರಾಪಂ ಸದಸ್ಯರು ಬಿಜೆಪಿ ಬೆಂಬಲಿತರಿದ್ದು ಪರಿಷತ್ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನ ಗೆಲ್ಲುವುದರೊಂದಿಗೆ ಪರಿಷತ್ ಬಹುಮತ ಸಾಧಿಸಲಿದೆ ಎಂದರು.

ಗ್ರಾಮ ಪಂಚಾಯಿತಿಯಿಂದ ದೆಹಲಿಯವರೆಗೆ ಬಿಜೆಪಿ ಬೆಳವಣಿಗೆ ದಾಖಲೆಯಾಗಿದ್ದು ಅತೀ ಹೆಚ್ಚು ಸಂಸದರು, ಶಾಸಕರು ಹಾಗೂ 19 ಕೋಟಿ ಸದಸ್ಯರನ್ನು ಹೊಂದುವ ಮೂಲಕ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವೆನಿಸಿದೆ ಎಂದರು.

ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಐವರು ಶಾಸಕರು, ಸಂಸದರು, ಕೇಂದ್ರ ಸಚಿವರು ಸೇರಿದಂತೆ ಮೂವರು ಸಚಿವರು, ಇಬ್ಬರು ವಿಧಾನ ಪರಿಷತ್ ಸದಸ್ಯ ರಿದ್ದು ಕಳೆದ ಬಾರಿ ಪಕ್ಷದ ಒಬ್ಬ ರೇ ಶಾಸಕರಿದ್ದರೂ ಅಭ್ಯರ್ಥಿಯಾಗಿದ್ದ ಹುಲಿನಾಯ್ಕರ್ ಅವರು 1700 ಮತಗಳನ್ನು ಪಡೆದಿದ್ದರು. ಈ ಬಾರಿ ಪಕ್ಷದ ಅಭ್ಯರ್ಥಿ ಗೆಲವು ಸಾಧಿಸುವುದು ನಿಶ್ಚಿತವೆನೆಸಿದ್ದು ಇಂದು ಅಥವಾ ನಾಳೆಯೊಳಗೆ ಅಭ್ಯರ್ಥಿ ಪ್ರಕಟಿಸಲಾಗುವುದು. ಈಗಾಗಲೇ ಚುನಾವಣೆಗೆ ಅಗತ್ಯ ತಯಾರಿ ನಡೆಸಲಾಗಿದೆ ಎಂದರು.

ಕಾಂಗ್ರೆಸ್ ದೇಶಾದ್ಯಂತ ಅವನತಿ ಹಾದಿ ಹಿಡಿದಿದ್ದು, ಕರ್ನಾಟಕ ದಲ್ಲಿ ಡಿ. ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನಡುವಿನ ಒಳಜಗಳವೇ ಆ ಪಕ್ಷವನ್ನು ನಿರ್ಮೂಲನೆ ಮಾಡಲಿದೆ. ಬಿಟ್ ಕಾಯಿನ್ ವಿಚಾರವಾಗಿ ಯಾವುದೇ ಪುರಾವೆಯಿಲ್ಲದೆ ಬಿಜೆಪಿ ಸರಕಾರ ವನ್ನು ದೂಷಿಸುವ ಕೆಲಸ ಮಾಡುತ್ತಿದೆ ಎಂದು ತಿರುಗೇಟು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಚಿವರಾದ ಜೆ. ಸಿ. ಮಾಧುಸ್ವಾಮಿ, ಬೈರತಿ ಬಸವರಾಜ್, ಗೋಪಾಲಯ್ಯಾ, ಬಿ. ಸಿ. ನಾಗೇಶ್, ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ, ಸಂಸದ ಜಿ. ಎಸ್. ಬಸವರಾಜ್, ಶಾಸಕರಾದ ಜಿ. ಬಿ. ಜ್ಯೋತಿ ಗಣೇಶ್, ಮಸಾಲೆ ಜಯರಾಂ, ಸಿ. ಎಂ. ರಾಜೇಶ್ ಗೌಡ, ಎಂಎಲ್ಸಿಗಳಾದ ತುಳಸಿ ಮುನಿರಾಜು ಗೌಡ, ಮಹೇಶ್ ತೆಂಗಿನಕಾಯಿ, ವೈ. ಎ. ನಾರಾಯಣ ಸ್ವಾಮಿ, ಚಿದಾನಂದ ಗೌಡ, ಮಾಜಿ ಸಚಿವ ಎಸ್. ಶಿವಣ್ಣ, ಮಾಜಿ ಶಾಸಕ ಕೆ. ಎಸ್ ಕಿರಣ್ ಕುಮಾರ್, ರಾಜ ಉಪಾಧ್ಯಕ್ಷ ಎಂ. ಬಿ ನಂದೀಶ್, ಹೆಬ್ಬಾಕರವಿ, ಬಿ. ಕೆ. ಮಂಜುನಾಥ್, ಬಾವಿ ಕಟ್ಟೆ ನಾಗಣ್ಣ ಮತ್ತಿತರ ಮುಖಂಡರು ಹಾಜರಿದ್ದರು.

Vishwa News 24

Recent Posts

ಕುಂದಾಪುರ: ನಿಂತ ಲಾರಿಗಳಿಗೆ ಬಸ್ ಢಿಕ್ಕಿ: ಎರಡು ಸಾವು, ಹಲವರಿಗೆ ಗಾಯ – vishwanews24

ಕುಂದಾಪುರ: ನಿಂತ ಲಾರಿಗಳಿಗೆ ಬಸ್ ಢಿಕ್ಕಿ: ಎರಡು ಸಾವು, ಹಲವರಿಗೆ ಗಾಯ ಕುಂದಾಪುರ: ಮರವಂತೆ ಸಮುದ್ರ ಕಿನಾರೆಯ ಎದುರಿನ‌ ರಾಷ್ಟ್ರೀಯ…

18 hours ago

ರೇಣುಕಾಸ್ವಾಮಿ ಹತ್ಯೆ ಪ್ರಕರಣ : ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋದ ದರ್ಶನ್‌ – vishwanews24

ರೇಣುಕಾಸ್ವಾಮಿ ಹತ್ಯೆ ಪ್ರಕರಣ : ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋದ ದರ್ಶನ್‌ ನವದೆಹಲಿ : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು…

18 hours ago

ದ. ಕ, ಉಡುಪಿ ಸೇರಿದಂತೆ  5 ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ; 25 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ – vishwanews24

ದ. ಕ, ಉಡುಪಿ ಸೇರಿದಂತೆ  5 ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ; 25 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ …

19 hours ago

ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ನೂತನ ಸರತಿ ಸಾಲು ಹಾಗೂ ಐಡಿ ಆಧಾರಿತ ಪ್ರವೇಶ ವ್ಯವಸ್ಥೆ ಉದ್ಘಾಟನೆ – vishwanews24

ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ನೂತನ ಸರತಿ ಸಾಲು ಹಾಗೂ ಐಡಿ ಆಧಾರಿತ ಪ್ರವೇಶ ವ್ಯವಸ್ಥೆ ಉದ್ಘಾಟನೆ ಉಡುಪಿ : ಶ್ರೀ…

22 hours ago

ಮಂಗಳೂರು: ಸ್ಕೂಟರ್‌ ಸವಾರನಿಗೆ ಖಾರದ ಪುಡಿ ಎರಚಿ ದರೋಡೆ; ಪ್ರಕರಣ ದಾಖಲು – vishwanews24

ಮಂಗಳೂರು: ಸ್ಕೂಟರ್‌ ಸವಾರನಿಗೆ ಖಾರದ ಪುಡಿ ಎರಚಿ ದರೋಡೆ; ಪ್ರಕರಣ ದಾಖಲು ಮಂಗಳೂರು: ಗುರುಪುರ ಬಂಗ್ಲಗುಡ್ಡೆ ಬಳಿ ಸ್ಕೂಟರ್ ಸವಾರರೊಬ್ಬರಿಗೆ…

22 hours ago

ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ – vishwanews24

ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ 8 ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳು ಬೆಂಗಳೂರು: ನಗರದ ವಿದ್ಯಾರಣ್ಯಪುರ…

22 hours ago