ವಿಧಾನಮಂಡಲದ ಮುಂದಿನ ಅಧಿವೇಶನದ ವೇಳೆಗೆ ಈ 2 ಸರ್ಕಾರದ ಹಲವು ಹಗರಣಗಳನ್ನು ಬಯಲಿಗೆ ಎಳೆಯುವೆ : ಎಚ್.ಡಿ. ಕೆ -Vishwanews24

Featured, ರಾಜ್ಯ ನ್ಯೂಸ್

ವಿಧಾನಮಂಡಲದ ಮುಂದಿನ ಅಧಿವೇಶನದ ವೇಳೆಗೆ ಈ 2 ಸರ್ಕಾರದ ಹಲವು ಹಗರಣಗಳನ್ನು ಬಯಲಿಗೆ ಎಳೆಯುವೆ : ಎಚ್.ಡಿ. ಕೆ -Vishwanews24

ಬೆಂಗಳೂರು: ನನ್ನನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಿದ್ದು 17 ಜನರಲ್ಲ. ದೇವರೇ ನನ್ನ ಜೀವ ಉಳಿಸಲು ಮೈತ್ರಿ ಸರ್ಕಾರದ ಅಧಿಕಾರದಿಂದ ಕೆಳಗೆ ಇಳಿಸಿದ್ದಾನೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ.

ಜೆಡಿಎಸ್​ ಪ್ರಧಾನ ಕಚೇರಿಯಲ್ಲಿ ಗುರುವಾರ ಮಾತನಾಡಿದ ಎಚ್​ಡಿಕೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಅಂದು ಶಾಸಕರಾಗಿದ್ದ 17 ಜನ ಕಾರಣ ಎನ್ನುತ್ತಾರೆ. ಅವರು ನನ್ನ ಜೀವ ಉಳಿಸಿದ ಪುಣ್ಯಾತ್ಮರು. ನನಗೆ ಅವರ ಬಗ್ಗೆ ಯಾವುದೇ ಬೇಜಾರಿಲ್ಲ.ನಾನು ಸಂತೋಷದಿಂದ ಅಧಿಕಾರ ಬಿಟ್ಟು ಹೊರಗೆ ಬಂದೆ. ಈ ಸಂದರ್ಭದಲ್ಲಿ ನನ್ನ ಜೀವ ಉಳಿಯಬೇಕು ಎಂದು ದೇವರೇ ತೆಗೆದುಕೊಂಡ ನಿರ್ಧಾರ ಅದು. ಆ 17 ಜನರಿಗೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ.

ಮುಂದುವರಿಸಿ ಮಾತನಾಡಿದ ಅವರು, “ಜೆಡಿಎಸ್‌ ೨ ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಲು ಸಜ್ಜಾಗುತ್ತಿದ್ದೇವೆ. ಇನ್ನು ನಮ್ಮ ಆಟ ತೋರಿಸುತ್ತೇವೆ. ವಿಧಾನಮಂಡಲದ ಮುಂದಿನ ಅಧಿವೇಶನದ ವೇಳೆಗೆ ಈ ಸರ್ಕಾರದ ಹಲವು ಹಗರಣಗಳನ್ನು ಬಯಲಿಗೆ ಎಳೆಯುವೆ’ ಎಂದ ಅವರು ಕಾಂಗ್ರೆಸ್​ನವರೊಬ್ಬರು 2018ರ ಚುನಾವಣೆಯಲ್ಲಿ ಇದು ನನ್ನ ಕೊನೇ ಚುನಾವಣೆ ಎಂದಿದ್ದರು. ಈಗ ಅವರೇ ಮತ್ತೆ ಸಿಎಂ ಆಗಲು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ಸಿದ್ದರಾಮಯ್ಯರ ಹೆಸರು ಹೇಳದೆ ಮಾತಿನಲ್ಲೇ “ಕುಮಾರಸ್ವಾಮಿ ಚಾಟಿ ಬೀಸಿದರು.