ವಿಧಾನ ಸಭೆಯಲ್ಲಿ ವಿಶ್ವಾಸ ಮತಯಾಚನೆ

Featured, ರಾಜ್ಯ ನ್ಯೂಸ್

ಮುಖ್ಯಮಂತ್ರಿಯಾಗುವುದು ನನ್ನ ವಯಕ್ತಿಕ ಆಸೆಯಲ್ಲ, ನಾನೆಂದು ಅಧಿಕಾರ ಬಯಸಿ ಹೋದವನಲ್ಲ, ದೇಶದ ರಾಜಕೀಯ ಸ್ಥಿತಿ ನೋಡಿ ನಿರ್ಧಾರ ಕೈಗೊಂಡಿದ್ದೇನೆ. ಜಾತ್ಯಾತೀತ ತತ್ವಗಳಿಗೆ ಕಟ್ಟುಬಿದ್ದು ಸರ್ಕಾರ ರಚನೆ ಮಾಡಬೇಕಾಯಿತು. ನನ್ನಿಂದಾಗಿ ನನ್ನ ತಂದೆಯ ರಾಜಕೀಯ ಬದುಕಿಗೆ ಕಪ್ಪು ಚುಕ್ಕೆಯಾಗಬಾರದು. ರೈತರ ಸಾಲಾ ಮನ್ನ ಬಗ್ಗೆ ಕಾಂಗ್ರೇಸ್ ಜೊತೆ ಚರ್ಚಿಸಿ ತಿರ್ಮಾನ ನೀಡಲಾಗುವುದು. ಯಾವುದೆ ಒಂದು ವರ್ಗಕ್ಕಾಗಿ ನಾವು ಸರ್ಕಾರ ನಡೆಸುವುದಿಲ್ಲ. ರಾಜ್ಯದಲ್ಲಿ ಯಾವುದೇ ಸಂಘಟನೆ ಪ್ರತಿಭಟನೆ ಮಾಡದಂತೆ ಅಧಿಕಾರ ನಡೆಸುತ್ತೇನೆ. ಬಿಜೆಪಿ ದಕ್ಷಿಣ ಭಾರತದ ಹೆಬ್ಬಾಗಿಲು ತಟ್ಟಲು ನನ್ನ ಪಾತ್ರವೂ ಇತ್ತು. ಪಕ್ಷ ಭೇದ ಮರೆತು ರಾಜ್ಯದ ಅಭಿವೃದ್ಧಿಗೆ ದುಡಿಯೋಣ. ನಮ್ಮ ಸರ್ಕಾರ 5 ತಿಂಗಳಲ್ಲ 5 ವ‍ರ್ಷವೂ ಸುಭದ್ರ ಸರ್ಕಾರವಾಗಿ ಆಳ್ವಿಕೆ ನಡೆಸುತ್ತದೆ. ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸ ಮತಯಾಚನೆಯ ಮೂಲಕ ತಿಳಿಸಿದರು.