Featured

ವಿಪತ್ತು ನಿರ್ವಹಣೆಗೆ ಭೌಗೋಳಿಕ ತಂತ್ರಜ್ಞಾನ ಬಳಕೆೆ : ಪೈಲಟ್ ಆಗಿ ಉಡುಪಿ ಜಿಲ್ಲೆಯಲ್ಲಿ ಜಾರಿ – Vishwanews24

ವಿಪತ್ತು ನಿರ್ವಹಣೆಗೆ ಭೌಗೋಳಿಕ ತಂತ್ರಜ್ಞಾನ ಬಳಕೆೆ : ಪೈಲಟ್ ಆಗಿ ಉಡುಪಿ ಜಿಲ್ಲೆಯಲ್ಲಿ ಜಾರಿ – Vishwanews24

ಪ್ರಾಕೃತಿಕ ವಿಪತ್ತುಗಳು ಯಾವುದೇ ಮುನ್ಸೂಚನೆ ನೀಡದೇ ಸಂಭವಿಸುತ್ತವೆ, ಒಂದು ವೇಳೆ ಮುನ್ಸೂಚನೆ ಇದ್ದರೂ ಅದರ ಹಾನಿಯ ಪ್ರಮಾಣವನ್ನು ತಕ್ಷಣದಲ್ಲಿ ಗುರುತಿಸಲು ಅಸಾಧ್ಯವಾಗಿದ್ದು, ವಿಪತ್ತು ನಿರ್ವಹಣೆಗೆ ಅಗತ್ಯವಿರುವ ಪ್ರತಿಯೊಂದು ಸಂಪನ್ಮೂಲಗಳನ್ನು ಕ್ರೂಢಿಕರಿಸಲು ಸಹ ಕಷ್ಟ ಸಾಧ್ಯ, ಅಲ್ಲದೇ ನಿರ್ವಹಣೆಗೆ ಸಂಬ0ದಿಸಿದ ಸಿದ್ದಪಡಿಸಿಟ್ಟಿರುವ ಎಲ್ಲಾ ಯೋಜನೆಗಳು ಪುಸ್ತಕ ರೂಪದಲ್ಲಿದ್ದು, ವಿಪತ್ತು ಸಂದರ್ಭದಲ್ಲಿ, ತುರ್ತು ಪರಿಹಾರ ಮತ್ತು ಸಂಪನ್ಮೂಲ ಕ್ರೂಢಿಕರಣ , ಉಪಕರಣಗಳು ಮತ್ತು ಮಾನವ ಸಂಪನ್ಮೂಲ ಕ್ರಮಗಳನ್ನು ಕೈಗೊಳ್ಳಲು ಭೌಗೋಳಿಕ ಮಾಹಿತಿ ತಂತ್ರಜ್ಞಾನ (GIS) ಆಧಾರಿತ ನಕ್ಷೆ ಮತ್ತು ಭೌಗೋಳಿಕ ಮಾಹಿತಿ ತಂತ್ರಜ್ಞಾನ ಆಧಾರಿತ ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆ ಅತ್ಯಂತ ಅಗತ್ಯವಿದೆ.

ಈ ಹಿನ್ನಲೆಯಲ್ಲಿ ಭೌಗೋಳಿಕ ಮಾಹಿತಿ ತಂತ್ರಜ್ಞಾನ ಆಧಾರಿತ ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆಯನ್ನು ಅಭಿವೃದ್ಧಿಗೊಳಿಸಲಾಗುತ್ತಿದ್ದು, ಈ ಯೋಜನೆಯು ದೇಶದ ಪ್ರಮುಖ ಕಾರ್ಯಕ್ರಮವಾದ ಡಿಜಿಟಲ್ ಇಂಡಿಯಾದ ಭಾಗವಾಗಿದೆ. ಇಡೀ ದೇಶದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ರಾಜ್ಯದ 5 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಉಡುಪಿ ಜಿಲ್ಲೆಯೂ ಇದರಲ್ಲಿ ಸೇರಿದೆ.

ಈ ಯೋಜನೆಯು ವಿಪತ್ತು ನಿರ್ವಹಣೆಗೆ ಸಂಬoಧಪಟ್ಟ ಇಲಾಖೆಗಳ ಮಾಹಿತಿ, ದತ್ತಾಂಶ, ಸಂಪನ್ಮೂಲಗಳು ಹಾಗೂ ಜಿಲ್ಲಾ ಮಟ್ಟದ ವಿಪತ್ತು ಸಂಭವನೀಯ ಪ್ರದೇಶಗಳ ನಕ್ಷೆಗಳನ್ನು ಹಾಗೂ ವಿಪತ್ತು ನಿರ್ವಹಣೆಯಲ್ಲಿ ಪ್ರಮಾಣಿತ ವಿಪತ್ತು ಕಾರ್ಯಾಚರಣೆ ಕಾರ್ಯವಿಧಾನಗಳು ಮತ್ತು ಮಾರ್ಗಸೂಚಿಗಳನ್ನು ಒಳಗೊಂಡಿದೆ. ಇದಕ್ಕಾಗಿ ವಿಪತ್ತು ನಿರ್ವಹಣೆಯ ಸಂಬAಧಪಟ್ಟ ಇಲಾಖೆಗಳು ಮತ್ತು ಅಧಿಕಾರಿಗಳು ವಿಪತ್ತು ನಿರ್ವಹಣೆಗೆ ಅಗತ್ಯವಾದ ಮಾಹಿತಿ, ದತ್ತಾಂಶಗಳ ಸಂಗ್ರಹಣೆ ಮತ್ತು ರವಾನೆ, ಸಂಯೋಜನೆಗಾಗಿ ಮೊಬೈಲ್ ತಂತ್ರಾoಶ ಮತ್ತು ಅಂರ್ತಜಾಲ ತಾಣವನ್ನು ಅಭಿವೃದ್ಧಿಗೊಳಿಸಲಾಗಿದೆ.

ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ಸ್ಥಳೀಯ ಪ್ರದೇಶದಲ್ಲಿ ರಕ್ಷಣೆಗೆ ಅಗತ್ಯವಿರುವ ಲಭ್ಯ ಸಂಪನ್ಮೂಲಗಳು, ಲಭ್ಯವಿರುವ ಸಿಬ್ಬಂದಿ, ವಿಪತ್ತು ನಿರ್ವಹಣಾ ತರಬೇತಿ ಹೊಂದಿದ ಸ್ಥಳೀಯ ನಿವಾಸಿಗಳು, ಸಮೀಪದ ಶಾಲೆ, ಆಸ್ಪತ್ರೆ, ಅಲ್ಲಿನ ವೈದ್ಯಕೀಯ ಸೌಲಭ್ಯಗಳು ಮತ್ತು ಸಿಬ್ಬಂದಿ , ಕಾಳಜಿ ಕೇಂದ್ರಗಳು ಇವುಗಳೆಲ್ಲವುಗಳ ಬಗೆಗಿನ ಮಾಹಿತಿ , ಅವರುಗಳನ್ನು ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆ ಇವೆಲ್ಲಾ ಮಾಹಿತಿಗಳು ಕ್ಷಣಮಾತ್ರದಲ್ಲಿ ಬೆರಳ ತುದಿಯಲ್ಲಿಯೇ ಈ ಯೋಜನೆಯ ಮೂಲಕ ಲಭ್ಯವಾಗಲಿದ್ದು, ರಕ್ಷಣಾ ಕಾರ್ಯಗಳನ್ನು ಅತ್ಯಂತ ಶೀಘ್ರದಲ್ಲಿ ಕೈಗೊಳ್ಳಲು ನೆರವಾಗಲಿದೆ.

ಜಿಲ್ಲೆಯ ಜಿಲ್ಲಾ ವಿಪತ್ತು ಪರಿಣಿತರಿಗೆ ಯೋಜನೆಯ ತಂತ್ರಾoಶಗಳ ಬಳಕೆ ಮತ್ತು ಕಾರ್ಯವಿಧಾನಗಳ ಬಗ್ಗೆ ಈಗಾಗೇ ತರಬೇತಿ ನೀಡಲಾಗಿದ್ದು, ಜಿಲ್ಲೆಯ ಎಲ್ಲಾ ಅಧಿಕಾರಿ ಮತ್ತು ತುರ್ತು ರಕ್ಷಣೆಗೆ ಸಿಬ್ಬಂದಿಗಳ ಮಾಹಿತಿ ಕ್ರೂಡೀಕರಣ ಕಾರ್ಯ ಆರಂಭಗೊoಡಿದ್ದು, ಇವರುಗಳಿಗೆ ಮುಖ್ಯ ತರಬೇತುದಾರರಿಂದ ಮೊಬೈಲ್ ತಂತ್ರಾoಶದ ಬಳಕೆ ಕುರಿತು ತರಬೇತಿ ಕಾರ್ಯಕ್ರಮ ನಡೆಯಲಿದೆ. ಅಲ್ಲದೇ ಜಿಲ್ಲೆಯ ಎಲ್ಲಾ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೂ ಕ್ಷೇತ್ರ ಮೌಲ್ಯಮಾಪನ ಕುರಿತು ತರಬೇತಿ ನಡೆಯಲಿದ್ದು,ಜನವರಿ 2022 ರ ಅಂತ್ಯದೊಳಗೆ ಭೌಗೋಳಿಕ ಮಾಹಿತಿ ತಂತ್ರಜ್ಞಾನ ಆಧಾರಿತ ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆಯ ಕರಡು ರಚಿಸುವ ಗುರಿ ಹೊಂದಲಾಗಿದೆ.

ಯೋಜನೆಗೆ ಅಗತ್ಯವಾದ ವಿವಿಧ ಇಲಾಖೆಗಳ ಅಧಿಕೃತ ಮಾಹಿತಿ ಮತ್ತು ದತ್ತಾಂಶ ಸಂಗ್ರಹಣೆಯಲ್ಲಿ ಸಮನ್ವಯತೆ ಮತ್ತು ಮೇಲ್ವಿಚಾರಣೆ ಅತ್ಯಗತ್ಯವಾಗಿದ್ದು ಮಾಹಿತಿ, ದತ್ತಾಂಶ ಸಂಗ್ರಹಣೆ ಮತ್ತು ಅವುಗಳನ್ನು ಅಧಿಕೃತಗೊಳಿಸಲು ನೋಡಲ್ ಅಧಿಕಾರಿಗಳನ್ನು ನಿಯೋಜಿಸಿದೆ.

ಯೋಜನೆಯು ಸಂಪೂರ್ಣವಾಗಿ ಸಿದ್ದಗೊಂಡ ನಂತರ, ಅದರ ವಿವರಗಳನ್ನು ವೆಬ್‌ಸೈಟ್ ನಲ್ಲಿ ಸಾರ್ವಜನಿಕರೂ ಸಹ ವೀಕ್ಷಿಸುವಂತೆ ಅವಕಾಶ ಕಲ್ಪಿಸಲಾಗುವುದು. ಇದರಿಂದ ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿ ವಿಪತ್ತು ಸಂಭವಿಸಿದಾಗ ಲಭ್ಯವಿರುವ ಸುರಕ್ಷಾ ಉಪಕರಣಗಳು, ತುರ್ತು ಸಂದರ್ಭದಲ್ಲಿ ತೆರಳಬೇಕಾದ ಸಮೀಪದ ಸುರಕ್ಷಿತ ಸ್ಥಳಗಳು, ಅಲ್ಲಿಗೆ ತಲುಪಬೇಕಾದ ರಸ್ತೆ ಮಾರ್ಗ, ತಮ್ಮನ್ನು ಹುಡುಕಲು ಮತ್ತು ರಕ್ಷಿಸಲು ಸಂಪರ್ಕಿಸಬಹುದಾದ ಸಿಬ್ಬಂದಿಗಳ ಮಾಹಿತಿ ಎಲ್ಲವನ್ನೂ ವೀಕ್ಷಿಸಲು ಸಾಧ್ಯವಾಗಲಿದೆ.

ಯಾವುದೇ ಹೊಸ ಯೋಜನೆಗಳ ಅನುಷ್ಠಾನ ಸಂದರ್ಭದಲ್ಲಿ ಮೊದಲು ಪ್ರಾಯೋಗಿಕವಾಗಿ ಕೆಲವು ಜಿಲ್ಲೆಗಳಲ್ಲಿ ಅನುಷ್ಠಾನ ಮಾಡಿ, ಅದರ ಸಾಧಕ ಭಾದಕಗಳನ್ನು ತಿಳಿದು ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೆ ತರುವುದು ಸಾಮಾನ್ಯ. ರಾಜ್ಯದಲ್ಲಿ ಪ್ರಮುಖ ಯೋಜನೆಗಳನ್ನು ಪೈಲಟ್ ಆಗಿ ಉಡುಪಿ ಜಿಲ್ಲೆಯಲ್ಲಿ ಆಯೋಜಿಸುತ್ತಿದ್ದು, ಜಿಲ್ಲೆಯಲ್ಲಿ ಪ್ರಾಯೋಗಿಕ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿದ್ದು,ಇಲ್ಲಿ ಯೋಜನೆ ಯಶಸ್ವಿಯಾದರೆ ರಾಜ್ಯದಲ್ಲೇ ಯಶಸ್ವಿಯಾಗುತ್ತದೆ ಎಂಬ ಮಾತು ಇದೆ. ದೇಶದಲ್ಲೇ ಪ್ರಥಮವಾಗಿ ಪ್ರಾಯೋಗಿಕವಾಗಿ ಜಾರಿಯಾಗುತ್ತಿರುವ ಭೌಗೋಳಿಕ ಮಾಹಿತಿ ತಂತ್ರಜ್ಞಾನ ಆಧಾರಿತ ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆಯನ್ನೂ ಕೂಡಾ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನ ಮಾಡಲು ಯೋಜನೆ ರೂಪಿಸಲಾಗಿದೆ.

ತುರ್ತು ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುವ ರೀತಿಯಲ್ಲಿ, ಎಲ್ಲಾ ಅತ್ಯಾವಶ್ಯಕ ಸೌಲಭ್ಯಗಳ ಮಾಹಿತಿ ಒಂದೇ ಕಡೆ ದೊರೆಯುವಂತೆ ಮಾಹಿತಿಗಳು ಕ್ರೂಡೀಕೃತವಾಗಿ ಲಭ್ಯವಿದ್ದಲ್ಲಿ,ಯಾವುದೇ ರೀತಿಯ ವಿಳಂಬವಿಲ್ಲದೇ ಶೀಘ್ರದಲ್ಲಿ ರಕ್ಷಣಾ ಕಾರ್ಯಗಳನ್ನು ಮಾಡಲು ಅನುಕೂಲವಾಗುತ್ತದೆ,ಇದಕ್ಕೆ ಭೌಗೋಳಿಕ ಮಾಹಿತಿ ತಂತ್ರಜ್ಞಾನ ಆಧಾರಿತ ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆ ನೆರವು ನೀಡಲಿದೆ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Vishwa News 24

Recent Posts

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ – vishwanews24

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ…

12 hours ago

ಮಂಗಳೂರು: ದಸರಾ ರಜೆ ವೇಳೆ ಸೆಮಿಸ್ಟರ್ ಪರೀಕ್ಷೆ: ಖಾಸಗಿ ಕಾಲೇಜು ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ – vishwanews24

ಮಂಗಳೂರು: ದಸರಾ ರಜೆ ವೇಳೆ ಸೆಮಿಸ್ಟರ್ ಪರೀಕ್ಷೆ: ಖಾಸಗಿ ಕಾಲೇಜು ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಮಂಗಳೂರು: ದಸರಾ  ಸಂಭ್ರಮದ ನಡುವೆಯೇ…

13 hours ago

ಮಂಗಳೂರು : ದಸರಾ ಉದ್ಘಾಟನೆಗೆ ಸಿಎಂ ಗೈರು ; ಕರಾವಳಿ ತೀವ್ರ ಜನರಲ್ಲಿ ಅಸಮಾಧಾನ  : ಅಕ್ಷಿತ್ ಸುವರ್ಣ  – vishwanews24

ಮಂಗಳೂರು : ದಸರಾ ಉದ್ಘಾಟನೆಗೆ ಸಿಎಂ ಗೈರು ; ಕರಾವಳಿ ತೀವ್ರ ಜನರಲ್ಲಿ ಅಸಮಾಧಾನ  : ಅಕ್ಷಿತ್ ಸುವರ್ಣ   ಮಂಗಳೂರು:…

13 hours ago

ಮಂಗಳೂರು: ಅಕ್ರಮ ಸಂಬಂಧದ ಶಂಕೆ ; ಪತ್ನಿಯನ್ನು ಚೂರಿಯಿಂದ ಇರಿದು ಕೊಂದ ಪತಿ – vishwanews24

ಮಂಗಳೂರು: ಅಕ್ರಮ ಸಂಬಂಧದ ಶಂಕೆ ; ಪತ್ನಿಯನ್ನು ಚೂರಿಯಿಂದ ಇರಿದು ಕೊಂದ ಪತಿ ಮಂಗಳೂರು: ಅಕ್ರಮ ಸಂಬಂಧದ ಶಂಕೆಯ ಹಿನ್ನೆಲೆ…

13 hours ago

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ – vishwanews24

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ ಮಂಗಳೂರು: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಗಳಮುಖಿಯರು ಅಕ್ರಮ…

2 days ago

ಉಡುಪಿ ನಗರಸಭೆ ಬಾಕಿ ಕಾಮಗಾರಿ ಶೀಘ್ರ ಆರಂಭಕ್ಕೆ ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ – vishwanews24

ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ…

2 days ago