ವಿಶಾಖಪಟ್ಟಣ,: ಆಂಧ್ರ ಪ್ರದೇಶದ ವಿಶಾಖ ಸಾಗರ ನಗರ ಬೀಚ್ನಲ್ಲಿ ಅಪಾಯಕಾರಿ ಹಾವೊಂದು ಪತ್ತೆಯಾಗಿದೆ. ಸುಮಾರು 5 ಅಡಿ ಉದ್ದವಿರುವ ಹಾವು ಸ್ಥಳೀಯ ಮೀನುಗಾರರ ಬಲೆಗೆ ಬಿದ್ದಿದೆ.
ಮೊದ ಮೊದಲು ಹಾವನ್ನು ಮೀನು ಅಂದುಕೊಂಡಿದ್ದ ಮೀನುಗಾರರು ಅದನ್ನು ಹತ್ತಿರದಿಂದ ನೋಡಿದ ಬಳಿಕ ನಿಬ್ಬೆರಗಾಗಿದ್ದಾರೆ. ಬಳಿಕ ಆ ಮೀನನ್ನು ಮರಳಿ ಸಮುದ್ರಕ್ಕೆ ಬಿಡಲಾಯಿತು. ಹಾವಿನ ಬಗ್ಗೆ ಮೀನುಗಾರಿಕೆ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದ್ದು, ಅದೊಂದು ಅಪಾಯಕಾರಿ ಹಾವು ಎಂದಿದ್ದಾರೆ. ಅದರ ವೈಜ್ಞಾನಿಕ ಹೆಸರು ‘ಹೈಡ್ರೋಫಿಸ್ ಗ್ರಾಸಿಲಿಸ್’ ಎಂದು ತಿಳಿಸಿದರು.
ಈ ಮೀನು ಹೆಚ್ಚಾಗಿ ಆಳ ಸಮುದ್ರದಲ್ಲಿ ಸುತ್ತಾಡುತ್ತವೆ. ಇದನ್ನು ಸ್ಥಳೀಯವಾಗಿ ಸಮುದ್ರ ಹಾವೆಂದು ಮೀನುಗಾರರು ಕರೆಯುತ್ತಾರೆ. ಸಣ್ಣ ಸಣ್ಣ ಮೀನುಗಳನ್ನು ತಿಂದು ಬದುಕುಳಿಯುತ್ತವೆ. ಆಹಾರವನ್ನು ಹುಡುಕಾಡುವ ಸಂದರ್ಭದಲ್ಲಿ ಈ ಹಾವು ಮೀನುಗಾರರ ಬಲೆಗೆ ಸಿಲುಕಿದೆ ಎನ್ನಲಾಗಿದೆ.
ಇನ್ನು ಈ ಹಾವು ಸಮುದ್ರದಲ್ಲಿ ಅತ್ಯಂತ ವೇಗವಾಗಿ ಚಲಿಸುತ್ತದೆ. ಅಂದರೆ, ಕಣ್ಣು ಮಿಟುಕಿಸುವುದರಲ್ಲಿ ನಮ್ಮಿಂದ ಮಾಯವಾಗಿಬಿಡುತ್ತವೆಯಂತೆ. ಈ ಹಾವೇನಾದರೂ ಕಡಿದರೆ, ತಕ್ಷಣ ವೈದ್ಯರ ನೆರವು ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಬಹು ಬೇಗ ಸಾವು ಸಂಭವಿಸುತ್ತದೆ. ಈ ಹಾವು ಮುಂಜಾನೆ ಮೀನಿನ ಬಲೆಗೆ ಬಿದ್ದಿದೆ. ರಾತ್ರಿಯಾಗಿದ್ದರೆ ಕಾಣುತ್ತಿರಲಿಲ್ಲ. ಅದರಿಂದ ಅಪಾಯ ಉಂಟಾಗುವ ಸಾಧ್ಯತೆ ಇತ್ತು. ಸದ್ಯ ಗೊತ್ತಾಗಿದ್ದು, ಒಳ್ಳೆಯದಾಯಿತು ಎಂದು ಮೀನುಗಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…
ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…
ಅಕ್ರಮ ಎಸ್‌ಐಆರ್ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್ ಸಂಚು : ಶೋಭಾ ಕರಂದ್ಲಾಜೆ ಗಂಭೀರ…
ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…
ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…