ಉಡುಪಿ : ಶಾಸಕ ಕೆ.ಪಿ. ನಂಜುಂಡಿ ವಿಶ್ವಕರ್ಮ ರವರ ನಾಯಕತ್ವದಲ್ಲಿ ವಿಶ್ವಕರ್ಮ ಸಮಾಜ ಹಾಗೂ ಬಿಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಸಂಘಟನೆ ಬಲ ಮಾಡಿರುವ ವಿಚಾರ ಎಲ್ಲಾರಿಗೂ ಗೊತ್ತಿದೆ ಆದರೆ ಸದ್ಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತ್ರ ವಿಶ್ವಕರ್ಮ ಸಮಾಜವನ್ನು ಇಭ್ಭಾಗ ಮಾಡಲು ಯತ್ನಿಸುತ್ತಿದ್ದಾರೆ ಮತ್ತು ಭ್ರಷ್ಟಾಚಾರ ಆರೋಪದಲ್ಲಿ ಎ.ಸಿ.ಬಿ ವಿಚಾರಣೆ ಎದುರಿಸುತ್ತಿರುವ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರನನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ದ ಉಡುಪಿ ಜಿಲ್ಲಾಧ್ಯಕ್ಷ ನೇರಂಬಳ್ಳಿ ರಮೇಶ್ ಆಚಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಾಬು ಪತ್ತಾರ ಮೂಲಕ ಮಠಗಳಿಗೆ ಅನುದಾನ ನೀಡುವುದಾಗಿ ಆಮಿಷ ಒಡ್ಡಿ ದಿನಾಂಕ:24/06/2022 ರಂದು ವಿಧಾನಸೌಧದ ಮೂರನೇ ಮಹಡಿಯಲ್ಲಿ ಸಭೆ ನಡೆಸಿ ಸಮಾಜಕ್ಕೆ ಮುಜಗರ ತಂದಿದ್ದಾರೆ ಎಂದರು.
ಭಾರತೀಯ ಜನತಾ ಪಕ್ಷವು ಶಿಸ್ತಿನ ಪಕ್ಷವಾಗಿದ್ದು, ಅದೇ ಪಕ್ಷದಿಂದ ಶಾಸಕರಾಗಿ ಶ್ರೀ ಕೆ.ಪಿ. ನಂಜುಂಡಿ ವಿಶ್ವಕರ್ಮ ರವರು ಇರುವಾಗ ಅವರಿಗೆ ಆಹ್ವಾನ ನೀಡದೆ ಗುಟ್ಟಾಗಿ ಸಭೆಯನ್ನು ಮಾಡಿ ಪಕ್ಷಕ್ಕೆ ಹಾಗೂ ಸರ್ಕಾರದ ಶಿಷ್ಟಾಚಾರಕ್ಕೆ ಕಳಂಕ ತಂದಿರುತ್ತಾರೆ ಎಂದು ಅವರು ಆರೋಪಿಸಿದರು.
ಹಾಗಾಗಿ ಜಾತಿ ಜಾತಿಯೊಳಗೆ ಭಿನ್ನಮತ ಸೃಷ್ಟಿಸಿ ಒಂದು ಸಮುದಾಯವನ್ನು ಛಿದ್ರಗೊಳಿಸಲು ಯತ್ನಿಸುವ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯನ್ನು ತಕ್ಷಣ ಸಂಪುಟದಿಂದ ಕೈ ಬಿಡಬೇಕು ಮಾತ್ರವಲ್ಲದೆ ಇನ್ನುಮುಂದಿನ ದಿನಗಳಲ್ಲಿ ಯಾವುದೇ ಸಮಾಜಗಳ ನಡುವೆ ಒಡಕು ಸೃಷ್ಟಿಸಬಾರದಾಗಿ ಕಡಕ್ ವಾರ್ನಿಂಗ್ ಮುಖ್ಯಮಂತ್ರಿಗಳು ಹಾಗೂ ಪಕ್ಷದ ಹಿರಿಯರು ಮಾಡಬೇಕು ಎಂದು ಕೋಟಾ ರಾಮಕೃಷ್ಣ ಆಚಾರ್ ಹೇಳಿದರು.
ವಿಶ್ವಕರ್ಮ ಸಮಾಜದಲ್ಲಿ ಸುಮಾರು 41 ಪಂಗಡಗಳಿದ್ದು ಅದರಲ್ಲಿ ಕೇವಲ ಎರಡು ಪಂಗಡದವರ ಜೊತೆ ಮಾತ್ರ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಭೆ ನಡೆಸಿ ಉಳಿದ 39 ಪಂಗಡದವರಿಗೆ ಮಾಹಿತಿ ನೀಡದೆ ಇರುವುದು ಮತ್ತು ಕೆ.ಪಿ ನಂಜುಡಿಯ ಗಮನಕ್ಕೆ ತಾರದೇ ಈ ರೀತಿಯಾಗಿ ವರ್ತಿಸಿರುವುದು ಕೂಡ ಖಂಡನೀಯವಾಗಿದೆ.ಇದೇ ರೀತಿ ಮುಂದುವರಿದಲ್ಲಿ ಕರ್ನಾಟಕ ರಾಜ್ಯದೆಲ್ಲೆಡೆ ಸಚಿವರ ವಿರುದ್ಧ ಪ್ರತಿಭಟನೆಗೆ ಕರೆ ನೀಡಲಾಗುವುದೆಂದು ಯುವ ಘಟಕ ಅಧ್ಯಕ್ಷ ಕೋಟಾ ರಾಮಕೃಷ್ಣ ಅಚಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗಂಗಾಧರ್ ಆಚಾರ್ ಉದ್ದಲ್ ಗುಡ್ಡೆ,ರುಕ್ಮಿನಿ ರಮೇಶ್ ಅಚಾರ್,ನಾರಾಯಣ ಆಚಾರ್ ಬೈಂದೂರು ,ರೋಶನ್ ಆಚಾರ್ ಕೋಟಾ ಉಪಸ್ಥಿತರಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…
ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…
ಅಕ್ರಮ ಎಸ್‌ಐಆರ್ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್ ಸಂಚು : ಶೋಭಾ ಕರಂದ್ಲಾಜೆ ಗಂಭೀರ…
ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…
ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…