ವಿಶ್ವದ ಪ್ರಬಲ ನಾಯಕರಾಗಿ ಹೊರಹೊಮ್ಮಿದ ನರೇಂದ್ರ ಮೋದಿ -Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್

ಲಂಡನ್,: ಎರಡನೇ ಬಾರಿ ಚುನಾವಣೆ ಗೆದ್ದು, ಪ್ರಧಾನ ಮಂತ್ರಿಯಾಗಿರುವ ನರೇಂದ್ರ ಮೋದಿ ಜಾಗತಿಕ ಮಟ್ಟದಲ್ಲಿ ಮತ್ತೊಂದು ಹಿರಿಮೆಗೆ ಪಾತ್ರರಾಗಿದ್ದಾರೆ.

ಬ್ರಿಟನ್ ನಿಯತಕಾಲಿಕೆ ‘ಬ್ರಿಟಿಷ್ ಹೆರಾಲ್ಡ್’ ನಡೆಸಿದ ಓದುಗರ ಸಮೀಕ್ಷೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು ಹಿಂದಿಕ್ಕಿ ವಿಶ್ವದ ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದಾರೆ.

ವಿಶ್ವದ ಅತ್ಯಂತ ಬಲಿಷ್ಟ ವ್ಯಕ್ತಿ ಯಾರು ಎಂಬ ವಿಷಯದ ಮೇಲೆ ‘ಬ್ರಿಟಿಷ್ ಹೆರಾಲ್ಡ್’ ಓದುಗರ ಸಮೀಕ್ಷೆ ನಡೆಸಿದ್ದು, ಇದರಲ್ಲಿ ಶೇಕಡಾ 30.9 ಮತ ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಶೇಕಡಾ 29.9 ಮತ ಗಳಿಸುವ ಮೂಲಕ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಶೇಕಡಾ 21.9 ಮತ ಗಳಿಸುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಶೇಕಡಾ 18.1 ಮತ ಗಳಿಸುವ ಮೂಲಕ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಬ್ರಿಟಿಷ್ ಹೆರಾಲ್ಡ್ ಪತ್ರಿಕೆ ಈ ಸ್ಪರ್ಧೆಗೆ ಜಾಗತಿಕ ಮಟ್ಟದ 25ಕ್ಕೂ ಹೆಚ್ಚು ನಾಯಕರನ್ನು ತನ್ನ ಓದುಗರಿಗೆ ಸೂಚಿಸಿದ್ದು, ಅಂತಿಮ ಸುತ್ತಿಗೆ ಈ ನಾಲ್ವರು ಆಯ್ಕೆಯಾಗಿದ್ದರು.

ಇದರಲ್ಲಿ ನರೇಂದ್ರ ಮೋದಿ ಅವರು ಪ್ರಥಮರಾಗಿ ಹೊರಹೊಮ್ಮಿದ್ದಾರೆ. ಮೋದಿಯವರ ವಿದೇಶಾಂಗ ನೀತಿ, ಉಗ್ರವಾದದ ವಿರುದ್ಧ ಕಠಿಣ ಹೋರಾಟದ ಕುರಿತ ಅವರ ನಿಲುವು ಈ ಆಯ್ಕೆಗೆ ಕಾರಣವೆಂದು ಹೇಳಲಾಗಿದೆ.
ಸಮೀಕ್ಷೆಯ ಪ್ರಕಾರ, ವಿಶ್ವದ ಪ್ರಮುಖ ನಾಲ್ಕು ನಾಯಕರು ಪಡೆದ ವೋಟಿಂಗ್ ಶೇಕಡಾವಾರು ಇಂತಿದೆ:

1. ನರೇಂದ್ರ ಮೋದಿ – ಭಾರತ – ಶೇ. 30.9

2. ಡೊನಾಲ್ಡ್‌ ಟ್ರಂಪ್‌ – ಅಮೆರಿಕ – ಶೇ. 29.9

3. ಕ್ಸಿ ಜಿನ್‌ಪಿಂಗ್‌ – ಚೀನಾ – ಶೇ. 21.9

4. ವ್ಲಾದಿಮಿರ್‌ ಪುತಿನ್‌ – ರಷ್ಯಾ – ಶೇ. 18.1