ವಿಶ್ವನಾಯಕ ಪ್ರಧಾನಿ ಮೋದಿಯವರ ಬಗ್ಗೆ ಮಾತಾಡೋಕ್ಕೆ ನಿಮಗೆ ಯಾವುದೇ ನೈತಿಕತೆ ಇಲ್ಲ : ರಮ್ಯಾಗೆ ಬುಲೆಟ್ ಪ್ರಕಾಶ್ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು, ,: ಕನ್ನಡದ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರು ನಟಿ ರಮ್ಯಾರನ್ನು ಪ್ರಧಾನಿ ಮೋದಿಗೆ ಟಾಂಗ್ ಕೊಟ್ಟ ಕಾರಣಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್‌ಗೆ ಹೋಲಿಸುವಂತೆ ಫೋಟೊ ಸಹಿತ ಟ್ವೀಟ್‌ ಮಾಡಿರುವ ರಮ್ಯಾ ನೆಟ್ಟಿಗರ ಕೋಪಕ್ಕೆ ಗುರಿಯಾಗಿದ್ದಾರೆ. ರಮ್ಯಾ, ಹಲವು ಬಾರಿ ಪ್ರಧಾನಿ ಮೋದಿ ವಿರುದ್ಧ ಟ್ವಿಟರ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಈಗ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ ಮಗುವೊಂದರ ಎರಡೂ ಕಿವಿ ಹಿಡಿದೆಳೆಯುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರ ಪಕ್ಕದಲ್ಲೆ ಪ್ರಧಾನಿ ಮೋದಿ ಕೂಡ ಮಗುವಿನ ಕಿವಿ ಎಳೆಯುತ್ತಿರುವ ಫೋಟೊ ಅಪ್‌ಲೋಡ್‌ ಮಾಡಿದ್ದಾರೆ.

ಈ ಬಗ್ಗೆ ಪೋಸ್ಟ್ ಮಾಡಿರುವ ನಟ ಬುಲೆಟ್ ಪ್ರಕಾಶ್ ರಮ್ಯ ಮೇಡಮ್ (ಪದ್ಮಾವತಿ) ಈ ಮಗುವಿನ ವಯಸ್ಸಿನಲ್ಲಿ ನಿಮ್ಮ ತಂದೆಯವರು ನಿಮ್ಮ ಕಿವಿ ಹಿಂಡಿದ್ದರೆ ನೀವು ಹೀಗೆ ಆಗುತ್ತಿರಲಿಲ್ಲ. ನೀವು ಎರಡು ಚುನಾವಣೆಗಳಲ್ಲಿ ನಿಮ್ಮ ಹಕ್ಕು ಅಂದರೆ ಮತ ಚಲಾಯಿಸದವರು. ನಿಮಗೆ ವಿಶ್ವನಾಯಕ ನರೇಂದ್ರ ಮೋದಿಯವರ ಬಗ್ಗೆ ಮಾತಾಡೋಕ್ಕೆ ಯಾವುದೇ ನೈತಿಕತೆ ಇಲ್ಲ… ನಾಳೆ ವೀಡಿಯೋ ಮೂಲಕ ಉತ್ತರ ಕೊಡುತ್ತೀನಿ… ಎಂದು ಹೇಳಿದ್ದಾರೆ.

ಜನರಿಗೆ ಈ ರೀತಿಯ ತಪ್ಪು ಸಂದೇಶಗಳನ್ನು ರವಾನಿಸುವುದು ಸರಿಯಲ್ಲ. ಒಬ್ಬ ವಿಶ್ವನಾಯಕರ ವಿರುದ್ಧ ಮಾತಾಡೋದು ಸರಿಯಲ್ಲ. ಇಡೀ ಜಗತ್ತು ಅವರನ್ನು ಗೌರವದಿಂದ ಕಾಣುತ್ತದೆ. ಸೆಲ್ಯೂಟ್ ಹೊಡೆಯುತ್ತದೆ. ನಮ್ಮ ಭಾರತ ದೇಶ ಎಲ್ಲೋ ಇತ್ತು. ಆದ್ರೆ ಇಂದು ಈ ದೇಶವನ್ನು ಪ್ರಪಂಚದಾದ್ಯಂತ `ಹಿಂದೂಸ್ತಾನ’ ಎಂದು ಹೇಳುವ ಮಟ್ಟಿಗೆ ಇಂದು ಭಾರತವನ್ನು ಅವರು ಬೆಳೆಸಿದ್ದಾರೆ ಅಂದರು.

ಇಂತಹ ಒಬ್ಬ ವಿಶ್ವನಾಯಕನ ಬಗ್ಗೆ ಮಾತನಾಡಲು ನಿಮಗೆ ಯೋಗ್ಯತೆ, ಅರ್ಹತೆ ಹಾಗೂ ಜವಾಬ್ದಾರಿಯನ್ನು ಬಿಟ್ಟು ಹೊರಬಂದಿದ್ದೀರಿ. ಇದು ನಿಮಗೆ ಶೋಭೆ ತರುವಂತದ್ದಲ್ಲ ಎಂದು ಕಿಡಿಕಾರಿದ್ದಾರೆ.