ವೀಕೆಂಡ್ ಕರ್ಪ್ಯೂ, ನೈಟ್ ಕರ್ಪ್ಯೂ : ನಾಳೆ ಮುಖ್ಯಮಂತ್ರಿ ಬೊಮ್ಮಾಯಿ ಮಹತ್ವದ ಸಭೆ – Vishwanews24
ವೀಕೆಂಡ್ ಕರ್ಪ್ಯೂ, ನೈಟ್ ಕರ್ಪ್ಯೂ : ನಾಳೆ ಮುಖ್ಯಮಂತ್ರಿ ಬೊಮ್ಮಾಯಿ ಮಹತ್ವದ ಸಭೆ – Vishwanews24
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸಂಖ್ಯೆ ಇಳಿಮುಖವಾದ ಹಿನ್ನಲೆಯಲ್ಲಿ ವೀಕೆಂಡ್ ಕರ್ಪ್ಯೂ, ನೈಟ್ ಕರ್ಪ್ಯೂ ವಿಸ್ತರಣೆ ಕುರಿತು ನಾಳೆ ತಜ್ಞರ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ನಡೆಸಲಿದ್ದಾರೆ.
ಕೊರೊನಾ ಮಹಾಮಾರಿ ಇಡೀ ರಾಜ್ಯವನ್ನು ಅಯೋಮಯ ಪರಿಸ್ಥಿತಿಗೆ ದೂಡಿದ್ದು, ಲಾಕ್ಡೌನ್ ಜಾರಿಯಿಂದ ಜನಜೀವನಕ್ಕೆ ತೊಂದರೆಯಾಗುತ್ತಿದೆ ಎಂದು ಆಡಳಿತ ಪಕ್ಷದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದು, ಹೀಗಾಗಿ ಪಕ್ಷದ, ಸಾರ್ವಜನಿಕರ ಒತ್ತಡಕ್ಕೆ ಮಣಿದು ಕರ್ಫ್ಯೂ ತೆರವುಗೊಳಿಸಬೇಕೇ ಅಥವಾ ತಜ್ಞರ ಅಭಿಪ್ರಾಯ ಪಾಲನೆ ಮಾಡಬೇಕೆ ಎಂಬ ಲೆಕ್ಕಚಾರದಲ್ಲಿ ಸರ್ಕಾರವಿದೆ.
ಉದ್ಯಮಿಗಳು, ವರ್ತಕರು, ಹೋಟೆಲ್ ಮಾಲೀಕರು, ಪಬ್ , ಬಾರ್ ಓನರ್ಗಳು, ಬೀದಿ ಬದಿ ವ್ಯಾಪಾರಿಗಳು, ಜಿಮ್ ಮಾಲೀಕರು, ಹೀಗೆ ವಿವಿಧ ವಲಯಗಳ ಉದ್ಯಮಿಗಳು ವ್ಯಾಪಾರ ವಹಿವಾಟಿಗೆ ಅವಕಾಶ ಕೊಟ್ಟು ವೀಕೆಂಡ್, ನೈಟ್ ಕರ್ಫ್ಯೂ ಹಿಂಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.
