ವೈದ್ಯೆ ಹತ್ಯೆ ಪ್ರಕರಣ : ನಾಳೆ ದೇಶಾದ್ಯಂತ ವೈದ್ಯರ ಪ್ರತಿಭಟನೆ ; 24 ಗಂಟೆಗಳ ಕಾಲ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯ – vishwanews24

Featured, ರಾಷ್ಟ್ರ ನ್ಯೂಸ್

ವೈದ್ಯರ ಪ್ರತಿಭಟನೆ : ದೇಶಾದ್ಯಂತ 24 ಗಂಟೆಗಳ ಕಾಲ ಸರ್ಕಾರಿ-ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿಗಳು, ಶಸ್ತ್ರಚಿಕಿತ್ಸೆ ಬಂದ್

ನವದೆಹಲಿ: ಕೊಲ್ಕತ್ತಾದ ಆರ್.ಜಿ.ಕಾರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಉಗ್ರ ಸ್ವರೂಪ ಪಡೆದುಕೊಂಡಿದೆ.

ವೈದ್ಯರ ಪ್ರತಿಭಟನೆಗೆ ಭಾರತೀಯ ವೈದ್ಯಕೀಯ ಸಂಘ (IMA) ಬೆಂಬಲ ಸೂಚಿಸಿದ್ದು ಆಗಸ್ಟ್ 17ರಂದು 24 ಗಂಟೆಗಳ ಕಾಲ ದೇಶಾದ್ಯಂತ ಸರ್ಕಾರಿ, ಖಾಸಗಿ ಮತ್ತು ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಎಲ್ಲಾ ಒಪಿಡಿಗಳು ಮತ್ತು ಶಸ್ತ್ರಚಿಕಿತ್ಸೆಗಳು ಕಾರ್ಯನಿರ್ವಹಿಸುವುದಿಲ್ಲ ಹೇಳಿದೆ.

ಶನಿವಾರ ಬೆಳಿಗ್ಗೆ 6ರಿಂದ ಭಾನುವಾರ ಬೆಳಿಗ್ಗೆ 6 ಗಂಟೆವರೆಗೆ ಅಂದರೆ 24 ಗಂಟೆಗಳ ಕಾಲ ಎಲ್ಲ ಸೇವೆಗಳಿಂದ ವೈದ್ಯರು ದೂರ ಉಳಿಯಲಿದ್ದಾರೆ ಎಂದು ಐಎಂಎ ಪ್ರಕಟಿಸಿದೆ. ಆದಾಗ್ಯೂ, ಒಪಿಡಿಗಳು ಬಂದ್ ಆಗಿದ್ದರೂ ಅಪಘಾತ ಮತ್ತು ತುರ್ತು ಸೇವೆಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಐಎಂಎ ಹೇಳಿದೆ.

ಮಂಗಳೂರು : ರಸ್ತೆ ಅಪಘಾತ- ಮಹಿಳೆ ಸಾವು – vishwanews24

Leave a Reply