Featured

ವೈಯಕ್ತಿಕ ಜೀವನದ ಕಾರಣಗಳಿಂದ ತಮ್ಮ ಹುದ್ದೆಗೆ ರಾಜೀನಾಮೆ : ಡಿಸಿಪಿ ಅಣ್ಣಾಮಲೈ -Vishwanews24

ಬೆಂಗಳೂರು: ಐಪಿಎಸ್ ಹುದ್ದೆಗೆ ಏಕೆ ರಾಜೀನಾಮೆ ನೀಡುತ್ತಿದ್ದೇನೆ ಎಂಬುದುನ್ನು ಡಿಸಿಪಿ ಅಣ್ಣಾಮಲೈ ರಿವೀಲ್ ಮಾಡಿದ್ದಾರೆ.

ಖಡಕ್ ಐಪಿಎಸ್ ಆಧಿಕಾರಿ ಅಣ್ಣಾಮಲೈ ಇಂದೇ ಹುದ್ದೆಗೆ ಡಿಜಿ ಅಂಡ್ ಐಜಿಪಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ. ಡಿಜಿಪಿ ಮೂಲಕ ರಾಜ್ಯ ಗೃಹ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ರವಾನಿಸಲಾಗಿದೆ. ಬಳಿಕ ಗೃಹ ಕಾರ್ಯದರ್ಶಿಗಳು ಅಲ್ಲಿಂದ ಕೇಂದ್ರ ಯುಪಿಎಸ್ಸಿಗೆ ರಾಜೀನಾಮೆ ಪತ್ರ ರವಾನಿಸಲಿದ್ದಾರೆ. ಅಣ್ಣಾಮಲೈ ರಾಜೀನಾಮೆಗೆ ತಂದೆ- ತಾಯಿ, ವೈಯಕ್ತಿಕ ಜೀವನದ ಕಾರಣ ಕೊಟ್ಟಿದ್ದಾರೆ.

ನನ್ನೆಲ್ಲಾ  ಸ್ನೇಹಿತರಿಗೆ ಹಾಗೂ ಹಿತೈಷಿಗಳಿಗೆ

ಎಲ್ಲರಿಗೂ ನನ್ನ ಶುಭಾಷಯಗಳು. ಕಳೆದ 2 ದಿನಗಳಿಂದಲೂ ನನ್ನ ರಾಜೀನಾಮೆ ಕುರಿತಾಗಿ ಎಲ್ಲೆಡೆ ಸುದ್ದಿ ಹರಿದಾಡ್ತಿದೆ. ಅದರ ಬಗ್ಗೆ ನಾನೊಂದು ಕ್ಲ್ಯಾರಿಟಿ ಕೊಡಲು ಬಯಸುತ್ತೇನೆ. ನಾನು ಇಂದು ಮೇ 28, 2019ರಂದು ಭಾರತೀಯ ಪೊಲೀಸ್ ಸೇವೆಗೆ ನನ್ನ ರಾಜೀನಾಮೆ ಸಲ್ಲಿಸಿದ್ದೇನೆ. ಪತ್ರ ವ್ಯವಹಾರ ಎಲ್ಲಾ ಪ್ರಕ್ರಿಯೆಗಳಿಗೂ ಕೆಲ ಸಮಯ ಹಿಡಿಯಬಹುದು. ನಾನು ರಾಜೀನಾಮೆ ನೀಡಲು 6 ತಿಂಗಳ ಹಿಂದೆಯೇ ಪ್ಲಾನ್ ಮಾಡಿದ್ದೆ. ಸರ್ವಿಸ್​​ಗೆ ಸೇರಿ 9 ವರ್ಷಗಳು ಕಳೆದವು. ಈ ಸಮಯದಲ್ಲಿ ನನ್ನ ಖಾಕಿಗೆ ಪ್ರತಿದಿನ ನ್ಯಾಯ ಒದಗಿಸಿದ್ದೇನೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಹೆಮ್ಮೆ ಇದೆ. ನಾನು ಸಹೋದ್ಯೋಗಿ ಹಾಗೂ ನನ್ನ ಜೊತೆ ಕೆಲಸ ಮಾಡಿದವ್ರನ್ನ ಯಾವತ್ತು ಮರೆಯಲ್ಲ. ಪೊಲೀಸ್ ಕೆಲಸ ಅಂದ್ರೆ ದೇವರಿಗೆ ಸಮೀಪ ಎಂದು ನಾನು ಭಾವಿಸಿದವನು. ಈ ಕಡಿಮೆ ಅವಧಿಯಲ್ಲಿ ಸುಮಾರು ಒತ್ತಡಗಳು ಕಠಿಣ ನಿರ್ಧಾರಗಳನ್ನ ನಿಭಾಯಿಸಿದ್ದೇನೆ. ಕೆಲಸದ ಒತ್ತಡದಿಂದ ನನ್ನ ಫ್ಯಾಮಿಲಿಗೆ ಟೈಮ್ ಕೊಡಲು ಆಗ್ತಿಲ್ಲ. ವೃತ್ತಿಗೆ ಸೇರಿದ ನಂತರ ಒಂದೇ ಒಂದು ಮದುವೆ ಅಟೆಂಡ್ ಮಾಡಿದ್ದೀನಿ. ನಾನು ಇಲ್ಲಿ ಇರೋದಕ್ಕೆ ಕೆಲವು ಪ್ರಮುಖರು ಕಾರಣರಾಗಿದ್ರು. ಆದ್ರೆ ಕೊನೇಪಕ್ಷ ಅವರ ಅಂತ್ಯಕ್ರಿಯೆಗೂ ಹೋಗೋದಕ್ಕೆ ಆಗ್ಲಿಲ್ಲ. ನಾನು ಇವತ್ತು ಈ ಮಟ್ಟಕ್ಕೆ ಬೆಳೆಯೋಕೆ ಸಹಕರಿಸಿದ ಹಲವರಿಗೆ ನಾನು ಏನೂ ಮಾಡಲು ಸಾಧ್ಯವಾಗಲಿಲ್ಲ. ಇದು ನನ್ನನ್ನ ಆಗ್ಗಾಗ್ಗೆ ಚಿಂತನೆಗೆ ಈಡು ಮಾಡಿದ್ದು ಸುಳ್ಳಲ್ಲ.

ಕಳೆದ ವರ್ಷ ನಾನು ಕೈಗೊಂಡ ಕೈಲಾಸ ಮಾನಸ ಸರೋವರ ಯಾತ್ರೆ ನನ್ನ ಕಣ್ಣನ್ನ ತೆರೆಸಿದೆ. ಜೀವನದಲ್ಲಿ ಪ್ರಮುಖವಾದ ವಿಚಾರಗಳತ್ತ ತಿರುಗಿ ನೋಡುವಂತೆ ಮಾಡಿತು. ಅದರಲ್ಲೂ ಮಧುಕರ್ ಶೆಟ್ಟಿ ಸರ್ ನಿಧನ ನನ್ನ ಜೀವನದ ಬಗ್ಗೆ ಮತ್ತೆ ಪರೀಕ್ಷೆಗೊಳಪಡಿಸುವಂತೆ ಮಾಡಿತು. ದಕ್ಷ ಅಧಿಕಾರಿ ಮಧುಕರ್ ಶೆಟ್ಟಿ ಥರ ನನ್ನ ಜೀವನ ಆಗಬಾರದು. ಇದಕ್ಕಿಂತ ಉತ್ತಮ ಜೀವನ ಸಮಾಜಕ್ಕೆ ಮುಡಿಪು ಆಗಿ ಇಡಬೇಕು ಅನಿಸಿತ್ತು. ಬದುಕಿನ ಎಲ್ಲಾ ಮಜಲುಗಳಿಗೂ ಒಂದು ಕೊನೆ ಇದ್ದೇ ಇದೆ. ನನ್ನ ಖಾಕಿ ಬದುಕಿನ ಕೆಲಸ ಮುಗಿದಿದೆ.  ಖಾಕಿ ಜೀವನ ತೊರೆದಿರುವುದು ನನ್ನ ಉತ್ತಮ ನಿರ್ಧಾರ. ಆರು ತಿಂಗಳ ಹಿಂದೆಯೇ ರಾಜೀನಾಮೆ ನೀಡಲು ಪ್ಲಾನ್ ಮಾಡಿದ್ದೆ. ಎಲೆಕ್ಷನ್ ಮುಗಿಸದೇ ಹೋದ್ರೆ ಸರಿ ಹೋಗಲ್ಲ ಅಂತ ಎಲೆಕ್ಷನ್ ಬಂದೋಬಸ್ತ್ ಮುಗಿಸಿದ್ದೇನೆ. ನನ್ನ ಈ ನಿರ್ಧಾರದಿಂದ ಯಾರಿಗಾದರೂ ಬೇಸರವಾಗಿದ್ದಲ್ಲಿ ಕ್ಷಮೆ ಇರಲಿ.

ಮುಂದಿನ ನನ್ನ ನಿರ್ಧಾರ ?

ಹಾಗಾದರೆ ಮುಂದಿನ ನನ್ನ ನಿರ್ಧಾರ ಏನು ? ಜನ ಎಲ್ಲಾ ಮುಂದೇನು ಅಂತ ಕೇಳ್ತಿದ್ದಾರೆ. ನನಗೆ ದೊಡ್ಡ ದೊಡ್ಡ ಮಹತ್ವಾಕಾಂಕ್ಷೆಗಳಿಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯ. ನಂಗೆ ಸ್ವಲ್ಪ ಸಮಯದ ಅವಕಾಶವಿದೆ. ಜೀವನದಲ್ಲಿ ಕಳೆದುಕೊಂಡ ಸಣ್ಣ ಸಣ್ಣ ಆಸೆಗಳನ್ನ ಪೂರೈಸಿಕೊಳ್ಳಬೇಕಿದೆ. ಹಿಮಾಲಯ ಟ್ರೆಕ್ಕಿಂಗ್ ಹೋಗ್ತೀನಿ, ಫ್ಯಾಮಿಲಿಗೆ ಟೈಮ್ ಕೊಡ್ತೀನಿ. ಮಗ ಓದ್ತಿದ್ದಾನೆ ಅವನ ಜೊತೆ ಇರ್ತೀನಿ. ಅವನಿಗೆ ಉತ್ತಮ ತಂದೆಯಾಗ್ತೀನಿ. ನಮ್ಮ ಫಾರ್ಮ್ ಹೌಸ್ ಇದೆ ಅಲ್ಲಿ ವ್ಯವಸಾಯ ಮಾಡಬೇಕು. ಜೀವನವೇ ನಮಗೊಂದು ದೊಡ್ಡ ಅವಕಾಶ. ನಾನು ನನ್ನ ಕುಟುಂಬದತ್ತ ಹೊರಳಬೇಕಿದೆ. ಜೀವನ ಇನ್ನೂ ತುಂಬಾ ಇದೆ.

ವೃತ್ತಿ ಭಾಂಧವರನ್ನ ನಾನು ತುಂಬಾನೇ ಮಿಸ್ ಮಾಡ್ಕೊಂಡಿದ್ದೀನಿ. ಜೊತೆಗೆ ನನ್ನನ್ನ ಇಷ್ಟಪಟ್ಟ ಜನರನ್ನ ಕೂಡ. ಪ್ರಮುಖವಾಗಿ ಕಾರ್ಕಳ, ಉಡುಪಿ, ಚಿಕ್ಕಮಗಳೂರು ಮತ್ತು ಬೆಂಗಳೂರಿನ ಪ್ರಮುಖರನ್ನ. ನಾನು ನಿಮ್ಮೆಲ್ಲರ ಪ್ರೀತಿ ಮತ್ತು ನನ್ನ ಹಿರಿಯ ಅಧಿಕಾರಿಗಳ ಮಾರ್ಗದರ್ಶನಗಳನ್ನ ಮಿಸ್ ಮಾಡ್ಕೊತಿದೀನಿ. ಕಿರಿಯ ದರ್ಜೆಯ ಅಧಿಕಾರಿಗಳ ಶ್ರೇಯೋಭಿವೃದ್ಧಿಗೆ ನಾನು ಸಾಕಷ್ಟು ದುಡಿದಿದ್ದೇನೆ ಎಂಬ ಆತ್ಮ ತೃಪ್ತಿ ಇದೆ. ಅವರ ವೃತ್ತಿ ಬದುಕು ಮತ್ತು ದೈನಂದಿನ ಜೀವನ ಇನ್ನೂ ಹೆಚ್ಚಿನ ಅವಶ್ಯಕವಾಗಿ ಬೆಳಗಬೇಕಿದೆ. ನನ್ನಿಂದ ಯಾರಿಗಾದ್ರೂ ಯಾವುದೇ ಸಮಯದಲ್ಲಾದರೂ ಮನಸ್ಸಿಗೆ ನೋವುಂಟಾಗಿದ್ದರೆ ನನ್ನನ್ನು ಕ್ಷಮಿಸಿ.

ನಾನು ನಿಮ್ಮೆಲ್ಲರನ್ನೂ ಬಹುಮುಖ್ಯವಾಗಿ ನಿಮ್ಮೆಲ್ಲರ ಪ್ರೀತಿಯನ್ನ ಖಂಡಿತವಾಗಿ ಮಿಸ್ ಮಾಡಿಕೊಳ್ತಿನಿ.
ತುಂಬು ಪ್ರೀತಿಯಿಂದ
ಅಣ್ಣಾಮಲೈ

Vishwa News 24

Recent Posts

ಕುಂದಾಪುರ: ಹೋಂಸ್ಟೇ ಎನ್‌ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ – vishwanews24

ಕುಂದಾಪುರ: ಹೋಂ ಸ್ಟೇ ಎನ್‌ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…

1 day ago

ಉಚ್ಚಿಲ : ಕರಾವಳಿ ಭಾಗವಿಲ್ಲದೇ ರಾಜ್ಯಕ್ಕೆ ಹೆಚ್ಚಿನ ಬೆಲೆಯೇ ಇರುವುದಿಲ್ಲ :  ಮುಖ್ಯಮಂತ್ರಿ ಡಿ.ಕೆ.ಶಿ – vishwanews24

ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ  :…

1 day ago

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ ; ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು – vishwanews24

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ  : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…

1 day ago

ಉಡುಪಿ:  ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ – vishwanews24

ಉಡುಪಿ:  ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ    ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…

1 day ago

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ – vishwanews24

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…

2 days ago

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ – vishwanews24

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…

2 days ago