ಶಂಕರಪುರ ಸಾಯಿಬಾಬಾ ಮಂದಿರ ವತಿಯಿಂದ ಕರೋನ ಜಾಗೃತಿಗಾಗಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಪ್ರಚಾರ ವಾಹನ ಉದ್ಘಾಟನೆ.

Featured, ಉಡುಪಿ

ಶಂಕರಪುರ ಸಾಯಿಬಾಬಾ ಮಂದಿರ ವತಿಯಿಂದ ಕರೋನ ಜಾಗೃತಿಗಾಗಿ ಪ್ರಚಾರ ವಾಹನ ಉದ್ಘಾಟನೆ.

ಕಾಪು: ಶಂಕರಪುರ ಸಾಯಿ ಸಾಂತ್ವನ ಮಂದಿರದ ಧರ್ಮಧರ್ಶಿ ಗುರೂಜಿ ಸಾಯಿಈಶ್ವರ್ ಇವರ ಮುತುವರ್ಜಿಯಿಂದ ದ್ವಾರಕಾಮಾಹಿ ಸಾಯಿ ಬಾಬಾ ಮಂದಿರದಿಂದ ಕೋವಿಡ್ 19 ಬಗ್ಗೆ ಜನಜಾಗೃತಿಗಾಗಿ ವಾಹನ ಪ್ರಚಾರವನ್ನು  ಗುರುವಾರ  ಕಾಪು ಶಾಸಕರಾದ ಲಾಲಾಜಿ ಮೆಂಡನ್  ಚಾಲನೆಗೊಳಿಸಿದರು.

ತದನಂತರ ಕಾರ್ಯಕ್ರಮ ಉದ್ದೇಶಿಸಿ‌ ಮಾತಾಡಿ” ಜಿಲ್ಲೆಯಲ್ಲಿ ‌ವಿವಿಧ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರು ಗುರೂಜಿ ಸಾಯಿ ಈಶ್ವರ್ ಅವರ ಕಾರ್ಯ ಅತ್ಯಂತ ಶ್ಲಾಘನೀಯವಾಗಿದ್ದು ಕೊರೋನಾದಂತಹ ಈ ಸಂಧರ್ಭದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರಚಾರ ವಾಹನ ಚಾಲನೆ ಮಾಡಿರುವುದು ಅತ್ಯಂತ ಅಭಿನಂದನೀಯ ಎಂದರು.

ಕೊರೋನಾದಂತಹ ಲಾಕ್-ಡೌನ್ ಸಮಯದಲ್ಲಿ ಮಂದಿರದ ವತಿಯಿಂದ ಊಟೋಪಚಾರ ಹಾಗೂ ಕಿಟ್ ವಿತರಿಸುವ ಕಾರ್ಯ ಮಾಡಿದ್ದರು ಎಂದರು.

ಇದು ದ್ವಾರಕಾಮಾಹಿ ಶ್ರೀ ಸಾಯಿ ಬಾಬಾ ಮಂದಿರದ ವತಿಯಿಂದ ನಡೆಯುವ ರಾಜ್ಯದ ಪ್ರಥಮ ಕೋವಿಡ್ ೧೯ ಜಾಗೃತಿ ಪ್ರಚಾರ ವಾಹನವಾಗಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯರಾದ ಗೀತಾಂಜಲಿ ಸುವರ್ಣ, ಗ್ರಾಮ.ಪಂ. ಸದಸ್ಯರಾದ ಅಶೋಕ್ ರಾವ್,ಉಡುಪಿ‌ ಜಿಲ್ಲಾ ಬಿಜೆಪಿ  ಮಹಿಳಾ ಮೋರ್ಚ ಅಧ್ಯಕ್ಷೆ ವೀಣಾ ಶೆಟ್ಟಿ, ಸಾಯಿ ಮಂದಿರದ ಟ್ರಸ್ಟಿ ವಿಶ್ವನಾಥ ಸುವರ್ಣ ಉಪಸ್ಥಿತರಿದ್ದರು.