ಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಬೆಂಕಿ ಅವಘಡ; ಪ್ರಯಾಣಿಕರು ಸುರಕ್ಷಿತ -Vishwanews24
ಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಬೆಂಕಿ ಅವಘಡ; ಪ್ರಯಾಣಿಕರು ಸುರಕ್ಷಿತ -Vishwanews24
ನವದೆಹಲಿ: ಉತ್ತರ ಪ್ರದೇಶದ ಗಾಜಿಯಾಬಾದ್ ರೈಲು ನಿಲ್ದಾಣದಲ್ಲಿ ಶತಾಬ್ದಿ ಎಕ್ಸ್ಪ್ರೆಸ್ನ ಲಗ್ಗೇಜ್ ಬೋಗಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನವದೆಹಲಿ-ಲಖನೌ ಶತಾಬ್ದಿ ಎಕ್ಸ್ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ. ಎಲ್ಲ ಪ್ರಯಾಣಿಕರು ಸುರಕ್ಷಿತರಾಗಿದ್ದು, ಯಾರೂ ಗಾಯಗೊಂಡಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
Fire breaks out at the generator car of Shatabdi Express at Ghaziabad railway station. More details awaited. pic.twitter.com/qjgCuSWdMF
— ANI UP (@ANINewsUP) March 20, 2021
ಇದನ್ನೂ ಓದಿ : ಉಡುಪಿ : ಪೋಷಣ್ ಪಕ್ವಾಡ ಅಭಿಯಾನ್ ಯೋಜನೆಯ ಆಯುಷ್ ಅರಿವು ಕಾರ್ಯಕ್ರಮ -Vishwanews24
ಶತಾಬ್ದಿ ಎಕ್ಸ್ಪ್ರೆಸ್ ಶನಿವಾರ ಬೆಳಗ್ಗೆ 6.41ರ ಹೊತ್ತಿಗೆ ಗಾಜಿಯಾಬಾದ್ ನಿಲ್ದಾಣಕ್ಕೆ ತಲುಪಿತ್ತು. ಬೆಂಕಿ ಅವಘಡದ ಬೆನ್ನಲ್ಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಲು ನೆರವಾದರು.
ಬೆಂಕಿ ಹೊತ್ತಿಕೊಂಡಿರುವ ಬೋಗಿಯನ್ನು ಬೇರ್ಪಡಿಸಿದ ಬಳಿಕ 8.20ರ ಸುಮಾರಿಗೆ ರೈಲು ತನ್ನ ಗಮ್ಯಸ್ಥಾನಕ್ಕೆ ಪ್ರಯಾಣವನ್ನು ಬೆಳೆಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ದೆಹಲಿಯಿಂದ ಡೆಹ್ರಾಡೂನ್ಗೆ ಸಂಪರ್ಕ ಕಲ್ಪಿಸುವ ಶತಾಬ್ದಿ ಎಕ್ಸ್ಪ್ರೆಸ್ ರೈಲು ಉತ್ತರಾಖಂಡದ ಕಾನ್ಸ್ರೋ ಪ್ರದೇಶದಲ್ಲಿ ಸಂಚರಿಸುತ್ತಿದ್ದ ವೇಳೆ ಬೋಗಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿತ್ತು.
ಇದನ್ನೂ ಓದಿ : ಉಡುಪಿ : ದ್ವಿತೀಯ ಪಿಯು ಪರೀಕ್ಷೆಯಲ್ಲಿ ಜಿಲ್ಲೆಗೆ ಈ ಬಾರಿಯೂ ಮೊದಲನೇ ಸ್ಥಾನ ಬರಲಿ : ಜಿಲ್ಲಾಧಿಕಾರಿ ಜಿ. ಜಗದೀಶ್ -Vishwanews24
