Featured

ಶಬರಿಮಲೆಗೆ ಮಹಿಳೆಯರ ಪ್ರವೇಶ ದೇವರಿಗೆ ವಿರುದ್ಧವಾಗಿದೆ- ವಿದ್ವಾನ್ ಅನಂತ್ ಶರ್ಮಾ

ಬೆಂಗಳೂರು: ಮಹಿಳೆಯರು ದೇವಸ್ಥಾನವನ್ನು ಪ್ರವೇಶ ಮಾಡಬಾರದು ಎಂಬುದು ಹಿಂದೂ ಸಂಪ್ರದಾಯದಲ್ಲಿ ಎಲ್ಲೂ ಇಲ್ಲ. ಆದ್ರೆ ಅಯ್ಯಪ್ಪನ ಮಂದಿರಕ್ಕೆ ಯಾಕೆ ಮಹಿಳೆಯರಿಗೆ ನಿಷೇಧ ಯಾಕೆ ಎನ್ನುವುದು ಇದೀಗ ಪ್ರಶ್ನೆಯಾಗಿದೆ. ಅಯ್ಯಪ್ಪ ಸ್ವಾಮಿ ಬ್ರಹ್ಮಚರಿಯಾಗಿ ಇರುವ ಕಾರಣ ಮಹಿಳೆಯರು ಹೋದರೆ ಅಯ್ಯಪ್ಪ ಸ್ವಾಮಿಗೆ ತೊಂದರೆಯಾಗಬಹುದು. ಒಬ್ಬ ಬ್ರಹ್ಮಚರಿಯಾದವನಿಗೆ ಹೀಗೆಯೇ ನಡೆದುಕೊಳ್ಳಬೇಕು ಎನ್ನುವ ನಿಯಮಗಳಿರುತ್ತವೆ. ಒಟ್ಟಿನಲ್ಲಿ ಸಂಪ್ರದಾಯಕ್ಕೆ ಭಂಗ ಮಾಡುವುದರಿಂದ ದೇವಸ್ಥಾನಕ್ಕೆ ತೊಂದರೆಯಾಗಬಹುದು ಎಂದು ವಿದ್ವಾನ್ ಅನಂತ್ ಶರ್ಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದವನ್ನು ಪ್ರಭುಸಂಹಿತೆ ಅಂತ ಹೇಳುತ್ತೇವೆ. ಹಾಗೆಯೇ ಕೆಲವೊಂದು ಶಾಸ್ತ್ರಗಳಿವೆ. ಅವುಗಳನ್ನು ಮಿತ್ರ ಸಂಹಿತ, ಕಾವ್ಯಗಳನ್ನು ಕಾಂತಾ ಸಂಹಿತಾ ಅಂತ ಕರೆಯುತ್ತೇವೆ. ಈ ಮೂರನ್ನು ಇಟ್ಟುಕೊಂಡು ನಾವು ಜೀವನ ಮಾಡಬೇಕಿದೆ.

ಎರಡು ದೇವತೆಗಳ ಶಕ್ತಿಯ ಮಿಶ್ರಣದಿಂದ ಉದ್ಭವಾಗಿರುವ ಈ ದೇವರು ಬ್ರಹ್ಮಚಾರಿ ಎನ್ನುವ ಸ್ವರೂಪವಿದೆ. ಹಾಗಿರುವ ಕಾರಣದಿಂದ ಹಿಂದಿನ ಸಂಪ್ರದಾಯದಿಂದ ಬಂದಂತಹ ಕ್ರಮದಲ್ಲಿ ಋತುಮತಿಯಾದ ಸ್ತ್ರೀಯರು ದೇವರನ್ನು ನೋಡಬಾರದೆಂಬ ಪ್ರತೀತಿ ಇದೆ.

ಅದೇ ರೀತಿಯಾಗಿ ಸ್ತ್ರೀಯರಿಗೆ ದೇವಾಲಯ ಪ್ರವೇಶ ನಿರ್ಬಂಧ ಎನ್ನುವುದು ಶಾಸ್ತ್ರದಲ್ಲಿ ಎಲ್ಲೂ ಉಲ್ಲೇಖವಾಗಿಲ್ಲ. ಆದ್ರೆ ಸಂಪ್ರದಾಯದಲ್ಲಿ ಉಲ್ಲೇಖವಿದೆ. ಈ ಮಿತ್ರ ಸಂಹಿತೆ ಎನ್ನುವುದು ಶಾಸ್ತ್ರ ಆಗಿರೋದ್ರಿಂದ, ಇದರಲ್ಲಿ ಸಂಪ್ರದಾಯ ಹಾಗೂ ಶಾಸ್ತ್ರ ಎರಡನ್ನೂ ಸೇರಿಸಿಕೊಂಡು ನಾವು ಮಂದೆ ಹೋಗಬೇಕಾಗಿದೆ.

ಈ ಆಚರಣೆ ಹಿಂದಿನಿಂದ ಬಂದಿರುವಂತಹ ಒಂದು ಸಮಂಜಸವಾದ ಕ್ರಮ. ಅದರ ಬಗ್ಗೆ ನಾವು ಮಾತನಾಡಲು ಸಾಧ್ಯವಿಲ್ಲ. ಯಾಕಂದ್ರೆ ಶಾಸ್ತ್ರದ ದೃಷ್ಟಿಯಿಂದ ಕುಲ ಮತ್ತು ದೇಶ ಆಚಾರ ಧರ್ಮವನ್ನು ಉಲ್ಲಂಘನೆ ಮಾಡಬಾರದು ಅಂತ ಪುರಾಣದಲ್ಲಿದೆ. ಶಾಸ್ತ್ರದಲ್ಲಿ ಹೇಳಿರುವುದರಿಂದ ಆ ಸಂಪ್ರದಾಯವನ್ನೇ ಪಾಲಿಸಿಕೊಂಡು ಮುಂದುವರಿಯಬೇಕಾಗಿದೆ ಅಂತ ಹೇಳಿದರು.

ಇದೀಗ ಒಂದು ತೀರ್ಪು ಬಂದಿದೆ. ಯಾಕಂದ್ರೆ ಅದನ್ನು ಕಾನೂನು ತಜ್ಞರೇ ನೋಡಿಕೊಳ್ಳಬೇಕು. ಇಲ್ಲಿ ಮಹಿಳೆಯರಿಗೆ ಎನಾದ್ರೂ ಆಗುತ್ತೆ ಅಂತ ಅಲ್ಲ, ದೇವರಿಗೆ ತೊಂದರೆ ಆಗಲ್ಲ, ಆದ್ರೆ ದೇವರಿಗೆ ಇದು ಸಮಂಜಸವಲ್ಲ ಎಂದು ಅವರು ಪ್ರತಿಕ್ರಿಯಿಸಿದರು.

 

Vishwa News 24

Recent Posts

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ – vishwanews24

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…

12 hours ago

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ – vishwanews24

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ ಮಂಗಳೂರು: ಯಕ್ಷಗಾನ…

2 days ago

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ – vishwanews24

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…

2 days ago

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ – vishwanews24

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…

2 days ago

ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ – vishwanews24

ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ  :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ  ಗೌರವ ಡಾಕ್ಟರೇಟ್ ಮಂಗಳೂರು…

2 days ago

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ – vishwanews24

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…

2 days ago