Featured

ಶಾಂತಿವನದಲ್ಲಿ ಸಿದ್ದರಾಮಯ್ಯರ ರಾಜಕೀಯದಾಟ, ಮೈತ್ರಿ ಸರಕಾರದಲ್ಲಿ ಅಶಾಂತಿ

ಧರ್ಮಸ್ಥಳ ಸನಿಹದ ಪ್ರಕೃತಿ ಚಿಕಿತ್ಸಾ ಆಸ್ಟತ್ರೆ ಶಾಂತಿವನವನ್ನು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ರಾಜಕೀಯದಾಟಕ್ಕೆ ಉಪಯೋಗಿಸಿಕೊಂಡು ಅಲ್ಲಿನ ಪಾವಿತ್ರ್ಯತೆಗೆ ಭಂಗ ತರುತ್ತಿರುವುದು ಧರ್ಮಸ್ಥಳದ ಅಭಿಮಾನಿಗಳನ್ನು ಚಿಂತೆಗೀಡುಮಾಡಿದೆ.

ಜೂ. 16 ರಂದು ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆಗಾಗಿ ದಾಖಲಾಗಿರುವ ಮಾಜಿ ಮುಖ್ಯಮಂತ್ರಿಗಳು ಕೇವಲ ಚಿಕಿತ್ಸೆಯೆಂಬ ನೆಪಕ್ಕಾಗಿ ಬಂದಿರುವುದು ನಂತರ ನಡೆದ ಕೆಲವು ಚಟುವಟಿಕೆಗಳನ್ನು ನೋಡಿದರೆ ವೇದ್ಯವಾಗುತ್ತದೆ. ಶಾಂತಿವನದಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವವರನ್ನು ಸಾಧಕರೆಂದು ಕರೆಯುತ್ತಾರೆ. ಹತ್ತು, ಹನ್ನೆರಡು, ಹದಿನೈದು ದಿನಗಳ ಚಿಕಿತ್ಸೆ ಮತ್ತು ಆಹಾರ ಸೇವನೆಗೆ ವೈದ್ಯರುಗಳು ಸಾಧಕರಿಗಾಗಿ ವಿಶೇಷವಾದ ದಿನಚರಿಯನ್ನು ರೂಪಿಸಿರುತ್ತಾರೆ. ಇದ್ದಷ್ಟು ದಿನಗಳ ಕಾಲ ಸಾಧಕರು ಅಲ್ಲಿನ ವ್ಯವಸ್ಥೆಗೊಳಪಟ್ಟು, ಅಲ್ಲಿನ ಶಿಸ್ತಿಗೆ ಒಳಪಟ್ಟಿರಬೇಕಾಗುತ್ತದೆ. ಹೊರಗಿನಿಂದ ಅಲ್ಲಿಗೆ ಬಂದು ಯಾರೂ ಕಿರಿಕಿರಿ ಮಾಡುವ ಹಾಗಿಲ್ಲ. ಆರೋಗ್ಯಕ್ಕೆ ಹೊರತು ಪಡಿಸಿ ಯಾವುದೇ ಚಟುವಟಿಕೆಗಳನ್ನು, ಸಭೆಗಳನ್ನು ನಡೆಸುವಂತಿಲ್ಲ. ವ್ಯವಸ್ಥೆಗೆ ವಿರುದ್ದವಾಗಿ ಹೋದರೆ ಅಲ್ಲಿನ ಇತರ ಸಾಧಕರಿಗೆ ತೊಂದರೆಯಾಗುತ್ತದೆ ಹೀಗಾಗಿ ಅಲ್ಲಿನ ವೈದ್ಯರು ಸೂಚಿಸಿದ ರೀತಿಯಲ್ಲಿ ಇರಬೇಕಾಗುತ್ತದೆ. ಅಲ್ಲಿನ ಜೀವನ ಪದ್ಧತಿಗೆ ಹೊಂದಿಕೊಂಡು ಹೋದಲ್ಲಿ ಹಿತವಾದ ಜೀವನ ಸಾಧಕರದ್ದಾಗುತ್ತದೆ ಎಂಬುದು ಅಲ್ಲಿ ಚಿಕಿತ್ಸೆ ಪಡೆದವರ ಅನುಭವ.

ಆದರೆ ಕಳೆದ ಒಂಭತ್ತು ದಿನಗಳಿಂದ ಶಾಂತಿವನ ರಾಜಕೀಯ ವ್ಯಕ್ತಿಗಳಿಂದ ಅಲ್ಲಿನ ಶಾಂತ ವಾತಾವರಣ ಕಲುಷಿತಗೊಂಡಿದೆ. ಇದಕ್ಕೆ ಕಾರಣ ಸಿದ್ಧರಾಮಯ್ಯ ಎಂಬುದು ಎಲ್ಲರಿಗೂ ಗೊತ್ತು. ಅಲ್ಲಿನ ವ್ಯವಸ್ಥೆಗಳು ಗೊತ್ತಿದ್ದೂ, ಅದಕ್ಕೆ ಪೂರಕವಾಗಿರುವುದು ಬಿಟ್ಟು ತಮ್ಮ ಹೊಲಸು ರಾಜಕೀಯವನ್ನು ಆರಂಭಿಸಿರುವುದು ಎಲ್ಲರನ್ನೂ ಹುಬ್ಬೇರಿಸಿದೆ. ತಾನು ಆಸ್ಪತ್ರೆಯಲ್ಲಿ ದಾಖಲಾದ ಮೇಲೆ ಯಾರ ಭೇಟಿಯ ಅವಕಾಶವನ್ನು ಸ್ವಯಂ ನಿರಾಕರಿಸುವ ಬದಲು ಪ್ರತಿದಿನ ರಾಜಕೀಯ ಮುಖಂಡರನ್ನು ಕರೆಸುತ್ತಿರುವ ಸಿದ್ದರಾಮಯ್ಯ ಶಾಂತಿವನ್ನು ತನ್ನ ಪಕ್ಷದ ಕಚೇರಿಯಂತೆ ಮಾಡಿಕೊಂಡು ರಹಸ್ಯ ಚರ್ಚೆಗಳನ್ನು ಮಾಡುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ.

ಮಾಜಿ ಮುಖ್ಯಮಂತ್ರಿಗಳ ಆರೋಗ್ಯ ವಿಚಾರಿಸುವ ನೆಪದಲ್ಲಿ ಪ್ರತೀ ದಿನ ಸಂಜೆ ಮಾಜಿ ಶಾಸಕ ವಸಂತ ಬಂಗೇರ ಭೇಟಿ ನೀಡಿ ರಾಜಕೀಯ ಮಾಡುತ್ತಾರೆ. ಅವರೊಂದಿಗೆ ಒಂದಿಷ್ಟು ಜನ ಕಾರ್ಯಕರ್ತರೂ ಹೋಗುತ್ತಾರೆ. ಚಾರ್ಮಾಡಿ ರಸ್ತೆ ವೀಕ್ಷಣೆಗೆ ಬಂದ ಸಚಿವ ರೇವಣ್ಣ ಬಂದು ದೋಸ್ತಿಗಟ್ಟಿಗೊಳಿಸುವ ಬಗ್ಗೆ ಚರ್ಚೆ ಮಾಡುತ್ತಾರೆ. ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರೂ ಬಂದು ತಮ್ಮ ಸ್ಥಾನವನ್ನು ಗಟ್ಟಿಗೊಳಿಸುವಂತೆ ಗೋಗರೆಯುತ್ತಾರೆ. ಜಮೀರ್ ಅಹ್ಮದ್ ಬರಬೇಕಿತ್ತು. ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಹವಾಮಾನ ವೈಪರಿತ್ಯದಿಂದಾಗಿ ಧರ್ಮಸ್ಥದಲ್ಲಿ ಇಳಿಯದೇ ಬೆಂಗಳೂರಿಗೆ ವಾಪಸು ಹೋಯಿತು. ಅರಣ್ಯ ಸಚಿವ ಆರ್. ಶಂಕರ್ ಕೂಡ ಬಂದು ಗುಪ್ತ ಮಾತುಕತೆ ಮಾಡುತ್ತಾರೆ. ಕಾಂಗ್ರೇಸ್ ನ ಕೆಲ ಹಾಲಿ, ಮಾಜಿ ಶಾಸಕರುಗಳು ಬಂದು ತಮ್ಮ ಬೇಳೆ ಬೇಯಿಸಿಕೊಳ್ಳಲು ನೋಡುತ್ತಾರೆ. ಸ್ವಾಮೀಜಿಯವರು ಬಂದು ಮಂತ್ರಾಕ್ಷತೆ ನೀಡುತ್ತಾರೆ. ಸಿದ್ಧರಾಮಯ್ಯ ಅವರ ಹೆಸರಿನಲ್ಲಿ ಓರ್ವ ಅಭಿಮಾನಿಯೊಬ್ಬ ಶ್ರೀ ಮಂಜುನಾಥ ಸ್ವಾಮಿಗೆ ರುದ್ರಾಭಿಷೇಕ ಸೇವೆ ಮಾಡಿ ಪ್ರಸಾದ ತಂದು ಕೊಡುತ್ತಾರೆ. ನಾಸ್ತಿಕ, ಬ್ರಹ್ಮದ್ವೇಷಿಯಂತೆ ವರ್ತಿಸುವ ಸಿದ್ಧರಾಮಯ್ಯ ಪ್ರಸಾದ ಸ್ವೀಕರಿಸುವರೇ ಎಂಬುದು ಪ್ರಶ್ನೆ.

ತಾವು ಮುಖ್ಯಮಂತ್ರಿಗಳ ಅಭಿಮಾನಿಗಳು, ಕುರುಬರ ಸಂಘದವರು ಎಂದು ಹೇಳಿಕೊಳ್ಳುವ ಮಂಡ್ಯ, ಮೈಸೂರಿನ ಕೆಲವರು ಶಾಂತಿವನ ಪರಿಸರದಲ್ಲಿ ಓಡಾಡುವುದು ಗೊಂದಲಕ್ಕೆ ಕಾರಣವಾಗುತ್ತಿದೆ. ಅಭಿಮಾನಿಯೊಬ್ಬರಿಗೆ ನೀವು ಇಲ್ಯಾಕೆ ಬಂದಿರುವುದು ? ಮಂಜುನಾಥ ಸ್ವಾಮಿಯ ದರ್ಶನ ಮಾಡಿ ತಮ್ಮ ಊರಿಗೆ ತೆರಳಿ ಎಂದು ಮಾಧ್ಯಮದವರು ಹೇಳಿದಾಗ ನಮಗೆ ಸಿದ್ಧರಾಮಯ್ಯನವರೇ ಮಂಜುನಾಥ ಎಂದು ಹೇಳಿರುವುದು ಚೋದ್ಯವೆನಿಸುತ್ತದೆ. ಇಷ್ಟು ಮಾತ್ರವಲ್ಲದೆ ಕೆಲ ದೃಶ್ಯ, ಮುದ್ರಣ ಮಾಧ್ಯಮಗಳು ಉರಿಯುತ್ತಿರುವ ಬೆಂಕಿಗೆ ತುಪ್ಪ ಎಂಬಂತೆ ಸಿದ್ದರಾಮಯ್ಯ ಅಲ್ಲಿ ಇಲ್ಲಿ ಓಡಾಡಿದರು. ಅದನ್ನು ತಿಂದರು, ಇದನ್ನು ಬಿಟ್ಟರು ಎಂಬುದರ ಚಿತ್ರಣ ನೀಡುತ್ತವೆ. ಸಿದ್ದರಾಮಯ್ಯ ಅವರು ಅದನ್ನೆಲ್ಲಾ ಎಂಜಾಯ್ ಮಾಡುತ್ತಾರೆ. ಒಟ್ಟಾರೆ ಸಿದ್ಧರಾಮಯ್ಯ ಶಾಂತಿವನ ಅಂದರೆ ಏನು ಎಂಬುದು ಗೊತ್ತಿದ್ದೂ ರಾಜಕೀಯ ದಾಳ ಉದುರಿಸಲು ಉಪಯೋಗಿಸಿಕೊಂಡರೇ ಎಂಬ ಪ್ರಶ್ನೆ ಸಹಜವಾಗಿ ಏಳುತ್ತದೆ.

ಚುನಾವಣೆ ಫಲಿತಾಂಶ ಬರುವ ತನಕ ಸಿದ್ಧರಾಮಯ್ಯ ಅವರು ಕಾಂಗ್ರೇಸ್ ನ ದಿಲ್ಲಿ ಹೈಕಮಾಂಡ್ ಗಿಂತಲೂ ಕರ್ನಾಟಕದಲ್ಲಿ ಪ್ರಬಲವಾಗಿದ್ದರು. ರಾಜ್ಯ ಕಾಂಗ್ರೇಸ್ ನಲ್ಲಿ ಅವರ ಮಾತೇ ಅಂತಿಮವಾಗಿತ್ತು. ಫಲಿತಾಂಶ ಬಂದ ಬಳಿಕ ಅವರು ಅಪ್ರಸ್ತುತವಾಗಿರುವುದು ರಾಜ್ಯದ ಜನತೆ ಕಾಣುತ್ತಿದೆ. ಇದನ್ನರಿತಿರುವ ಸಿದ್ಧರಾಮಯ್ಯ ಅವರು ತಮ್ಮ ಅಸ್ತಿತ್ವವನ್ನು ಮತ್ತೆ ಗಳಿಸಿಕೊಳ್ಳಲು ಶಾಂತಿವನವನ್ನು ಉಪಯೋಗಿಸಿಕೊಳ್ಳುತ್ತಿರುವುದು ಬೇಸರದ ಸಂಗತಿ. ತಮ್ಮನ್ನು ನೋಡಲು, ಮಾತನಾಡಲು ಇಲ್ಲೇ ಬರಬೇಕು ಎಂಬ ಅವರ ಮನೋಭಾವ ಶಾಂತಿವನದ ಸಾಧಕನಾಗಲು ಎಷ್ಟು ಯೋಗ್ಯ ಎಂಬುದು ಚರ್ಚೆಯ ವಿಚಾರವಾಗಿದೆ. ಯೋಗ್ಯ ಚಿಕಿತ್ಸೆ ಪಡೆಯುವ ಬದಲು ಅವರು, ರಾಜಕೀಯಕ್ಕೆ ಶಸ್ತ್ರ ಚಿಕಿತ್ಸೆ ನಡೆಸುತ್ತಿರುವ ಪರಿಣಾಮ ಮುಂದೆ ಏನಾಗಬಹುದು ಎಂಬುದು ಕಾದು ನೋಡಬೇಕಾಗಿದೆ.

Vishwa News 24

Recent Posts

ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ – vishwanews24

ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ ಬೆಂಗಳೂರು,: ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಸುರ್ಜೇವಾಲ…

18 hours ago

ಕಾರವಾರ – ಮಡಗಾಂವ್ ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ – vishwanews24

ಕಾರವಾರ - ಮಡಗಾಂವ್  ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ ಶಿರಸಿ: ಕಾರವಾರ ಮತ್ತು ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಿಶೇಷ…

18 hours ago

ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ: ರಾಜಣ್ಣ ಖಡಕ್ ಹೇಳಿಕೆ – vishwanews24

ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ, ಸ್ಪರ್ಧೆಯಲ್ಲೂ ಇಲ್ಲ: ರಾಜಣ್ಣ ಖಡಕ್ ಹೇಳಿಕೆ ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.…

19 hours ago

ಬೆಳ್ತಂಗಡಿ ಮನೆ ಕಳ್ಳತನ ಪ್ರಕರಣ : ಇಬ್ಬರು ಅಂತರಾಜ್ಯ ಕಳ್ಳರ ಬಂಧನ ;  ₹23.67 ಲಕ್ಷ ಮೌಲ್ಯದ ಸೊತ್ತು ವಶ – vishwanews24

ಬೆಳ್ತಂಗಡಿ ಮನೆ ಕಳ್ಳತನ ಪ್ರಕರಣ : ಇಬ್ಬರು ಅಂತರಾಜ್ಯ ಕಳ್ಳರ ಬಂಧನ ;  ₹23.67 ಲಕ್ಷ ಮೌಲ್ಯದ ಸೊತ್ತು ವಶ…

21 hours ago

ಉಡುಪಿ : ಯುವಕ ನಾಪತ್ತೆ – vishwanews24

ಉಡುಪಿ : ಯುವಕ ನಾಪತ್ತೆ ಉಡುಪಿ : ಮೂಲತಃ ನೇಪಾಳ ದೇಶದವರಾದ, ಪ್ರಸ್ತುತ ಮಣಿಪಾಲದ ಲಕ್ಷಿö್ಮÃಶ ನಗರದಲ್ಲಿರುವ ಹೋಟೆಲ್ ಒಂದರಲ್ಲಿ…

21 hours ago

ಉಡುಪಿ: ಜೂನ್ 9 ರಿಂದ ಕರ್ನಾಟಕದಾದ್ಯಂತ ಖಾಸಗಿ ಬಸ್ ಪ್ರಯಾಣ ದರ  ಏರಿಕೆ : ಕುಯಿಲಾಡಿ ಸುರೇಶ್ ನಾಯಕ್ – vishwanews24

ಉಡುಪಿ: ಜೂನ್ 9 ರಿಂದ ಕರ್ನಾಟಕದಾದ್ಯಂತ ಖಾಸಗಿ ಬಸ್ ಪ್ರಯಾಣ ದರ  ಏರಿಕೆ : ಕುಯಿಲಾಡಿ ಸುರೇಶ್ ನಾಯಕ್ ಉಡುಪಿ…

21 hours ago