ಶಾಂತಿ ಕಾಪಾಡಬೇಕೆಂದರೆ ಹಿಂಸೆ ಬಿಡಿ; ನಂಬಿಕೆ ಉಳಿಸಿಕೊಳ್ಳಿ : ಪಾಕ್ ಗೆ ಪ್ರಧಾನಿ ಮೋದಿ -Vishwanews24
ನವದೆಹಲಿ : ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿ ಎರಡನೇ ಭಾರಿ ಪ್ರಧಾನಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಖುದ್ದು ದೂರವಾಣಿ ಕರೆ ಮಾಡಿ ಮಾತನಾಡಿ ಶುಭ ಕೋರಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿ ಎರಡನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ ಅವರಿಗೆ ರವಿವಾರ ಇಮ್ರಾನ್ ಖಾನ್ ಖುದ್ದು ದೂರವಾಣಿ ಕರೆ ಮಾಡಿ ಮಾತನಾಡಿದರು. ‘ಎರಡೂ ದೇಶಗಳ ಜನರ ಒಳಿತಿಗಾಗಿ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸಿಕೊಳ್ಳೋಣ ಹಾಗೂ ಜತೆಯಾಗಿ ಮುಂದೆ ಸಾಗೋಣ’ ಎಂದು ಇಮ್ರಾನ್ ಖಾನ್ ಅವರು ಮೋದಿಯವರನ್ನು ಕೇಳಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮೋದಿ, ‘ಈ ಪ್ರದೇಶದಲ್ಲಿ ಶಾಂತಿ ಮತ್ತು ಸಮೃದ್ಧಿ ಕಾಪಾಡಿಕೊಳ್ಳಬೇಕೆಂದರೆ ಹಿಂಸಾಚಾರ ಮತ್ತು ಉಗ್ರವಾದ ಮುಕ್ತ ಪರಿಸರವನ್ನು ನಿರ್ಮಿಸಬೇಕು ಹಾಗೂ ನಂಬಿಕೆಯನ್ನು ಉಳಿಸಿಕೊಳ್ಳಬೇಕು’ ಎಂದಿದ್ದಾರೆ. ಅಲ್ಲದೆ ನಮ್ಮದು ನೆರೆರಾಷ್ಟ್ರ ಸ್ನೇಹಿ ನೀತಿ ಯಾಗಿದ್ದು, ನಾವು ಜಂಟಿಯಾಗಿ ಬಡತನದ ವಿರುದ್ಧ ಸಮರ ಸಾರಬೇಕು ಎಂದೂ ಮೋದಿ ಹೇಳಿದ್ದಾರೆ.
‘ಶಾಂತಿ ಬೇಕು’ ಎಂಬ ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಮನವಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಖಡಕ್ ಉತ್ತರ ಇದು.
