Featured

ಶಾರ್ಜಾದಲ್ಲಿ ಹತ್ಯೆಯಾದ ಪ್ರಕಾಶ್ ಕುಂದರ್ ಪಾರ್ಥಿವ ಶರೀರ ಭಾರತಕ್ಕೆ ತರಲು ಯತ್ನ: ಕೋಟ ಶ್ರೀನಿವಾಸ ಪೂಜಾರಿ – vishwanews24

ಶಾರ್ಜಾದಲ್ಲಿ ಹತ್ಯೆಯಾದ ಉಡುಪಿ ಮೂಲದ ಪ್ರಕಾಶ್ ಕುಂದರ್ ಪಾರ್ಥಿವ ಶರೀರ ಭಾರತಕ್ಕೆ ತರಲು ಯತ್ನ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ : ಶಾರ್ಜಾದಲ್ಲಿ ಕುಂದಾಪುರ ಮೂಲದ ಆಲ್ವಿನ್ ಪ್ರಕಾಶ್ ಕುಂದರ್ ಹತ್ಯೆ ವಿಚಾರ ಗಮನಕ್ಕೆ ಬಂದ ತಕ್ಷಣ ವಿದೇಶಾಂಗ ಇಲಾಖೆಗೆ ಪತ್ರ ಬರೆದಿದ್ದೇನೆ. ಅದೇ ರೀತಿ ಶಾರ್ಜಾದ ರಾಯಭಾರಿ ಕಚೇರಿಗೂ ಸಂಪರ್ಕ ಮಾಡಿದ್ದೇನೆ. ಈ ಕುರಿತು ವಿದೇಶಾಂಗ ಇಲಾಖೆ ಮತ್ತು ಮಂತ್ರಿಗಳ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಲ್ವಿನ್ ಪ್ರಕಾಶ್ ಕುಂದರ್ ಪಾರ್ಥಿವ ಶರೀರ ದೇಶಕ್ಕೆ ತರುವ ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ಮೃತರ ಪತ್ನಿ ಮತ್ತು ಮಗನನ್ನು ಕೂಡ ಪತ್ತೆ ಮಾಡಬೇಕಾ ಗಿದೆ. ಆರೋಪಿತರ ಹೆಸರಲ್ಲಿ ಪತ್ನಿ ಮಗನ ಹೆಸರು ಕೇಳಿ ಬರುತ್ತಿದೆ. ಅನಿವಾರ್ಯ ಕಾರಣಗಳಿಂದ ಅವರು ಈ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆಯೇ ಎಂಬುದನ್ನು ತಿಳಿಯಬೇಕಾಗಿದೆ ಎಂದರು.

ಇದೊಂದು ಬಹಳ ಘೋರವಾದ ಕೃತ್ಯವಾಗಿದ್ದು, ಕೃತ್ಯದಲ್ಲಿ ಭಾಗಿಯಾದವರ ಮೇಲೆ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು. ಪತ್ನಿ ಮತ್ತು ಮಗ ನಿರಪರಾಧಿಯಾಗಿದ್ದಾರಾ? ಅಥವಾ ಸಂಚಿನಲ್ಲಿ ಅವರನ್ನು ಬಳಕೆ ಮಾಡಲಾ ಗಿದೆಯೇ? ಅಥವಾ ಅವರು ಅಪಾಯದಲ್ಲಿದ್ದಾರೆಯೇ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Vishwa News 24

Recent Posts

ಅ.29ರಿಂದ ನ.11ರವರೆಗೆ ಹಾಸನಾಂಬಾ ಜಾತ್ರಾ ಮಹೋತ್ಸವ – vishwanews24

ಅಕ್ಟೋಬರ್ 29ರಂದು ಗರ್ಭಗುಡಿ ಬಾಗಿಲು ಓಪನ್  12 ದಿನ ದೇವಿಯ ದರ್ಶನಕ್ಕೆ ಅವಕಾಶ ಹಾಸನ: ಈ ಬಾರಿಯ ಪ್ರಸಿದ್ಧ ಹಾಸನಾಂಬಾ…

12 minutes ago

ಗೃಹಲಕ್ಷ್ಮಿ ಯೋಜನೆಗೆ ಹೊಸ ಮಾರ್ಗಸೂಚಿ ಬಿಡುಗಡೆ – vishwanews24

ಗೃಹಲಕ್ಷ್ಮಿ ಯೋಜನೆಗೆ ಹೊಸ ಮಾರ್ಗಸೂಚಿ ಬಿಡುಗಡೆ ಬೆಂಗಳೂರು : ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮೀ ಯೋಜನೆ’ಯ ಅರ್ಹ ಫಲಾನುಭವಿಗಳನ್ನು ಗುರುತಿಸಲು…

33 minutes ago

ವಿಟ್ಲ: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಆರೋಪ: ಕೇರಳ ಮೂಲದ ಬಾಲಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು – vishwanews24

ವಿಟ್ಲ: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಆರೋಪ: ಕೇರಳ ಮೂಲದ ಬಾಲಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ವಿಟ್ಲ: ಕೇರಳ…

41 minutes ago

ಉಡುಪಿ : ಮಾದಕ ವಸ್ತು ಮಾರಾಟ ಪ್ರಕರಣ: 9 ಮಂದಿ ಆರೋಪಿಗಳ ಬಂಧನ – vishwanews24

ಉಡುಪಿ : ಮಾದಕ ವಸ್ತು ಮಾರಾಟ ಪ್ರಕರಣ: 9 ಮಂದಿ ಆರೋಪಿಗಳ ಬಂಧನ ಉಡುಪಿ : ಶಿರ್ವ ಮತ್ತು ಉಡುಪಿ…

48 minutes ago

ಮಂಗಳೂರು :  ಪೊಲೀಸರ ವಶದಿಂದ ಪರಾರಿಯಾಗಿದ್ದ ಕೊಲೆ ಆರೋಪಿ ಸೆರೆ – vishwanews24

ಮಂಗಳೂರು :  ಪೊಲೀಸರ ವಶದಿಂದ ಪರಾರಿಯಾಗಿದ್ದ ಕೊಲೆ ಆರೋಪಿ ಸೆರೆ ಮಂಗಳೂರು : ಕೊಲೆ ಪ್ರಕರಣದ ಆರೋಪಿಯೊಬ್ಬ ಪೊಲೀಸರ ವಶದಿಂದ…

55 minutes ago

ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ಗೌರವ ಸನ್ಮಾನ  – vishwanews24

ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ಗೌರವ ಸನ್ಮಾನ  ನಮ್ಮ ಊರು ಸ್ವಚ್ಛವಾಗಿರಲು, ನಮ್ಮ ಪರಿಸರ ಆರೋಗ್ಯಕರವಾಗಿರಲು ಪ್ರತಿದಿನವೂ ಮೌನವಾಗಿ ಶ್ರಮಿಸುವ ಪೌರಕಾರ್ಮಿಕರ…

59 minutes ago