ಬೆಂಗಳೂರು : ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮೀ ಯೋಜನೆ’ಯ ಅರ್ಹ ಫಲಾನುಭವಿಗಳನ್ನು ಗುರುತಿಸಲು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಲಾಗಿದ್ದು, ಫಲಾನುಭವಿ ಮಹಿಳೆಯರು ಪತಿಯ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕೆಂದು ಸೂಚಿಸಲಾಗಿದೆ.
ಹೊಸ ನಿಯಮಗಳ ಪ್ರಕಾರ, ಅರ್ಜಿ ಸಲ್ಲಿಸಿದ ಮಹಿಳೆಯ ಆಧಾರ್ ಕಾರ್ಡ್ ಮಾತ್ರವಲ್ಲದೆ ಆಕೆಯ ಪತಿಯ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಮಹಿಳೆಯರು ನೀಡುವ ಬ್ಯಾಂಕ್ ಖಾತೆಗೆ ಯಾವುದೇ ರೀತಿಯ ಸಾಲದ ಲಿಂಕ್ ಇರಬಾರದು. ಒಂದು ವೇಳೆ ಸಾಲ ಇರುವ ಖಾತೆಯನ್ನು ನೀಡಿದ್ದರೆ ಅಥವಾ ಆಧಾರ್ ಕಾರ್ಡ್ನಲ್ಲಿರುವ ಹೆಸರು ಮತ್ತು ವಿಳಾಸದಲ್ಲಿ ಸಣ್ಣ ವ್ಯತ್ಯಾಸವಿದ್ದರೂ ಸಹ ಪ್ರತಿ ತಿಂಗಳು ಬರುವ 2ಸಾವಿರ ರೂ.ನಗದು ವರ್ಗಾವಣೆ ತಕ್ಷಣವೇ ಸ್ಥಗಿತಗೊಳ್ಳಲಿದೆ.
ಇದನ್ನೂ ಓದಿ :
ಜತೆಗೆ, ಗೃಹಲಕ್ಷ್ಮೀ ಯೋಜನೆಯ ಮರುಪರಿಶೀಲನೆಗಾಗಿ ಸರಕಾರ ವಿಶೇಷ ತನಿಖಾ ತಂಡ ಅಥವಾ ಗಣತೀದಾರರನ್ನು ನಿಯೋಜಿಸಲಿದೆ. ಈ ಅಧಿಕಾರಿಗಳು ನೇರವಾಗಿ ಫಲಾನುಭವಿಗಳ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ವೇಳೆ ಕೇವಲ ದಾಖಲೆಗಳ ಪರಿಶೀಲನೆ ಮಾತ್ರವಲ್ಲದೆ, ಮಹಿಳೆಯರ ಮುಖದ ಗುರುತು ಹಿಡಿಯುವ ‘ಫೇಶಿಯಲ್ ದೃಢೀಕರಣ’ ಹಾಗೂ ಜಿಪಿಎಸ್ ಆಧಾರಿತ ಮನೆ ಫೋಟೋವನ್ನು ಸ್ಥಳದಲ್ಲೇ ಅಪ್ಲೋಡ್ ಮಾಡಿಕೊಳ್ಳಲಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ ಸಂಬಂಧ ಹೊಸ ಮಾರ್ಗಸೂಚಿಯಲ್ಲೇನಿದೆ?
ಮನೆಯ ಯಜಮಾನಿಯ ಆಧಾರ್ ಜೊತೆಗೆ ಯಜಮಾನನ (ಪತಿಯ) ಆಧಾರ್ ಲಿಂಕ್ ಕಡ್ಡಾಯ
ಬ್ಯಾಂಕ್ ಖಾತೆಯಲ್ಲಿ ಯಾವುದೇ ಸಾಲ ಇರಬಾರದು
ಆಧಾರ್ ಕಾರ್ಡ್ನಲ್ಲಿರುವಂತೆ ಹೆಸರು ಮತ್ತು ವಿಳಾಸ ಇರಬೇಕು
ಪಡಿತರ ಚೀಟಿ ಮತ್ತು ಆಧಾರ್ ಪರಿಶೀಲನೆ ಕಡ್ಡಾಯ
ಮುಖದ ದೃಢೀಕರಣ (Facial Authentication) ಕಡ್ಡಾಯ
ಪ್ರಕ್ರಿಯೆ ಯಾವಾಗ?: ಮತದಾರರ ಅಂತಿಮ ಪಟ್ಟಿ ಪ್ರಕಟಗೊಂಡ ತಕ್ಷಣವೇ ಈ ಮರುಪರಿಶೀಲನಾ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಈಗಾಗಲೇ ಈ 17 ಪ್ರಶ್ನೆಗಳ ಹೊಸ ಅರ್ಜಿ ನಮೂನೆ ಮುಖ್ಯಮಂತ್ರಿಗಳ ಕಚೇರಿಯಿಂದ ಅಂತಿಮ ಒಪ್ಪಿಗೆ ಸಿಗಬೇಕಾಗಿದ್ದು, ಮುಖ್ಯಮಂತ್ರಿ ಹಸಿರು ನಿಶಾನೆ ನೀಡಿದ ತಕ್ಷಣವೇ ಅಧಿಕಾರಿಗಳು ಪ್ರಕ್ರಿಯೆ ಕೈಗೆತ್ತಿಕೊಳ್ಳಲಿದ್ದಾರೆ. ತೆರಿಗೆ ಪಾವತಿದಾರರು ಮತ್ತು ಸರಕಾರಿ ನೌಕರರನ್ನು ಯೋಜನೆಯಿಂದ ಹೊರಗಿಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗೊತ್ತಾಗಿದೆ.
ಸುರತ್ಕಲ್: ಮುಕ್ಕ ಆಸ್ಪತ್ರೆಯ ಕ್ಯಾಂಟೀನ್, ಹಾಸ್ಟೆಲ್ ಅಡುಗೆ ಕೋಣೆಗೆ ಆಹಾರ ಸುರಕ್ಷತಾ ಅಧಿಕಾರಿಗಳ ದಿಢೀರ್ ಭೇಟಿ ; ಪರಿಶೀಲನೆ ಸುರತ್ಕಲ್: ಆರೋಗ್ಯ…
ಉಡುಪಿ : ನೇರ ಸಂದರ್ಶನ ಉಡುಪಿ: ನಗರದ ಕಲ್ಸಂಕ ಅಂಬಾಗಿಲು ರಸ್ತೆಯ ಗುಂಡಿಬೈಲಿನಲ್ಲಿರುವ ಸಾನ್ವಿ ಟ್ರೇರ್ಸ್ನಲ್ಲಿ ನವೆಂಬರ್ 13 ರಂದು…
ಬಂಟ್ವಾಳ : ರಸ್ತೆಯಲ್ಲೇ ಕೆಟ್ಟು ನಿಂತಿದ್ದ ಲಾರಿಯಲ್ಲಿ ಪರಿಶೀಲನೆ ವೇಳೆ ಅಕ್ರಮ ಮಣ್ಣು ಸಾಗಾಟ ಪತ್ತೆ ; ಲಾರಿ ವಶಕ್ಕೆ…
ಉತ್ತರ ಪ್ರದೇಶ : ಡಿವೈಡರ್ಗೆ ಡಿಕ್ಕಿ ಹೊಡೆದು ಕಾರು ಬೆಂಕಿಗಾಹುತಿ ; ಆರು ಮಂದಿ ಸಜೀವ ದಹನ ಉತ್ತರ ಪ್ರದೇಶ…
ಹೊಸದಿಲ್ಲಿ: ಚಲಿಸುತ್ತಿದ್ದ ಕರ್ಮಭೂಮಿ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ ; ಹೊತ್ತಿ ಉರಿದ ನಾಲ್ಕು ಬೋಗಿಗಳು ; ತಪ್ಪಿದ ಭಾರೀ ಅನಾಹುತ…
ಉಡುಪಿ: ನ.29ರಂದು ಸೋದೆ ಪರ್ಯಾಯದ ಬಾಳೆ ಮುಹೂರ್ತ ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ದ್ವೈವಾರ್ಷಿಕ ಪರ್ಯಾಯ ದಲ್ಲಿ 2028-30ರ ಅವಧಿಯಲ್ಲಿ…