ಶಾಸಕ ಹರೀಶ್ ಪೂಂಜಾ ಕಾರು ಅಡ್ಡಕಟ್ಟಿದ ಅಬ್ದುಲ್ ಖಾದರ್ ಬಂಧನ:- ಒವರ್ ಟೇಕ್ ವಿಚಾರದಲ್ಲಿ ಗೊಂದಲ – ಮಾರಕಾಯುಧ ಪತ್ತೆಯಾಗಿಲ್ಲ ಎಂದ ಎಸ್ಪಿ:vishwanews24
ಶಾಸಕ ಹರೀಶ್ ಪೂಂಜಾ ಕಾರು ಅಡ್ಡಕಟ್ಟಿದ ಅಬ್ದುಲ್ ಖಾದರ್ ಬಂಧನ:- ಒವರ್ ಟೇಕ್ ವಿಚಾರದಲ್ಲಿ ಗೊಂದಲ – ಮಾರಕಾಯುಧ ಪತ್ತೆಯಾಗಿಲ್ಲ ಎಂದ ಎಸ್ಪಿ: vishwanews24
ದ.ಕ : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರ್ ಹಿಂಬಾಲಿಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ರಿಯಾಝ್ ತಂದೆ ಅಬ್ದುಲ್ ಖಾದರ್, ಪ್ರಾಯ-38 ವರ್ಷ, ಫಳ್ನೀರ್, ಮಂಗಳೂರು ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಭಾಗಿಯಾಗಿತ್ತು ಎನ್ನಲಾದ ಸ್ಕಾರ್ಪಿಯೋ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ದೂರುದಾರರಾದ ಶಾಸಕರ ಚಾಲಕ ನವೀನ್ ಅವರು ಆರೋಪಿ ಮತ್ತು ವಾಹನವನ್ನು ಗುರುತಿಸಿದ್ದಾರೆ.
ಓವರ್ ಟೇಕ್ ವಿಚಾರವಾಗಿ ಗೊಂದಲ ನಿರ್ಮಾಣವಾಗಿದೆ.
ಅಲ್ಲದೇ ಆರೋಪಿಯ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿಲ್ಲ ಮತ್ತು ಆತನ ಬಳಿ ಯಾವುದೇ ಆಯುಧ ಪತ್ತೆಯಾಗಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಹೃಷಿಕೇಶ್ ಭಗವಾನ್ ಸೋನಾವಣೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
