ಶಿಕ್ಷಕರ ಹಾಗೂ ಸರಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಅವರ ಧ್ವನಿಯಾಗುತ್ತೇನೆ : ರಘುಪತಿ ಭಟ್ -vishwanews24
ಪದವೀಧರರ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಹಾಗೂ ಕ್ರಿಯಾಶೀಲವಾಗಿ ಕೆಲಸ ಮಾಡುತ್ತೇನೆ..
ಪದವೀಧರರಿಗೆ ಉದ್ಯೋಗ – ಪದವೀಧರರಿಂದ ಉದ್ಯಮ – ಸಹಾಯ – ಸಹಕಾರ – ಸಂಪರ್ಕ ಇದು ನನ್ನ ಆಶಯ..
ವಿಧಾನ ಪರಿಷತ್ ನ ಒಳಗೆ ಮತ್ತು ಹೊರಗೆ ನಿಮ್ಮ ಧ್ವನಿಯಾಗುತ್ತೇನೆ..: ರಘುಪತಿ ಭಟ್
ಶಿವಮೊಗ್ಗ: ಜನತೆಯ ಆಶೀರ್ವಾದದಿಂದ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ 3 ಬಾರಿ ಶಾಸಕನಾದ ಉಡುಪಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿರುತ್ತೇನೆ. ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ನನ್ನನ್ನು ಹರಸಿ ಆಶೀರ್ವದಿಸಿದರೆ ವಿಧಾನ ಸಭೆ ಸದಸ್ಯನಾಗಿ ಕೆಲಸ ನಿರ್ವಹಿಸಿದ ಕಾರ್ಯಾನುಭವದೊಂದಿಗೆ ಪ್ರಾಮಾಣಿಕವಾಗಿ ಹಾಗೂ ಕ್ರಿಯಾಶೀಲವಾಗಿ ಕೆಲಸ ಮಾಡಿ ಪದವೀಧರರ, ಶಿಕ್ಷಕರ ಹಾಗೂ ಸರಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಅವರ ಧ್ವನಿಯಾಗುತ್ತೇನೆ ಎಂದು ನೈಋತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಕೆ. ರಘುಪತಿ ಭಟ್ ಅವರು ಹೇಳಿದರು.
ಮಂಗಳೂರು: ಚಿಕಿತ್ಸೆಗೆಂದು ಕರೆದುಕೊಂಡು ಬಂದು ಆಸ್ಪತ್ರೆಯಲ್ಲೇ ಯುವತಿ ಮೇಲೆ ನಿರಂತರ ಅತ್ಯಾಚಾರ – vishwanews24
ಶಿವಮೊಗ್ಗ ಹಾಗೂ ಶಿಕಾರಿಪುರದ ವಿವಿಧ ಭಾಗಗಳಲ್ಲಿ ಬುಧವಾರ ಮತದಾರರ ಸಭೆ ನಡೆಸಿ ಭರವಸೆ ನೀಡಿದರು.
ಪದವೀಧರರಿಗೆ ಉದ್ಯೋಗ – ಪದವೀಧರರಿಂದ ಉದ್ಯಮ – ಸಹಾಯ – ಸಹಕಾರ – ಸಂಪರ್ಕ ಇದು ನನ್ನ ಆಶಯವಾಗಿದೆ. ಎಲ್ಲಾ ಸರ್ಕಾರಿ ನೌಕರರ ಬೇಡಿಕೆಯಾದ ಎನ್.ಪಿ.ಎಸ್. (ನೂತನ ಪಿಂಚಣಿ ಯೋಜನೆ) ರದ್ದು ಪಡಿಸಿ ಒ.ಪಿ.ಎಸ್. (ಹಳೆ ಪಿಂಚಣಿ ಯೋಜನೆ) ಜಾರಿಗೆ ತರಲು ವಿಧಾನ ಪರಿಷತ್ ನ ಒಳಗೆ ಮತ್ತು ಹೊರಗೆ ನಿಮ್ಮ ಧ್ವನಿಯಾಗುತ್ತೇನೆ. ಹಾಗೂ ಶಿಕ್ಷಕರ ಸಮಸ್ಯೆಗಳು ಮತ್ತು ಬೇಡಿಕೆಗಳ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದು ಇದನ್ನು ಈಡೇರಿಸಲು ನಿಮ್ಮ ಧ್ವನಿಯಾಗುತ್ತೇನೆ ಎಂದ ಅವರು ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ಮೊದಲ ಪ್ರಾಶಸ್ತ್ಯದ ಮತ ನೀಡಿ ಹರಿಸುವಂತೆ ಮನವಿ ಮಾಡಿದರು.
ಹೈಕೋರ್ಟ್ ವಕೀಲೆ ಚೈತ್ರಾಗೌಡ ಆತ್ಮಹತ್ಯೆ ಪ್ರಕರಣ : ತನಿಖೆ ಸಿಸಿಬಿಗೆ ವರ್ಗಾವಣೆ – vishwanews24
