ಶಿರ್ಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ 5 ಕೋಟಿ ರೂ. ದಾನ ನೀಡಿದ ಅನಂತ್ ಅಂಬಾನಿ – vishwanews24
ಶಿರ್ಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ 5 ಕೋಟಿ ರೂ. ದಾನ ನೀಡಿದ ಅನಂತ್ ಅಂಬಾನಿ
ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರ, ರಿಲಯನ್ಸ್ ಇಂಡಸ್ಟ್ರಿ ಗ್ರೂಪ್‌ನ ಕಾರ್ಯಕಾರಿ ನಿರ್ದೇಶಕ ಅನಂತ್ ಅಂಬಾನಿ ಅವರು ಇಂದು ಶಿರ್ಡಿಯ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದರು.
ಸಾಯಿ ಬಾಬಾ ಸಮಾಧಿಗೆ ನೀಲಿ ಬಣ್ಣದ ಚಾದರ ಅರ್ಪಣೆ
ಶಿರ್ಡಿ ಸಾಯಿಬಾಬಾ ಮಂದಿರದಲ್ಲಿ ನಡೆಯುವ ಧೂಪಾರತಿಯಲ್ಲಿ ಅವರು ಭಾಗಿಯಾಗಿದ್ದಲ್ಲದೇ ಸಾಯಿ ಬಾಬಾ ಸಮಾಧಿಗೆ ನೀಲಿ ಬಣ್ಣದ ಚಾದರವನ್ನು ಹಾಸಿದರು.
5 ಕೋಟಿ ದಾನ
ಇದೇ ಸಮಯದಲ್ಲಿ ಅನಂತ್ ಅಂಬಾನಿ ಅವರು ಸುಮಾರು 5 ಕೋಟಿ ಮೊತ್ತದ ಹಣವನ್ನು ಡಿಮಾಂಡ್ ಡ್ರಾಫ್ಟ್ ಮೂಲಕ ದೇಣಿಗೆಯಾಗಿ ಸಾಯಿಬಾಬಾ ಸಂಸ್ಥಾನಕ್ಕೆ ನೀಡಿದರು.

ಸಾಯಿ ಬಾಬಾ ಮಂದಿರದ ವತಿಯಿಂದ ಅನಂತ್ ಅಂಬಾನಿಗೆ ಸಂಸ್ಥಾನ
ಸಾಯಿಬಾಬಾ ಸಮಾಧಿ ದರ್ಶನದ ನಂತರ ಸಾಯಿಬಾಬಾ ಸಂಸ್ಥಾನದ ಮುಖ್ಯ ಕಾರ್ಯಕಾರಿ ಅಧಿಕಾರಿ ಗೋರಕ್ಷ ಗಡ್ಲಿಕರ್ ಅವರು ದೇಗುಲದ ವತಿಯಿಂದ ಅವರನ್ನು ಸನ್ಮಾನಿಸಿದರು. ಈ ಉಪ ಮುಖ್ಯ ಕಾರ್ಯಕಾರಿ ಭಿಮ್ರಾಜ್ ದರಡೆ ಉಪಸ್ಥಿತರಿದ್ದರು.
ಲೈಂಗಿಕ ದೌರ್ಜನ್ಯ ಪ್ರಕರಣ : ಶಾಸಕ ಎಚ್.ಡಿ. ರೇವಣ್ಣಗೆ ಬಿಗ್ ರಿಲೀಫ್ – vishwanews24
