ಶಿರ್ವ: ಆತ್ಮಹತ್ಯೆಗೆ ಪ್ರಚೋದನೆ ; ಮೂವರ ವಿರುದ್ಧ ದೂರು ದಾಖಲು – vishwanews24

Featured, ಉಡುಪಿ

ಶಿರ್ವ: ಆತ್ಮಹತ್ಯೆಗೆ ಪ್ರಚೋದನೆ ; ಮೂವರ ವಿರುದ್ಧ ದೂರು ದಾಖಲು

ಶಿರ್ವ: ಪತ್ನಿ, ಆಕೆಯ ಸಹೋದರಿ ಮತ್ತು ಪತ್ನಿಗೆ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪರಿಚಯವಾದ ವ್ಯಕ್ತಿ ನಿರಂತರ ಅವಮಾನ, ಕಿರುಕುಳ, ಮಾನಸಿಕ ಹಿಂಸೆ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಆರೋಪದ ಮೇಲೆ ಮೂವರ ಮೇಲೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಪು ಗ್ರಾಮದ ನಿವಾಸಿ ಸಮೀನಾ, ಸಹೋದರಿ ಆಸ್ಮಾ ಹಾಗೂ ಇನ್ನಾಗ್ರಾಂ ಖಾತೆಯಲ್ಲಿ ಪರಿಚಯವಾದ ವ್ಯಕ್ತಿ ಆಪಾದಿತರು. ಜಹೀರ್ ಅಬ್ದುಲ್ ಮಾಂಗಾವಕರ್ (42) ಆತ್ಮಹತ್ಯೆ ಮಾಡಿಕೊಂಡವರು.

ಇದನ್ನೂ ಓದಿ:

ಹಳೆಯಂಗಡಿ: ನಿಂತಿದ್ದ ಬಸ್ಸಿಗೆ ಟಿಪ್ಪರ್ ಢಿಕ್ಕಿ; ನಾಲ್ವರು ವಿದ್ಯಾರ್ಥಿಗಳಿಗೆ ಗಾಯ – vishwanews24

ಘಟನೆಯ ವಿವರ :
ಬೆಳಪು ಗ್ರಾಮದ ನಿವಾಸಿ ಸಮೀನಾ ಅವರಿಗೆ ಗೋವಾ ಮೂಲದ ಜಹೀರ್ ಅಬ್ದುಲ್ ಮಾಂಗಾವಕರ್ ಅವರೊಂದಿಗೆ 2012ರ ಫೆ.19 ರಂದು ಮೂಳೂರು ಜುಮ್ಮಾ ಮಸೀದಿಯಲ್ಲಿ ವಿವಾಹವಾಗಿದ್ದು, ದಾನಿಶ್ ಮತ್ತು ಜೈಡ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸುಮಾರು ಐದು ವರ್ಷಗಳ ಬಳಿಕ ಸಮೀನಾ ತನ್ನ ಗಂಡನೊಂದಿಗೆ ವಾಸಿಸಲು ಇಷ್ಟವಿಲ್ಲವೆಂದು ಮಕ್ಕಳೊಂದಿಗೆ ಬಂದು ಬೆಳಪುವಿನ ತವರು ಮನೆಯಲ್ಲಿ ವಾಸ ಮಾಡಿಕೊಂಡು ಬೆಳಪು ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡಿಕೊಂಡಿದ್ದರು.

ಆ ಸಮಯದಲ್ಲಿ  ಇನ್‌ಸ್ಟಾಗ್ರಾಮ್ ಖಾತೆಯ ವ್ಯಕ್ತಿಯೊಂದಿಗೆ ಸಮೀನಾಳಿಗೆ ಸಂಪರ್ಕ ಇರುವ ಬಗ್ಗೆ ಜಹೀರ್ ಗೆ ತಿಳಿದು ಬಂದಿರುತ್ತದೆ. ಇದನ್ನು ವಿರೋಧಿಸಿದ ಜಹೀರ್ ನನ್ನು ಸಮೀನಾಳು ಮನೆಯಿಂದ ಹೊರಗೆ ಹಾಕಿ ಮಕ್ಕಳನ್ನು ಸಂಪರ್ಕಿಸಲು ನಿರಾಕರಿಸಿದ್ದು, ಸಮೀನಾ ಮತ್ತು ಅವಳ ಸಹೋದರಿ ಆತ್ಮಾ ಹಾಗೂ ಇನ್‌ಸ್ಟಾಗ್ರಾಮ್ ಖಾತೆಯ ವ್ಯಕ್ತಿ ಸೇರಿಕೊಂಡು ಜಹೀರ್ ನಿಗೆ ನಿರಂತರ ಮಾನಸಿಕ ಹಿಂಸೆ ಕಿರುಕುಳ ನೀಡಿ ಅವಮಾನ ಮಾಡಿದ್ದರು.

ಇದನ್ನೂ ಓದಿ:

CMRL ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ಈಡಿ ದಾಳಿ – vishwanews24

ಇದರಿಂದ ಮಾನಸಿಕವಾಗಿ ಮನನೊಂದ ಜಹೀರ್ ಅಬ್ದುಲ್ ಮಾಂಗಾವಕರ್ ಮೇ. 16 ರಂದು ಬೆಳಪುವಿನ ಜವನರಕಟ್ಟೆಯ ಪತ್ನಿ ಸಮೀನಾಳ ಮನೆಯ ಎದುರು ಇರುವ ಮಾವಿನ ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಜಹೀರನು ಆತ್ಮಹತ್ಯೆ ಮಾಡಿಕೊಳ್ಳಲು ಸಮೀನಾ, ಆಕೆಯ ಸಹೋದರಿ ಆಸ್ಮಾ ಹಾಗೂ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪರಿಚಯವಾದ ವ್ಯಕ್ತಿ ಪ್ರಚೋದನೆ ಹಾಗೂ ಪ್ರೇರಣೆ ನೀಡಿರುವುದಾಗಿ ಅಫ್ಘಾನಾ ರಮಝಾನ್ ಕಾರ್ನೇಕರ್ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply