ಶಿರ್ವ: ಗಾಂಜಾ ಮಾರಾಟಕ್ಕೆ ಯತ್ನ ; ಇಬ್ಬರ ಬಂಧನ – vishwanews24
ಶಿರ್ವ: ಗಾಂಜಾ ಮಾರಾಟಕ್ಕೆ ಯತ್ನ ; ಇಬ್ಬರ ಬಂಧನ
ಕಾಪು: ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಅಭಿಷೇಕ್ ಪಾಲನ್ ಹಾಗೂ ಆರ್. ಶಾಶ್ವತ್ ಎಂದು ಗುರುತಿಸಲಾಗಿದೆ.
ಬೆಳಪು ಇಂಡಸ್ಟ್ರಿಯಲ್ ಏರಿಯಾ ಕ್ರಾಸ್ ರಸ್ತೆ ಬಳಿ ಗಾಂಜಾ ಮಾರಾಟ ಮಾಡುವ ಬಗ್ಗೆ ದೊರೆತ ಮಾಹಿತಿ ಮೇರೆಗೆ ಶಿರ್ವ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಮಂಜುನಾಥ ಮರಬದ ಇವರು ಠಾಣಾ ಸಿಬ್ಬಂದಿಯವರೊಂದಿಗೆ ಬೆಳಿಗ್ಗೆ ದಾಳಿ ಮಾಡಿ ಗಾಂಜಾ ಮಾರಾಟ ಮಾಡಲು ಬಂದಿದ್ದ ಆರೋಪಿಗಳಾದ ಕೊಡವೂರು ಲಕ್ಷ್ಮೀನಗರ ನಿವಾಸಿ ಅಭಿಷೇಕ್ ಪಾಲನ್ (30) ಮತ್ತು ಕೊಳಲಗಿರಿಯ ಆರ್.ಶಾಶ್ವತ್(24) ಎಂಬವರನ್ನು ಬಂಧಿಸಿದ್ದಾರೆ. ಶಿರ್ವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
