ಶಿರ್ವ: ಮೊಬೈಲಿನಲ್ಲಿರುವ ಗೂಗಲ್ ಪೇ ಗೆ ಹಣ ಜಮಾ ಆದ ಬಗ್ಗೆ ಅಪರಿಚಿತರು ಸಂದೇಶ ಕಳುಹಿಸಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಲ್ಲಿದ್ದ 2,49,299.73 ರೂ. ಹಣವನ್ನು ಅವರ ಖಾತೆಗೆ ವರ್ಗಾವಣೆ ಮಾಡಿ ವಂಚಿಸಿದ ಘಟನೆ ಕಳತ್ತೂರಿನಲ್ಲಿ ಸಂಭವಿಸಿದೆ. ಕಳತ್ತೂರು ಬರೆಬೆಟ್ಟು ಹೊಸ ಮನೆ ವಾಸು ಶೆಟ್ಟಿ (57) ವಂಚನೆಗೊಳಗಾದವರು.
ವಾಸು ಶೆಟ್ಟಿ ಅವರು ತನ್ನ ಹೆಸರಿನಲ್ಲಿ ಕೋ ಆಪರೇಟಿವ್ ಬ್ಯಾಂಕ್ ಒಂದರಲ್ಲಿ ಇಂಡಿವಿಜುವಲ್ ಕರೆಂಟ್ ಅಕೌಂಟ್ ಖಾತೆಯನ್ನು ಹೊಂದಿದ್ದರು. ತಮ್ಮ ಮೊಬೈಲ್ ನಂಬ್ರಕ್ಕೆ ಗೂಗಲ್ ಪೇ ಗೆ ಲಿಂಕ್ ಮಾಡಿ ಅದರ ಮೂಲಕ ಹಣಕಾಸಿನ ವ್ಯವಹಾರ ನಡೆಸುತ್ತಿದ್ದರು.
ನಂ.9 ರಂದು ಸಂಜೆ ತಮ್ಮ ಮನೆಯಲ್ಲಿ ಇರುವ ಸಮಯ ಗೂಗಲ್ ಪೇ ಗೆ ಹಣ ಜಮಾ ಆದ ಬಗ್ಗೆ ಸಂದೇಶ ಬಂದಿರುವುದನ್ನು ನೋಡಿದಾಗ GROWW VERIFICATION ಎಂಬ ಹೆಸರಿನಲ್ಲಿ 0.01 ಮೊತ್ತ ಜಮಾಗೊಂಡಿರುವುದು ಕಂಡು ಬಂದಿತ್ತು. ಅವರು ಈ ಸಂದೇಶವನ್ನು ತೆರೆದ ಬಳಿಕ ಸಂಜೆ your channel limit has been modified successfully and will be effective from 09/10/2026 ಎಂಬುದಾಗಿ ಸಂದೇಶ ಬಂದಿತ್ತು. ಬಳಿಕ ಅವರ ಖಾತೆಯಿಂದ ಕ್ರಮವಾಗಿ 1,25,091.15, 45,926.69 ರೂ., 40,966.82 ರೂ., 26,139.77 ರೂ. ಹಾಗೂ 6,175.30 ರೂ. ನಂತೆ ಒಟ್ಟು 2,49,299.73 ರೂ. ಕಡಿತಗೊಂಡಿತ್ತು. ವಾಸು ಶೆಟ್ಟಿ ಅವರು ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ.13ರಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಉಡುಪಿಗೆ ಭೇಟಿ ಉಡುಪಿ : ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್…
ನ.13ರಂದು ಬೆಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೊದಲ ದಿನದ ವೇಳಾಪಟ್ಟಿ ಪ್ರಕಟ ಉಡುಪಿ: ಯಶವಂತಪುರ ಜಂಕ್ಷನ್- ಮಡಗಾಂವ್ ಜಂಕ್ಷನ್ ನಡುವೆ…
ಜ. 6ರಿಂದ ಮತ್ಸ್ಯಗಂಧ ಸೂಪರ್‌ಫಾಸ್ಟ್ ರೈಲು ಎಕ್ಸ್‌ಪ್ರೆಸ್ ರೈಲಾಗಿ ಸಂಚಾರ ; ಟಿಕೆಟ್ ದರದಲ್ಲೂ ಕಡಿತ ಉಡುಪಿ: ಮುಂಬಯಿ ಲೋಕಮಾನ್ಯ ತಿಲಕ್…
ಬೆಳ್ತಂಗಡಿ : ಸರಣಿ ಅಪಘಾತ ; ಇಬ್ಬರು ದ್ವಿಚಕ್ರ ವಾಹನ ಸವಾರರು ಸಾವು ಬೆಳ್ತಂಗಡಿ : ಗೂಡ್ಸ್ ಟೆಂಪೋ ಹಾಗೂ…
ಹೆಜಮಾಡಿ : ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ: ನಾಲ್ವರು ಬಂಧನ ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಕಾಪು ತಾಲೂಕಿನ ಹೆಜಮಾಡಿ…
ಪೆರ್ಡೂರು ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣ ಸಿ.ಐ.ಡಿ ತನಿಖೆಗೆ ನೀಡಿರುವುದು ಸ್ವಾಗತಾರ್ಹ : ಗುರ್ಮೆ ಸುರೇಶ್ ಶೆಟ್ಟಿ ಕೆಲವು ದಿನಗಳ…