ಶಿರ್ವ : ಬೈಕ್‌ಗೆ ರಿಕ್ಷಾ ಢಿಕ್ಕಿ ; ಸವಾರ ಬಂಟಕಲ್ ಫ್ಯಾನ್ಸಿ ಸ್ಟೋರ್‌ ಮಾಲಕ  ಸಾವು – Vishwanews24

Featured, ಉಡುಪಿ

ಶಿರ್ವ : ಬೈಕ್‌ಗೆ ರಿಕ್ಷಾ ಢಿಕ್ಕಿ ; ಸವಾರ ಬಂಟಕಲ್ ಫ್ಯಾನ್ಸಿ ಸ್ಟೋರ್‌ ಮಾಲಕ  ಸಾವು

ಉಡುಪಿ : ಬೈಕ್‌ಗೆ ರಿಕ್ಷಾ ಢಿಕ್ಕಿ ಹೊಡೆದು ಬೈಕ್‌ ಸವಾರ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕಾಪು ಸಮೀಪ ಶಿರ್ವ ಪೊಲೀಸ್‌ ಠಾಣಾ ವ್ಯಾಪ್ತಿಯ ಬಂಟಕಲ್ಲು ಪೇಟೆಯಲ್ಲಿ ಗುರುವಾರ ಸಂಭವಿಸಿದೆ.

ಬಂಟಕಲ್ಲಿನ ಬೈದಶ್ರೀ ಫ್ಯಾನ್ಸಿ ಸ್ಟೋರ್‌ನ ಮಾಲಕ ಶಂಕರ ಕೋಟ್ಯಾನ್‌ (60) ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಮಧ್ಯಾಹ್ನ ಬೈಕ್‌ಗೆ ಪೆಟ್ರೋಲ್‌ ಹಾಕಲು ಪೆಟ್ರೋಲ್‌ ಪಂಪ್‌ಗೆ ತೆರಳುತ್ತಿದ್ದ ವೇಳೆ ಬಂಟಕಲ್ಲು ಪೇಟೆಯಲ್ಲಿನ ಬ್ಯಾರಿಕೇಡ್‌ ಬಳಿ ಶಂಕರಪುರ ಕಡೆಯಿಂದ ವೇಗವಾಗಿ ಬಂದ ರಿಕ್ಷಾ ಢಿಕ್ಕಿ ಹೊಡೆದಿದೆ.

ಮಂಗಳೂರು: ಪರೇಶ್ ಮೇಸ್ತ ಕೇಸ್ ಮರು ತನಿಖೆಗೆ ಮನವಿ : ಸಚಿವ ಕೋಟ – Vishwanews24

ಢಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಬೈಕ್‌ ಸವಾರ ಶಂಕರ್‌ ಕೋಟ್ಯಾನರನ್ನು ಸಾರ್ವಜನಿಕರು ಸೇರಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆದರೆ ತಲೆಗೆ ಗಂಭೀರ ಗಾಯಗೊಂಡ ಬೈಕ್‌ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಶಿರ್ವ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply