ಶಿರ್ವ : ರಸ್ತೆ ದಾಟಲು ನಿಂತಿದ್ದ ತಂದೆ ಮಗನಿಗೆ ಬೈಕ್ ಢಿಕ್ಕಿ ಹೊಡೆದು ತಂದೆ ಮೃತಪಟ್ಟು ಮಗ ಗಂಭೀರ ಗಾಯಗೊಂಡ ಘಟನೆ ಶಿರ್ವದ ಬಂಟಕಲ್ಲು ಪೇಟೆಯ ಆಶಾ ಕಾಂಪ್ಲೆಕ್ಸ್ ಬಳಿ ನಿನ್ನೆ ರಾತ್ರಿ ನಡೆದಿದೆ.
ಬಾಗಲಕೋಟೆ ಮೂಲದ ಶರಣಪ್ಪ ಬಾಲಪ್ಪ ಗಂಜಿಹಾಳ(40) ಮೃತಪಟ್ಟವರು. ಶ್ರವಣ ಕುಮಾರ(6) ಅಪಘಾತದಲ್ಲಿ ಗಾಯಗೊಂಡವರು.
ಶರಣಪ್ಪ ತನ್ನ ಪುತ್ರ ಶ್ರವಣಕುಮಾರನೊಂದಿಗೆ ಬುಧವಾರ ರಾತ್ರಿ 7 ಗಂಟೆ ಸುಮಾರಿಗೆ ದಿನಸಿ ತರಲು ಬಂಟಕಲ್ಲು ಪೇಟೆಯ ಆಶಾ ಕಾಂಪ್ಲೆಕ್ಸ್‌ನ ಎದುರುಗಡೆ ರಸ್ತೆ ಬದಿಯಲ್ಲಿ ನಿಂತಿದ್ದರು. ಈ ವೇಳೆ ಶಂಕರಪುರ ಕಡೆಯಿಂದ ವೇಗವಾಗಿ ಬಂದ ಬೈಕ್ ಸವಾರ ಇವರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಇಬ್ಬರನ್ನೂ ಸಾರ್ವಜನಿಕರು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ತಲೆಗೆ ಗಂಭೀರ ಗಾಯಗೊಂಡ ಶರಣಪ್ಪ ಅವರು ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾರೆ. ಶ್ರವಣ ಕುಮಾರ ಅವರು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದೆ.
ಡಿಕ್ಕಿ ಹೊಡೆದ ಬೈಕ್ ಸವಾರ ಬೈಕ್ ನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕುಂದಾಪುರ: ಬೈಕ್‌ಗಳ ನಡುವೆ ಅಪಘಾತ – ಪತಿ ಸಾವು , ಪತ್ನಿ ಗಂಭೀರ – Vishwanews24
ರೀಲ್ಸ್ ಮಾಡಲು ಹೋಗಿ ಸಮುದ್ರಪಾಲಾದ ಐಟಿ ಉದ್ಯೋಗಿ ಕಾರವಾರ: ರೀಲ್ಸ್ ಮಾಡಲು ಹೋಗಿ ಐಟಿ ಉದ್ಯೋಗಿಯೊಬ್ಬ ಸಮುದ್ರಪಾಲಾದ ಘಟನೆ ಉತ್ತರ…
ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್ ಚೆನ್ನೈ :ತಮಿಳುನಾಡು ಮುಖ್ಯಮಂತ್ರಿ, ನಟ ದಳಪತಿ…
ಕೊಡವೂರು: ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ ನಾಪತ್ತೆ ಮಲ್ಪೆ :ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ…
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ ಬೆಂಗಳೂರು: ಗೃಹಲಕ್ಷ್ಮಿ, ಗೃಹಜ್ಯೋತಿ ಯೊಜನೆಗಳಲ್ಲಿ ನಕಲಿ…
ಕಾಸರಗೋಡು: ಬೇಕಲ ಕಡಲತೀರದಲ್ಲಿ ಸಮುದ್ರಪಾಲಾದ ಕೊಟ್ಟಾಯಂನ ಇಬ್ಬರು ವಿದ್ಯಾರ್ಥಿಗಳು; ಮತ್ತಿಬ್ಬರ ರಕ್ಷಣೆ ಕಾಸರಗೋಡು: ಬೇಕಲ ಕೋಟೆಯ ಸಮೀಪವಿರುವ ಪಳ್ಳಿಕೆರೆ ಕಡಲತೀರದಲ್ಲಿ…
ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮುಂಬೈ: ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ…