ಶಿರ್ವ : ಸಮಸ್ಯೆಯಿಂದ ಬಳಲುತ್ತಿರುವ 16 ವರ್ಷದ ಯುವಕನಿಗೆ ಬೇಕಾಗಿದೆ ನೆರವಿನ ಸಹಾಯ ಹಸ್ತ – vishwanews24
ಶಿರ್ವ : ಆರ್ಥಿಕ ಸಂಕಷ್ಟದಲ್ಲಿರುವ 16 ವರ್ಷದ ಯುವಕನಿಗೆ ಬೇಕಾಗಿದೆ ನೆರವಿನ ಸಹಾಯ ಹಸ್ತ
ಉಡುಪಿ ಜಿಲ್ಲೆ ಕಾಪು ತಾಲೂಕು ಶಿರ್ವ ಗ್ರಾಮದ ಮಟ್ಟಾರು ಕಡಂಬು ಹದಿನಾರು ವರ್ಷ ವಯಸ್ಸಿನ ದೀಕ್ಷಿತ್ ಕುಮಾರ್ ಅಪಸ್ಮಾರ ಕಾಯಿಲೆಯಿಂದ ತೀರ ಬಳಲುತ್ತಿದ್ದು ಮಂಗಳೂರು ಕದ್ರಿ ಡಾ. ಎನ್ ಶಂಕರ್ ಇವರಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಸ್ಪೆಷಾಲಿಟಿ ಹೆಲ್ತ್ ಕೇರ್ ಡಾಕ್ಟರ್ ರಾಘವೇಂದ್ರ ಎಸ್ ಇವರಲ್ಲಿ ಕಳುಹಿಸಿದ್ದು ಪ್ರಸ್ತುತ ಚಿಕಿತ್ಸೆಯನ್ನು ಪಡೆಯುತ್ತಿದ್ದು ತಲೆಯ ಚಿಕಿತ್ಸೆಗೆ 11 ಲಕ್ಷ ವೆಚ್ಚವಾಗುತ್ತಿತ್ತು ದೈಹಿಕ ಅಂಗವಿಕಲನಾದ ಈತ ಈ ಮೊದಲೇ ಔಷದೋಪಚಾರಕ್ಕೆ ಹಲವಾರು ಲಕ್ಷ ಖರ್ಚು ವೆಚ್ಚವಾಗಿದ್ದು ಆರ್ಥಿಕ ಸಂಕಷ್ಟದಲ್ಲಿರುವ ಯುವಕನಿಗೆ ಸಹೃದಯಿ ಎಲ್ಲ ಸಮಾಜ ಬಾಂಧವರು ದಯವಿಟ್ಟು ತಮ್ಮ ಕೈಲಾದಷ್ಟು ಧನ ಸಹಾಯವನ್ನು ನೀಡಿ.

