Featured

ಶಿವಧೂತೆ ಗುಳಿಗೆ ನಾಟಕದ ಬಗ್ಗೆ ಅರಗ ಜ್ಞಾನೇಂದ್ರ ವ್ಯಂಗ್ಯ ಹೇಳಿಕೆ  : ಸಾಮಾಜಿಕ ಜಾಲತಾಣದಲ್ಲಿ ವೈರಲ್ – Vishwanews24

ಶಿವಧೂತೆ ಗುಳಿಗೆ ನಾಟಕದ ಬಗ್ಗೆ ಅರಗ ಜ್ಞಾನೇಂದ್ರ ವ್ಯಂಗ್ಯ ಹೇಳಿಕೆ  : ಸಾಮಾಜಿಕ ಜಾಲತಾಣದಲ್ಲಿ ವೈರಲ್

ತೀರ್ಥಹಳ್ಳಿ : ಕರಾವಳಿಯ ಉಭಯ ಜಿಲ್ಲೆಗಳ ಆರಾಧ್ಯ ದೈವವಾದ ಗುಳಿಗ ದೈವದ ಆಧಾರಿತ “ಶಿವಧೂತೆ ಗುಳಿಗೆ” ನಾಟಕದ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ನೀಡಿರುವ ವ್ಯಂಗ್ಯವಾದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತೀರ್ಥಹಳ್ಳಿಯ ಎಪಿಎಂಸಿ ಸಮೀಪ ನಡೆದ ರೈತ ಮೋರ್ಚಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಗೃಹಸಚಿವರು ಹತ್ತು ಹಲವು ವಿಚಾರಗಳನ್ನು ಪ್ರಸ್ತಾಪಿಸಿ “ಮಹಿಳೆಯರ ಕಿವಿ ಮೇಲೆ ಜಾಗವೇ ಇಲ್ಲ. ತೊಗೊಂಡು ಹೋಗಿ ಮನೆ ಮನೆಗೆ ಗ್ಯಾರಂಟಿ ಕಾರ್ಡ್‌ ಕೊಟ್ಟಿದ್ದಾರೆ. ಇಲ್ಲಿ ನಾನು ನೋಡಿದೆ ನಿನ್ನೆಯಿಂದ ಎಂಥದೋ ಗುಳಿಗೆ, ಗುಳಿಗೆ ಅಂತ ಹಾಕಿದ್ದಾರೆ. ವಾಲ್‌ ಪೋಸ್ಟ್‌ನಲ್ಲಿ ನಿನ್ನೆ ರಾತ್ರಿ ಎಂಥದೋ ನಾಟಕ. ಬಹಳ ಅಪಾಯ. ಇವರು ಯಾವ ಗುಳಿಗೆ ಕೊಡ್ತಾರೆ ಅಂಥ ಗೊತ್ತಿಲ್ಲ. ಜಾಪಾಳ್‌ ಮಾತ್ರೆ ಗುಳಿಗೆ ಕೊಟ್ರು ಕೊಡಬಹುದು. ಏಕೆಂದರೆ ಇವರು ಹೊಸ ಹೊಸ ನಾಟಕಗಳನ್ನು ಶುರುಮಾಡಿದ್ದಾರೆ” ಎಂದು ಹೇಳಿ ದಕ್ಷಿಣ ಕನ್ನಡ ಜಿಲ್ಲೆಯಿಂದ ವಲಸಿಗರಾಗಿ ತೀರ್ಥಹಳ್ಳಿಯಲ್ಲಿ ನೆಲೆಸಿರುವವರನ್ನು ಪರೋಕ್ಷವಾಗಿ ಆರಗ ಜ್ಞಾನೇಂದ್ರ ನಿಂದಿಸಿದರೆ ಎಂಬ ಚರ್ಚೆ ಇದೀಗ ಆರಂಭವಾಗಿದೆ.

ಆರಗ ಜ್ಞಾನೇಂದ್ರರ ಬದ್ಧ ರಾಜಕೀಯ ವೈರಿ ಕಿಮ್ಮನೆ ರತ್ನಾಕರ್‌ ಸಾರಥ್ಯದಲ್ಲಿ ನಡೆದಿದ್ದು, ಶ್ರದ್ಧಾ ಭಕ್ತಿಯಿಂದ ಆದಾಧಿಸುವ ದೈವವನ್ನು ಗೃಹ ಸಚಿವರು ಗುಳಿಗೆ ಎಂದು ಅಸಹನೆ, ವ್ಯಂಗ್ಯದಿಂದ ಮಾತನಾಡಿರುವುದು ಇಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ತೀರ್ಥಹಳ್ಳಿಯ ಸಾರ್ವಜನಿಕ ಕ್ರೀಡಾಂಗಣದಲ್ಲಿ ತುಳು ನಾಟಕ ರಂಗದಲ್ಲಿ ಹೊಸ ಅಲೆ ಎಬ್ಬಿಸಿರುವ ವಿಜಯಕುಮಾರ್‌ ಕೋಡಿಯಾಲಬೈಲು ನಿರ್ದೇಶನದ “ಶಿವದೂತೆ ಗುಳಿಗೆ” ಎಂಬ ತುಳು ನಾಟಕ ಏಳೆಂಟು ಸಾವಿರ ಪ್ರೇಕ್ಷಕರೆದುರು ಪ್ರದರ್ಶನಗೊಂಡು ದಾಖಲೆ ಬರೆದಿದೆ.

Vishwa News 24

Recent Posts

ಪಡುಬಿದ್ರಿ : ಉದ್ಯಮಿ ಇನ್ನಾ ಉದಯ ಶೆಟ್ಟಿ ನಿಧನ – vishwanews24

ಪಡುಬಿದ್ರಿ : ಉದ್ಯಮಿ ಇನ್ನಾ ಉದಯ ಶೆಟ್ಟಿ ನಿಧನ ಪಡುಬಿದ್ರೆ: ಉದ್ಯಮಿ ಇನ್ನಾ ಉದಯ ಶೆಟ್ಟಿ(50) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ…

16 hours ago

ಯೋಗೀಶ್‌ ಗೌಡ ಕೊಲೆ ಪ್ರಕರಣ : ವಿನಯ್‌ ಕುಲಕರ್ಣಿ ಸೇರಿ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ – vishwanews24

ಯೋಗೀಶ್‌ ಗೌಡ ಕೊಲೆ ಪ್ರಕರಣ : ವಿನಯ್‌ ಕುಲಕರ್ಣಿ ಸೇರಿ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಬೆಂಗಳೂರು: ಯೋಗೇಶ್ ಗೌಡ…

19 hours ago

ಜಮೀರ್ ಅಹ್ಮದ್ ಅವರು ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದಿದ್ದಾರೆ : ಯತೀಂದ್ರ ಸಿದ್ದರಾಮಯ್ಯ – vishwanews24

ಜಮೀರ್ ಅಹ್ಮದ್ ಅವರು ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದಿದ್ದಾರೆ : ಯತೀಂದ್ರ ಸಿದ್ದರಾಮಯ್ಯ ಬೆಳಗಾವಿ : ಜಮೀರ್ ಅಹ್ಮದ್ ಅವರು ನಮ್ಮ…

20 hours ago

ಮಂಗಳೂರು: 16 ವರ್ಷದ ಬಾಲಕಿ ನಾಪತ್ತೆ; ಪೊಲೀಸರಿಂದ ಲುಕ್‌ಔಟ್ ನೋಟಿಸ್ ಜಾರಿ – vishwanews24

ಮಂಗಳೂರು: 16 ವರ್ಷದ ಬಾಲಕಿ ನಾಪತ್ತೆ; ಪೊಲೀಸರಿಂದ ಲುಕ್‌ಔಟ್ ನೋಟಿಸ್ ಜಾರಿ ಮಂಗಳೂರು: ಕೊಣಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪಜೀರು…

20 hours ago

ಪಡುಬಿದ್ರಿ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ : ಪೂರ್ವಭಾವಿ ಸಭೆ – vishwanews24

ಪಡುಬಿದ್ರಿ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ : ಪೂರ್ವಭಾವಿ ಸಭೆ ಪಡುಬಿದ್ರಿ: ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರ ಬ್ರಹ್ಮಕಲಾಶೋತ್ಸವದ ಪ್ರಯುಕ್ತ…

22 hours ago

ಯಾದಗಿರಿ: ಬಸ್- ಕಾರು ಮಧ್ಯೆ ಭೀಕರ ಅಪಘಾತ; 6 ಮಂದಿ ಸಜೀವ ದಹನ – vishwanews24

ಯಾದಗಿರಿ: ಬಸ್- ಕಾರು ಮಧ್ಯೆ ಭೀಕರ ಅಪಘಾತ; 6 ಮಂದಿ ಸಜೀವ ದಹನ ಸುರಪುರ : ಬಸ್ ಮತ್ತು ಕಾರಿನ…

23 hours ago