ಶಿವಮೊಗ್ಗದಲ್ಲಿ ಶಾಲಾ ಬಾಲಕನ ಹತ್ಯೆ ಪ್ರಕರಣ ; ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ : ಪರಮೇಶ್ವರ್ – vishwanews24
ಶಿವಮೊಗ್ಗದಲ್ಲಿ ಶಾಲಾ ಬಾಲಕನ ಹತ್ಯೆ ಪ್ರಕರಣ – ಪರಿಸ್ಥಿತಿ ನಿಯಂತ್ರಣದಲ್ಲಿದೆ : ಪರಮೇಶ್ವರ್
ಬೆಂಗಳೂರು : ಶಿವಮೊಗ್ಗದಲ್ಲಿ ಶಾಲಾ ಬಾಲಕನ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮುಂಜಾಗರೂಕತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಾಹಿತಿ ನೀಡಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಘಟನೆಯ ಹಿನ್ನೆಲೆಯಲ್ಲಿ ಕಾನೂನು ಚೌಕಟ್ಟಿನಲ್ಲಿ ಏನು ಮಾಡಬೇಕೋ ಅದನ್ನು ಮಾಡಿದ್ದೇವೆ. ಹೀಗಾಗಿ ಜನರು ಶಾಂತಿಯನ್ನು ಕಾಪಾಡಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಘಟನೆಗೆ ಕಾರಣ ಏನು ಎಂಬುವುದನ್ನು ವಿವರಿಸಿದ ಪರಮೇಶ್ವರ್, ‘ಹಿಂದೆ ಇದೇ ಹುಡುಗರು ಗಲಾಟೆ ಮಾಡಿಕೊಂಡಿದ್ದರು. ಮತ್ತೆ ಯಾವ ಕಾರಣಕ್ಕೆ ಘರ್ಷಣೆ ಆಯ್ತು ಅಂತಾ ಗೊತ್ತಾಗಿಲ್ಲ, ಆದ್ರೆ ಹೊಡೆದಾಡಿಕೊಂಡಿದ್ದಾರೆ. ಕೈಯಿಂದ ಎದೆಭಾಗಕ್ಕೆ ಹೊಡೆದ ಪರಿಣಾಮ ಬಾಲಕ ಸಂಕೇತ್ ಮೃತಪಟ್ಟಿದ್ದಾನೆ ಎಂದು ವಿವರಿಸಿದರು.
ಇದನ್ನೂ ಓದಿ : 👇
ಮಂಗಳೂರು: ಪಾಂಡೇಶ್ವರ ಅಗ್ನಿಶಾಮಕ ಚಾಲಕ ಕಾರ್ತಿಕ್ ಗೆ ಮುಖ್ಯಮಂತ್ರಿಗಳ ಚಿನ್ನದ ಪದಕ – vishwanews24
ಶಿವಮೊಗ್ಗದ ಸುಲೇಬೈಲು ಸರ್ಕಾರಿ ಶಾಲೆಯ ಹೊರಗಡೆ ಈ ಘಟನೆ ನಡೆದಿದೆ. 16 ವರ್ಷದ ಬಾಲಕ ಸಂಕೇಶ್ ಕೊಲೆಯಾಗಿದೆ. ಸಂಕೇತ್ ಹಾಗೂ ಹುಡುಗರ ಗುಂಪು ನಡುವೆ ಜಗಳ ಆಗಿತ್ತು. ಈ ಸಂದರ್ಭದಲ್ಲಿ ಎದೆಯ ಭಾಗಕ್ಕೆ ಹೊಡೆದ ಪರಿಣಾಮ ಸಂಕೇತ್ ಸಾವನ್ನಪ್ಪಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ವಯಸ್ಸಿನ ಬಾಲಕರ ಬಂಧನ ಆಗಿದೆ.
