ಶಿವಮೊಗ್ಗ ಗಲಭೆ ಪ್ರಕರಣ : ಉಡುಪಿ ನಗರದಲ್ಲಿ ಪೊಲೀಸ್​​ ಪಥಸಂಚಲನ – Vishwanews24

Featured, ಉಡುಪಿ

ಶಿವಮೊಗ್ಗ ಗಲಭೆ ಹಿನ್ನಲೆಯಲ್ಲಿ ಜನರಲ್ಲಿ ಧೈರ್ಯ ಮೂಡಿಸಲು ಪೊಲೀಸರಿಂದ ರೂಟ್‌ ಮಾರ್ಚ್‌ 

ಜಿಲ್ಲೆಯಲ್ಲಿ ಯಾವುದೇ ರೀತಿಯ ಘಟನೆಗಳೂ ನಡೆಯದಂತೆ, ಯಾವುದೇ ರೀತಿಯ ಸವಾಲುಗಳನ್ನು ಎದುರಿಸಲು ಪೊಲೀಸ್ ಇಲಾಖೆ ಸಿದ್ಧ ..

 ಪೊಲೀಸ್‌ ವರಿಷ್ಠಾಧಿಕಾರಿ ಎನ್‌ ವಿಷ್ಣುವರ್ಧನ್‌

ಉಡುಪಿ: ಹಿಜಾಬ್ ವಿವಾದ ಮತ್ತು ಶಿವಮೊಗ್ಗದಲ್ಲಿ ನಡೆದ ಗಲಭೆ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರು ರೂಟ್ ಮಾರ್ಚ್ ನಡೆಸಿದರು.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಗಾಗಿ ನಗರದ ಜೋಡುಕಟ್ಟೆಯಿಂದ ಹೊರಟು ಪ್ರಮುಖ ಬೀದಿಗಳಲ್ಲಿ ರೂಟ್‌ ಮಾರ್ಚ್‌ ನಡೆಸಲಾಯಿತು. ಇದರಲ್ಲಿ 90 ಮಂದಿ ಕ್ಷಿಪ್ರ ಕಾರ್ಯಾಚರಣೆ ಪಡೆಯ ಸಿಬಂದಿ ಸೇರಿದಂತೆ ಇನ್ನೂರಕ್ಕೂ ಅಧಿಕ ಜಿಲ್ಲಾ ಪೊಲೀಸ್‌ ಸಿಬಂದಿಗಳು ಪಥಸಂಚಲನ ನಡೆಸಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌ ವಿಷ್ಣುವರ್ಧನ್‌ ಅವರು ಶಿವಮೊಗ್ಗ ಗಲಭೆ ಹಿನ್ನಲೆಯಲ್ಲಿ ಜನರಲ್ಲಿ ಧೈರ್ಯ ಮೂಡಿಸಲು ಪೊಲೀಸರಿಂದ ರೂಟ್‌ ಮಾರ್ಚ್‌ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ಘಟನೆಗಳೂ ನಡೆಯದಂತೆ, ಅಲ್ಲದೆ ಯಾವುದೇ ರೀತಿಯ ಸವಾಲುಗಳನ್ನು ಎದುರಿಸಲು ಪೊಲೀಸ್ ಇಲಾಖೆ ಸಿದ್ಧವಾಗಿದೆ, ಕಾನೂನು ಸುವ್ಯವಸ್ಥೆ ಗಳ ಬಗ್ಗೆ ಜನರಿಗೆ ಆತಂಕಬೇಡ ಎಂದು ಹೇಳಿದರು.

ಈ ವೇಳೆ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ, ಡಿವೈಎಸ್ಪಿ ಸುಧಾಕರ ನಾಯ್ಕ್‌, ರಾಘವೇಂದ್ರ, ಪಿಐ ರಾಘವೇಂದ್ರ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದರು.

ಇದನ್ನೂ ಓದಿ :

ಸಮಾಜಕ್ಕೆ ಬೇಕಿರುವುದು ಧರ್ಮದ ಶಾಂತಿ ಸಂದೇಶವೇ ಹೊರತು ಕೊಚ್ಚು, ಕೊಲ್ಲು ಸಂಸ್ಕಾರವಲ್ಲ : ದಿನೇಶ್ ಗುಂಡೂರಾವ್ – Vishwanews24

 

Leave a Reply